ಎಡಪಂಥೀಯ ಉಗ್ರವಾದದ ಪ್ರಮಾಣದಲ್ಲಿ ಗಣನೀಯ ಇಳಿಕೆ: ಉಗ್ರವಾದದ ವಿರುದ್ದ ಶೂನ್ಯ ನೀತಿಗೆ ದೊರೆತ ಫಲ

ನವದೆಹಲಿ: ಮೂರು ದಶಕಗಳಿಂದ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಜಾರ್ಖಂಡ್‌ನ ಬುಧಾ ಪಹಾಡ್ ಅನ್ನು ಇದೀಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಮತ್ತು ಭದ್ರತಾ ಪಡೆಗಳ ಶಾಶ್ವತ ನೆಲೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್ ಹೇಳಿದ್ದಾರೆ. ಎಡಪಂಥೀಯ ಉಗ್ರವಾದದ ವಿರುದ್ಧ (ಎಲ್‌ಡಬ್ಲ್ಯುಇ) ಭದ್ರತಾ ಪಡೆಗಳು ಸಾಧಿಸಿದ ಯಶಸ್ಸಿನ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಭದ್ರತಾ ಪಡೆಗಳ ಶಿಬಿರಗಳನ್ನು ಸ್ಥಾಪಿಸಲು ಮತ್ತು ಪ್ರದೇಶವನ್ನು ನಿಯಂತ್ರಣಕ್ಕೆ ತರಲು ಈ ವರ್ಷದ ಏಪ್ರಿಲ್‌ನಿಂದ ಬುಧಾ ಪಹಾಡ್‌ನಲ್ಲಿ […]

ಜಾನುವಾರುಗಳಲ್ಲಿ ಹರಡುತ್ತಿದೆ ಮುದ್ದೆಚರ್ಮ ರೋಗ: ಮಾರಕ ರೋಗದಿಂದ ಪ್ರಾಣತೆರುತ್ತಿರುವ ಹಸುಗಳು

ನವದೆಹಲಿ: ಭಾರತದ ಎಂಟು ರಾಜ್ಯಗಳಲ್ಲಿ ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗವು ವೇಗವಾಗಿ ಹರಡುತ್ತಿರುವುದರಿಂದ ಜುಲೈನಿಂದ 85,000 ಜಾನುವಾರುಗಳು ಸಾವನ್ನಪ್ಪಿವೆ ಮತ್ತು 2 ಲಕ್ಷಕ್ಕೂ ಅಧಿಕ ಹಸುಗಳಲ್ಲಿ ಸೋಂಕು ಕಂಡುಬಂದಿದೆ ಎನ್ನಲಾಗಿದೆ. ವೈರಾಣು ಕಾಯಿಲೆಯ ಏಕಾಏಕಿ ಏರಿಕೆಯು ದೇಶದಲ್ಲಿ ಜಾನುವಾರುಗಳಿಗಾಗಿ ಬೃಹತ್ ಚುಚ್ಚುಮದ್ದು ಅಭಿಯಾನವನ್ನು ಅನ್ನು ಪ್ರೇರೇಪಿಸಿದೆ. ಮುದ್ದೆ ಚರ್ಮ ರೋಗದ ಲಕ್ಷಣಗಳು 1. ವೈರಾಣು ರೋಗ- ಮುದ್ದೆ ಚರ್ಮ ರೋಗ- ಮುಖ್ಯವಾಗಿ ಹಸುಗಳ ಮೇಲೆ ಪರಿಣಾಮ ಬೀರುತ್ತದೆ. ಈ ವೈರಸ್ ಪಾಕ್ಸ್‌ವಿರಿಡೆ ಕುಟುಂಬದ ಕ್ಯಾಪ್ರಿಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ. […]

ಉಜ್ಜಯಿನಿ ಮಹಾಕಾಲೇಶ್ವರ ಮಂದಿರ ಕಾರಿಡಾರ್ ಅಭಿವೃದ್ದಿ ಯೋಜನೆಯ ಮೊದಲನೆ ಹಂತ ಪೂರ್ಣ: ಮಂತ್ರಮುಗ್ದಗೊಳಿಸುವ ಮಂದಿರದ ಮೊದಲ ನೋಟ

ಭೋಪಾಲ್: ಉಜ್ಜಯಿನಿಯಲ್ಲಿ 750 ಕೋಟಿ ರೂಪಾಯಿ ವೆಚ್ಚದ ಮಹಾಕಾಲೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ತಿಳಿಸಿದ್ದಾರೆ. ಸಂಪೂರ್ಣ ಕಾಮಗಾರಿಯನ್ನು ಪರಿಶೀಲಿಸಿದ ಚೌಹಾಣ್, ಮೊದಲ ಹಂತವನ್ನು 316 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಹಾಕಾಲೇಶ್ವರ ಕಾರಿಡಾರ್‌ನ ಮೊದಲ ಹಂತದ ಭಾಗವಾಗಿ ಅಭಿವೃದ್ಧಿ ಪಡಿಸಿದ ಮೂಲಸೌಕರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ದೇಶಕ್ಕೆ […]

ಶ್ರೀಲಂಕಾಕ್ಕೆ ದ್ವಿಪಕ್ಷೀಯ ಸಾಲ ನೀಡುವಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ಶ್ರೀಲಂಕಾಕ್ಕೆ ಅತಿದೊಡ್ಡ ದ್ವಿಪಕ್ಷೀಯ ಸಾಲ ನೀಡುವ ದೇಶವಾಗಿ ಹೊರಹೊಮ್ಮಿದೆ. 2022 ರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಒಟ್ಟು 968 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಿದೆ. 2017 ರಿಂದ 2021 ರವರೆಗೆ ಕಳೆದ ಐದು ವರ್ಷಗಳಲ್ಲಿ, ಚೀನಾ ಅತಿದೊಡ್ಡ ದ್ವಿಪಕ್ಷೀಯ ಸಾಲದಾತನಾಗಿತ್ತು. ಭಾರತವು ಶ್ರೀಲಂಕಾಕ್ಕೆ ಸುಮಾರು 4 ಬಿಲಿಯನ್ ಡಾಲರ್ ಆಹಾರ ಮತ್ತು ಆರ್ಥಿಕ ನೆರವು ನೀಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ […]

ಶೀಘ್ರದಲ್ಲೇ ಅಂಬೇಡ್ಕರ್ ಟೂರಿಸ್ಟ್ ಸರ್ಕ್ಯೂಟ್ ಪ್ರಾರಂಭ: ಕಿಶನ್ ರೆಡ್ಡಿ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮೊದಲು ಕೇಂದ್ರವು ಹೊಸ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ತರಲಿದೆ. ಭಾನುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಈ ವಿಷಯ ತಿಳಿಸಿದ್ದಾರೆ. ಎಲ್ಲ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಯ ನಂತರ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಜಿ 20 ಜಾಗತಿಕ ಶೃಂಗಸಭೆಯನ್ನು ಭಾರತ ಆಯೋಜಿಸಲಿದ್ದು,ಈ ಸಂದರ್ಭದಲ್ಲಿ ರಾಜ್ಯ […]