ನೂತನ ಸಂಸತ್ ಭವನ ಕಟ್ಟಡದಲ್ಲಿ “ಸೆಂಗೋಲ್” ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ನವದೆಹಲಿ: ಇಂದು ಬೆಳಿಗ್ಗೆ ಹೊಸ ಸಂಸತ್ ಸದನದ ಆವರಣಕ್ಕೆ ಆಗಮಿಸಿದ ಮೋದಿ, ಮಹಾತ್ಮ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ನೂತನ ಕಟ್ಟಡದ ಉದ್ಘಾಟನೆಯ ಪೂಜೆಯಲ್ಲಿ ಪಾಲ್ಗೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಕಟ್ಟಡಾದ ಉದ್ಘಾಟನೆ ನಡೆಸಬೇಕು ಎಂದು ಒತ್ತಾಯಿಸಿ ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನದ ಉದ್ಘಾಟನೆಗೆ ಚಾಲನೆ ನೀಡಿದರು. ನೂತನ ಕಟ್ಟಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನ […]

ಸಾಮಾನ್ಯ ಪಾಸ್ ಪೋರ್ಟ್ ಗಾಗಿ ರಾಹುಲ್ ಗಾಂಧಿಗೆ ಎನ್.ಒ.ಸಿ ನೀಡಿದ ದೆಹಲಿ ನ್ಯಾಯಾಲಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಿದ್ದು, ಹತ್ತು ವರ್ಷ ಕಾಲಾವಧಿಗೆ ಹೊಸ ಪಾಸ್ ಪೋರ್ಟ್ ನೀಡಲು ಅನುವಾಗುವಂತೆ ನಿರಾಕ್ಷೇಪಣಾ ಪತ್ರಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಇದಕ್ಕೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ “ಸಾಮಾನ್ಯ ಪಾಸ್‌ಪೋರ್ಟ್” ನೀಡುವುದಕ್ಕಾಗಿ ದೆಹಲಿ ನ್ಯಾಯಾಲಯವು ಶುಕ್ರವಾರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರೂಸ್ ಅವೆನ್ಯೂ ನ್ಯಾಯಾಲಯವು […]

ಸೂಪರ್ ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತದ ಸಾಧನೆ: ಎಐ ಸೂಪರ್ ಕಂಪ್ಯೂಟರ್ “ಐರಾವತ್” ಲೋಕಾರ್ಪಣೆಗೆ ದಿನಗಣನೆ

ನವದೆಹಲಿ: ಟೆಕ್ ಜಗತ್ತಿನಲ್ಲಿ ಭಾರತ ಶೀಘ್ರದಲ್ಲೇ ಮತ್ತೊಂದು ಗಮನಾರ್ಹ ಸಾಧನೆಯನ್ನು ಮಾಡಲಿದೆ. ಭಾರತವು 900 ಕೋಟಿ ರೂಪಾಯಿ ಮೌಲ್ಯದ ತನ್ನ ವೇಗದ ಸೂಪರ್ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಸೂಪರ್ ಕಂಪ್ಯೂಟರ್ ಕಾರ್ಯನಿರ್ವಹಿಸಲು ಪ್ರಾರಂಭಿಸಬಹುದು. ಈ ಅದ್ಭುತ ಬೆಳವಣಿಗೆಯ ಕುರಿತು ಮಾಹಿತಿ ನೀಡಿದ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು, ಸಂಭವನೀಯ ಮುನ್ಸೂಚನೆಯ ಅತ್ಯುನ್ನತ ವಿಶ್ಲೇಶಣೆಯೊಂದಿಗೆ ಬರುವ ಹವಾಮಾನ ಮೇಲ್ವಿಚಾರಣಾ ಕಾರ್ಯವಿಧಾನದ ಬಗ್ಗೆಯೂ ಮಾಹಿತಿ ನೀಡಿದರು. ಮತ್ತೊಂದು ಗಮನಾರ್ಹ ಸಾಧನೆಯೆಂದರೆ […]

ಹೊಸ ಸಂಸತ್ ಕಟ್ಟಡದ ನೆನಪಿಗಾಗಿ 75 ರೂಪಾಯಿ ನಾಣ್ಯ ಬಿಡುಗಡೆ

ನವದೆಹಲಿ: ಭಾರತದ ಹೊಸ ಸಂಸತ್ ಕಟ್ಟಡದ ಲೋಕಾರ್ಪಣೆ ಸಂದರ್ಭದ ನೆನಪಿಗಾಗಿ ಮೋದಿ ಸರ್ಕಾರವು ರೂ 75 ನಾಣ್ಯವನ್ನು ಬಿಡುಗಡೆ ಮಾಡಲಿದೆ. 35 ಗ್ರಾಂ ತೂಗುವ ನಾಣ್ಯವು 44 ಎಂಎಂ ವ್ಯಾಸ ಹೊಂದಿದ್ದು ವೃತ್ತಾಕಾರದಲ್ಲಿರುತ್ತದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನ ಮತ್ತು ಅದರ ಕೆಳಗೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಗಿರಿ ಲಿಪಿಯಲ್ಲಿ ಬರೆಯಲಾಗಿದ್ದರೆ, ಬಲಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ರೂಪಾಯಿಯ […]

ರೈಲು ಅಪಘಾತದಲ್ಲಿ ಎರಡು ಕಾಲು,ಬಲಗೈ ಹಾಗೂ ಎಡಗೈ ಬೆರಳು ಕಳೆದುಕೊಂಡರೂ ಯು.ಪಿ.ಎಸ್.ಸಿ ಪಾಸ್ ಮಾಡಿದ ಛಲದಂಕಮಲ್ಲ ಸೂರಜ್ ತಿವಾರಿ

ಲಕ್ನೋ: ಕೇಂದ್ರ ಲೋಕಸೇವಾ ಆಯೋಗ (UPSC) 2022 ರಲ್ಲಿ ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಉತ್ತರ ಪ್ರದೇಶದ ಸೂರಜ್ ತಿವಾರಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಮೈನ್‌ಪುರಿಯ ಸೂರಜ್ ತಿವಾರಿ 2017 ರಲ್ಲಿ ಗಾಜಿಯಾಬಾದ್‌ನ ದಾದ್ರಿಯಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಹಾಗೂ ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಅವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಸೂರಜ್ […]