ಬಿಜೆಪಿಯಲ್ಲಿ ದೊಡ್ಡ ಬದಲಾವಣೆ, ಕೇಂದ್ರದ ಹೊಸ ಟೀಂ ನ ಹಲವರಿಗೆ ಮಹತ್ವದ ಜವಾಬ್ದಾರಿ!

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಅಧಿಕಾರ ವಹಿಸಿಕೊಂಡು ಸುಮಾರು ಎಂಟು ತಿಂಗಳು ಕಳೆದಿದ್ದು, ಇದೀಗ ತಮ್ಮ ಹೊಸ ತಂಡವನ್ನು ರಚಿಸಲು ಸಜ್ಜಾಗಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್ ಅವರಿಗೆ ಪಕ್ಷದ ರಾಷ್ಟ್ರೀಯ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಿತಿನ್ ತಂಡಕ್ಕೆ ಸ್ಮೃತಿ, ಅನುರಾಗ್? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ […]
ನಮ್ಮ ದೇಶದ ಹೆಮ್ಮೆ, ನಮ್ಮ ತಿರಂಗಾ… ಹೇಗೆ ತಯಾರಾಗುತ್ತದೆ ಗೊತ್ತೇ?

ಭಾರತದ ರಾಷ್ಟ್ರಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿರುವ ನಮ್ಮ ತಿರಂಗಾದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕಕ್ಕೂ ವಿಶೇಷ ಸ್ಥಾನವಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಧಾರವಾಡ ತಾಲ್ಲೂಕಿನ […]
ಸ್ವಾತಂತ್ರ್ಯ ದಿನಾಚರಣೆ ಅನ್ನೋ ಹೊಸ ಹುರುಪು: ಝೆನ್ ಜೀ ಪೀಳಿಗೆಯ ದೃಷ್ಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ… ಈ ಪದ ಕೇಳಿದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಗಳು ಹಲವಾರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಜನರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಜೈಲು ಸೇರಿದ್ದ ನಾಯಕರು, ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರರು… 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಅದು ಕೇವಲ ಒಂದು ದಿನಾಂಕವಾಗಿರಲಿಲ್ಲ. ಕೋಟ್ಯಂತರ ಭಾರತೀಯರ ಕನಸು ನನಸಾದ ದಿನವಾಗಿತ್ತು. ಆದರೆ ಇಂದು, ಸುಮಾರು ಎಂಟು ದಶಕಗಳ ನಂತರ, ಅದೇ ಸ್ವಾತಂತ್ರ್ಯವನ್ನು ಜೆನ್ ಜೀ ಪೀಳಿಗೆ ಹೇಗೆ ನೋಡುತ್ತದೆ? ಇಂದಿನ ಯುವಜನತೆಗೆ […]
ರೈಲು ಹತ್ತುವ ಮುನ್ನ ಹೊಸ ನಿಯಮಗಳನ್ನು ತಿಳಿದುಕೊಳ್ಳಿ! ತಪ್ಪಿದರೆ ದಂಡ

ಭಾರತೀಯ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ, ಶಿಸ್ತು ಮತ್ತು ರೈಲ್ವೆ ಆಸ್ತಿಯ ರಕ್ಷಣೆಗೆ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಕಟ್ಟಬೇಕಾಗಬಹುದು. ವಿಶೇಷವಾಗಿ ಕೆಲವು ತಪ್ಪುಗಳಿಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಜನ್ ವಿಶ್ವಾಸ್ (ತಿದ್ದುಪಡಿ ನಿಬಂಧನೆಗಳು) ಕಾಯ್ದೆ, 2026ರ ಅಡಿಯಲ್ಲಿ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 2026ರ ಜೂನ್ 19ರಿಂದ ಅವು ಜಾರಿಗೆ ಬಂದಿವೆ. ಪ್ರಯಾಣಿಕರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಲು ರೈಲ್ವೆ ಜಾಗೃತಿ […]
ಅಕ್ರಮ ಸಾಲದ ಆ್ಯಪ್‌ಗಳು ಸೇರಿದಂತೆ 3,718 ಮೊಬೈಲ್ ಅಪ್ಲಿಕೇಶನ್ ಬ್ಯಾನ್!

ನವದೆಹಲಿ: ಬಳಕೆದಾರರನ್ನು ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಕ್ರಮ ಸಾಲದ ಆ್ಯಪ್‌ಗಳು ಸೇರಿದಂತೆ 3,718 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಲೋಕಸಭೆಗೆ ತಿಳಿಸಿದ್ದಾರೆ. ಈ ವರ್ಷದ ಜೂನ್ 30ರವರೆಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69(A) ಹಾಗೂ 79(3)(b) ಅಡಿಯಲ್ಲಿ ಈ ಮೊಬೈಲ್ ಆ್ಯಪ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ […]