ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಲು ದೌಡಾಯಿಸಿದ ಪ್ರಧಾನಿ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರನ್ನು ಮಂಗಳವಾರ ರಾತ್ರಿ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ತಾಯಿಯ ಆರೋಗ್ಯ ವಿಚಾರಿಸಲು ಪ್ರಧಾನಿ ಮೋದಿ ಅಹಮದಾಬಾದಿಗೆ ದೌಡಾಯಿಸಿದ್ದಾರೆ. #WATCH | PM Modi arrives at UN Mehta Institute of Cardiology & Research Centre in Ahmedabad where his mother Heeraben Modi is admitted As per the hospital, her […]

ಭಾರತದಾದ್ಯಂತ ಜಿಯೋ ನೆಟ್‌ವರ್ಕ್ ಡೌನ್: ಸಂಪರ್ಕ ಸಿಗುತ್ತಿಲ್ಲವೆಂದಾದಲ್ಲಿ ಹೀಗೆ ಮಾಡಿ ನೋಡಿ

ನವದೆಹಲಿ: ಭಾರತದಾದ್ಯಂತ ರಿಲಯನ್ಸ್ ಜಿಯೋ ಮೊಬೈಲ್ ಮತ್ತು ಜಿಯೋ ಫೈಬರ್ ಸೇವೆಗಳು ಡೌನ್ ಆಗಿವೆ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ. ಅನೇಕ ಜಿಯೋ ಚಂದಾದಾರರು ಟ್ವಿಟರ್‌ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡು, ಜಿಯೋ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ, ಅನೇಕ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರು ಕೂಡಾ ಮನೆಯಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಡೌನ್ ಡಿಟೆಕ್ಟರ್ ಪ್ರಕಾರ, ಜಿಯೋ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ […]

ಮೂಗಿನ ಕೋವಿಡ್ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ 800 ರೂ, ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗೆ ಲಭ್ಯ

ನವದೆಹಲಿ: ಭಾರತ್ ಬಯೋಟೆಕ್ ನ ಮೂಗಿನ ಕೋವಿಡ್ ಲಸಿಕೆ ಇಂಕೋವಾಕ್ ಬೆಲೆಗಳನ್ನು ಕೇಂದ್ರ ಸರಕಾರವು ಮಂಗಳವಾರ ನಿಗದಿಪಡಿಸಿದೆ. ಮೂಗಿನ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಉಪಯೋಗಿಸಬಹುದಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗಳಿಗೆ ಲಭ್ಯವಿರಲಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಜನವರಿ ನಾಲ್ಕನೇ ವಾರದಿಂದ ದೇಶಾದ್ಯಂತ ಇಂಕೋವಾಕ್ ಲಭ್ಯವಿರಲಿದೆ. 18 ವರ್ಷ ಮೇಲ್ಪಟ್ಟವರು, ಈಗಾಗಲೇ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ತೆಗೆದುಕೊಂಡಿರುವವರು ಬೂಸ್ಟರ್ ಡೋಸ್ ನ ಬಹು ಆಯ್ಕೆಯಾಗಿ ಇಂಕೋವಾಕ್ […]

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯಿಂದ ಭೂಕಬಳಿಕೆ: ಸ್ಥಳೀಯರಿಂದ ಸೇನೆ ವಿರುದ್ದ ಪ್ರತಿಭಟನೆ

ಇಸ್ಲಾಮಾಬಾದ್: ಇಲ್ಲಿನ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ನ ಸಂಪನ್ಮೂಲ-ಸಮೃದ್ಧ ಪ್ರದೇಶಗಳನ್ನು ಪಾಕ್ ಸರ್ಕಾರ ಮತ್ತು ಸೇನೆಯು ಅತಿಕ್ರಮಿಸುತ್ತಿರುವ ವಿರುದ್ದ ಇಲ್ಲಿನ ಸ್ಥಳೀಯ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಸರ್ಕಾರದ ಶೋಷಕ ನೀತಿಗಳ ವಿರುದ್ಧ ಪಿಒಕೆ ಭಾಗವಾಗಿರುವ ಈ ಪ್ರದೇಶದಲ್ಲಿ ವ್ಯಾಪಕ ಕೋಪ ಮತ್ತು ಅಸಮಾಧಾನವಿದೆ. ಮಾಧ್ಯಮ ವರದಿಗಳ ಪ್ರಕಾರ, ಗಿಲ್ಗಿಟ್ ಬಾಲ್ಟಿಸ್ತಾನದ ಸ್ಥಳೀಯರು ಪಾಕಿಸ್ತಾನದ ಸೇನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಅಥವಾ ಪಾಕಿಸ್ತಾನ್ ರೇಂಜರ್‌ಗಳು, ಅರೆಸೈನಿಕ ಪಡೆಗಳು ತಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು  ಅನುಮತಿಸುವುದಿಲ್ಲ […]

ಅನೈಚ್ಛಿಕ ಡೌನ್‌ಗ್ರೇಡ್ ಟಿಕೆಟ್ ಗಳಿಗೆ ವಿಮಾನ ಸಂಸ್ಥೆಗಳಿಂದ ಸಂಪೂರ್ಣ ಮರುಪಾವತಿ: ಡಿಜಿಸಿಎ ಹೊಸ ಮಾನದಂಡ

ಹೊಸದಿಲ್ಲಿ: ವಿಮಾನಯಾನ ನಿಯಂತ್ರಕ ಡಿಜಿಸಿಎ ಹೊಸ ಮಾನದಂಡಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ವರ್ಗದ ಟಿಕೆಟ್‌ಗಳನ್ನು ಅನೈಚ್ಛಿಕವಾಗಿ ಡೌನ್‌ಗ್ರೇಡ್‌ ಮಾಡಿದಲ್ಲಿ ಪ್ರಯಾಣಿಕರಿಗೆ ಪರಿಹಾರವನ್ನು ನೀಡುವ ನಿಯಮಾವಳಿಗಳಿ ಶೀಘ್ರದಲ್ಲೇ ಜಾರಿಗೆ ಬರಲಿವೆ. ನಿಯಮಗಳು ಜಾರಿಗೆ ಬಂದ ನಂತರ, ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯು ತೆರಿಗೆಗಳನ್ನು ಒಳಗೊಂಡಂತೆ ಅಂತಹ ಟಿಕೆಟ್‌ಗಳ ಸಂಪೂರ್ಣ ಮೌಲ್ಯವನ್ನು ಮರುಪಾವತಿಸಬೇಕಾಗುತ್ತದೆ ಮತ್ತು ಪೀಡಿತ ಪ್ರಯಾಣಿಕರನ್ನು ಮುಂದಿನ ಲಭ್ಯವಿರುವ ಕ್ಲಾಸ್ ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಡಿಜಿಸಿಎ ತಿಳಿಸಿದೆ. ಡೌನ್‌ಗ್ರೇಡ್‌ ಎಂದರೇನು? […]