ಭಾರತದಿಂದ ಅಫ್ಘಾನಿಸ್ತಾನಕ್ಕೆ 3000 ಮೆಟ್ರಿಕ್ ಟನ್ ಗೋಧಿ ರವಾನೆ

ನವದೆಹಲಿ: ಶನಿವಾರದಂದು ಭಾರತವು 3,000 ಮೆಟ್ರಿಕ್ ಟನ್ ಗೋಧಿಯನ್ನು ಮತ್ತೊಮ್ಮೆ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆ ಅಚಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಇಲ್ಲಿಯವರೆಗೆ, ಭಾರತವು ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 33,500 ಮೆಟ್ರಿಕ್ ಟನ್ ಗೋಧಿ ಸಾಗಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಯುಜಿಸಿ-ಎನ್ ಇ ಟಿ 2022 ಪರೀಕ್ಷೆಗಳ ದಿನಾಂಕ ಪ್ರಕಟ: ಜುಲೈ 8 ರಿಂದ ಆಗಸ್ಟ್ 14 ರವರೆಗೆ ಪರೀಕ್ಷೆ

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ-ಎನ್ ಇ ಟಿ) 2022 ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಯುಜಿಸಿ-ಎನ್ ಇ ಟಿ ಡಿಸೆಂಬರ್ 2021 ಮತ್ತು ಜೂನ್ 2022 ರ ಪರೀಕ್ಷಾ ದಿನಾಂಕಗಳನ್ನು ಈ ವರ್ಷ ವಿಲೀನಗೊಳಿಸಲಾಗಿದೆ. ಪರೀಕ್ಷೆಯು ಜುಲೈ 8 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 14 ರಂದು ಮುಕ್ತಾಯಗೊಳ್ಳುತ್ತದೆ. ಈ ಕುರಿತು ಟ್ವೀಟ್ ಮಾಡಿರುವ ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್, ದಿನಾಂಕಗಳ ಬಗ್ಗೆ ವಿವರವಾದ ಸೂಚನೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ […]

ಭೂಕಂಪ ಹಿನ್ನೆಲೆ: ಅಫ್ಘಾನಿಸ್ತಾನದ ನಾಗರಿಕರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದ ಭಾರತ

ನವದೆಹಲಿ: ಸುಮಾರು 1000 ಕ್ಕೂ ಹೆಚ್ಚು ನಾಗರಿಕರ ಪ್ರಾಣ ಕಿತ್ತುಕೊಂಡ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ನೆರವನ್ನು ಭಾರತವು ರವಾನಿಸಿದೆ. ಪರಿಹಾರ ನೆರವು ಕುಟುಂಬ ರಿಡ್ಜ್ ಟೆಂಟ್‌ಗಳು, ಮಲಗುವ ಚೀಲಗಳು, ಹೊದಿಕೆಗಳು ಮತ್ತು ಮಲಗುವ ಮ್ಯಾಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಪರಿಹಾರ ಸರಕನ್ನು ಕಾಬೂಲ್‌ನಲ್ಲಿರುವ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಭಾರತವು […]

2023 ರಲ್ಲಿ ಜಿ-20 ಶೃಂಗ ಸಭೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜನೆ

ಜಮ್ಮು: ವಿಶ್ವದ ಪ್ರಮುಖ ಆರ್ಥಿಕ ದೇಶಗಳ ಪ್ರಭಾವಿ ಗುಂಪಾದ ಜಿ-20 ಯ 2023 ನೇ ಸಾಲಿನ ಸಭೆಗಳನ್ನು ಜಮ್ಮು ಮತ್ತು ಕಾಶ್ಮೀರವು ಆಯೋಜಿಸಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ಜಿ-20 ಸಭೆಗಳ ಒಟ್ಟಾರೆ ಸಮನ್ವಯಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ. ಸೆಪ್ಟೆಂಬರ್ 2021ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಜಿ-20 ಸಭೆಗೆ ಭಾರತದ ಶೆರ್ಪಾ ಆಗಿ ನೇಮಿಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತವು ಡಿಸೆಂಬರ್ […]

ಬಾಡಿಗೆ ತಾಯ್ತನದಿಂದ ಪೋಷಕರಾಗಲು ಬಯಸುವವರು ಬಾಡಿಗೆ ತಾಯಂದಿರಿಗೆ 3 ವರ್ಷಗಳ ಆರೋಗ್ಯ ವಿಮೆ ಮಾಡಿಸುವುದು ಕಡ್ಡಾಯ

ನವದೆಹಲಿ: ಇತ್ತೀಚೆಗೆ ಹೊರಡಿಸಲಾದ ಬಾಡಿಗೆ ತಾಯ್ತನ (ನಿಯಂತ್ರಣ) ನಿಯಮಗಳ ಪ್ರಕಾರ, ಪೋಷಕರಾಗಲು ಬಾಡಿಗೆ ತಾಯ್ತನದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿರುವ ದಂಪತಿಗಳು ಬಾಡಿಗೆ ತಾಯಿಯ ಪರವಾಗಿ 36 ತಿಂಗಳ ಅವಧಿಗೆ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಬೇಕಾಗುತ್ತದೆ. ವಿಮಾ ಮೊತ್ತವು ಗರ್ಭಾವಸ್ಥೆಯಿಂದ ಉಂಟಾಗುವ ಎಲ್ಲಾ ತೊಡಕುಗಳು ಮತ್ತು ಪ್ರಸವಾನಂತರದ ಹೆರಿಗೆಯ ತೊಡಕುಗಳ ವೆಚ್ಚವನ್ನು ಸರಿದೂಗಿಸಲು ಸಾಕಾಗುತ್ತದೆ. ಜೂನ್ 21 ರಂದು ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದ ನಿಯಮಗಳ ಪ್ರಕಾರ, ಬಾಡಿಗೆ ತಾಯಿಯ ಮೇಲೆ ಯಾವುದೇ ಬಾಡಿಗೆ ತಾಯ್ತನದ […]