ಈ ಬಾರಿ ಕೌಂಟ್ ಡೌನ್ ಸಮಯ ಮತ್ತು ರಾಕೆಟ್ ಕೂಡಾ ನಮ್ಮದು!! ಚೊಚ್ಚಲ ಗಗನಯಾನದ ಗಗನಯಾತ್ರಿಗಳನ್ನು ದೇಶಕ್ಕೆ ಪರಿಚಯಿಸಿದ ಪ್ರಧಾನಿ ಮೋದಿ

ತಿರುವನಂತಪುರ: ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನಗೆ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿ ಮೋದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದ ಮೂರು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಉದ್ಘಾಟಿಸಲು VSSC ಗೆ ಬಂದಿದ್ದರು. ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಗಗನಯಾನ ಮಿಷನ್ ಗೆ ಆಯ್ಕೆಯಾಗಿರುವ ನಾಲ್ಕು ಮಂದಿ ಗಗನಯಾನಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ. […]

ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ವೇಗಿ ಮೊಹಮ್ಮದ್ ಶಮಿ

ಭಾರತೀಯ ಕ್ರಿಕೆಟ್ ನ ಸ್ಟಾರ್ ವೇಗಿ ಮೊಹಮ್ಮದ್ ಶಮಿ, ಸೋಮವಾರ ತಾನು ಹಿಮ್ಮಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು X ನಲ್ಲಿ ಬಹಿರಂಗಪಡಿಸಿದ್ದಾರೆ. “ನನ್ನ ಅಕಿಲ್ಸ್ ಸ್ನಾಯುರಜ್ಜು ಮೇಲೆ ಯಶಸ್ವಿ ಹೀಲ್ ಆಪರೇಷನ್ ನಡೆದಿದೆ! ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ನನ್ನ ಕಾಲ ಮೇಲೆ ನಿಲ್ಲಲು ಎದುರು ನೋಡುತ್ತಿದ್ದೇನೆ” ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ. ಅಕಿಲ್ಸ್ ಸ್ನಾಯುರಜ್ಜು ಕಾಲಿನ ಹಿಂಭಾಗದಲ್ಲಿರುವ ದಪ್ಪ ಸ್ನಾಯುರಜ್ಜು ಮತ್ತು ಇದು ಹಿಮ್ಮಡಿಗೆ ಸಂಪರ್ಕವನ್ನು ಒದಗಿಸುತ್ತದೆ. ICC ಕಾರ್ಯಕ್ರಮದ ಬಳಿಕ ಆಸ್ಟ್ರೇಲಿಯಾ […]

ಗಝಲ್ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ

ಬಹುಭಾಷಾ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇಂದು (26 ಫೆಬ್ರವರಿ 2024) ನಿಧನರಾಗಿದ್ದಾರೆ. ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉದಾಸ್ ಇಹಲೋಕ ತ್ಯಜಿಸಿದ್ದಾರೆ. ಪಂಕಜ್ ಉದಾಸ್ ಅವರು ಮುಖ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಹಿಂದಿ ಚಿತ್ರಗಳ ಅಸಂಖ್ಯಾತ ಗೀತೆಗಳನ್ನು ಹಾಡಿದ್ದ ಗಾಯಕ ಪಂಕಜ್ ಉದಾಸ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ‘ಸ್ಪರ್ಶ’ ಚಿತ್ರದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ..,’ ಗೀತೆಯನ್ನು ಹಾಡಿ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರ ಮೆಚ್ಚುಗೆ ಕೂಡ ಗಳಿಸಿದ್ದರು. ವಿದೇಶಗಳಲ್ಲಿ ಕೂಡ ತಮ್ಮ […]

ರಾಷ್ಟ್ರದ ಪ್ರಪ್ರಥಮ ಚಾಟ್‌ಬಾಟ್ ‘Krutrim AI’ ಪ್ರಾರಂಭಿಸಿದ ಓಲಾ ಮುಖ್ಯಸ್ಥ: 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ

ಹೊಸದಿಲ್ಲಿ: ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಸೋಮವಾರದಂದು ಭಾರತದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘Krutrim AI’ ಅನ್ನು ಪ್ರಾರಂಭಿಸಿದ್ದಾರೆ. ಓಪನ್‌ಎಐನ ಚಾಟ್‌ಜಿಪಿಟಿ (ChatGpt) ಮತ್ತು ಗೂಗಲ್‌ನ ಜೆಮಿನಿ(Gemini)ಗೆ ಪೈಪೋಟಿಯನ್ನು ನೀಡಲು Krutrim AI ಅನ್ನು ಅಭಿವೃದ್ದಿ ಪಡಿಸಲಾಗಿದೆ. AI ಚಾಟ್‌ಬಾಟ್ ಈಗ ಸಾರ್ವಜನಿಕ ಬೀಟಾ ವರ್ಷನ್ ನಲ್ಲಿ ಹೊರಹೊಮ್ಮುತ್ತಿದೆ. “ಭರವಸೆ ನೀಡಿದಂತೆ, ಇಂದು Krutrim AI ಸಾರ್ವಜನಿಕ ಬೀಟಾ ರೋಲ್‌ಔಟ್ ಅನ್ನು ಪ್ರಾರಂಭಿಸುತ್ತಿದೆ” ಎಂದು ಅಗರ್ವಾಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನಮಗೆ, ನಮ್ಮ […]

ಜ್ಞಾನವಾಪಿ ದೇಗುಲದ ನೆಲಮಾಳಿಗೆಯಲ್ಲಿ ಪ್ರಾರ್ಥನೆಗೆ ಅಲಹಬಾದ್ ಹೈಕೋರ್ಟ್ ಮೊಹರು: ಮಸೀದಿ ಸಮಿತಿಯ ಅರ್ಜಿ ವಜಾ

ನವದೆಹಲಿ: ಜ್ಞಾನವಾಪಿ ದೇವಾಲಯ ಪ್ರಕರಣ ಸಂಬಂಧ ಹಿಂದೂ ಪಕ್ಷಕ್ಕೆ ಮತ್ತೊಮ್ಮೆ ಗೆಲುವಾಗಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ (Vyas Tehkhana)ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಜ್ಞಾನವಾಪಿ ದೇಗುಲ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು […]