ಯುಜಿಸಿ-ಎನ್ ಇ ಟಿ 2022 ಪರೀಕ್ಷೆಗಳ ದಿನಾಂಕ ಪ್ರಕಟ: ಜುಲೈ 8 ರಿಂದ ಆಗಸ್ಟ್ 14 ರವರೆಗೆ ಪರೀಕ್ಷೆ

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ-ಎನ್ ಇ ಟಿ) 2022 ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಯುಜಿಸಿ-ಎನ್ ಇ ಟಿ ಡಿಸೆಂಬರ್ 2021 ಮತ್ತು ಜೂನ್ 2022 ರ ಪರೀಕ್ಷಾ ದಿನಾಂಕಗಳನ್ನು ಈ ವರ್ಷ ವಿಲೀನಗೊಳಿಸಲಾಗಿದೆ.

ಪರೀಕ್ಷೆಯು ಜುಲೈ 8 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 14 ರಂದು ಮುಕ್ತಾಯಗೊಳ್ಳುತ್ತದೆ. ಈ ಕುರಿತು ಟ್ವೀಟ್ ಮಾಡಿರುವ ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್, ದಿನಾಂಕಗಳ ಬಗ್ಗೆ ವಿವರವಾದ ಸೂಚನೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿ ಎ)ಯ ಅಧಿಕೃತ ವೆಬ್‌ಸೈಟ್ nta.nic.in ನಲ್ಲಿ ಪ್ರಕಟಿಸಲಾಗುವುದು ಎಂದಿದ್ದಾರೆ.