ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಕೇಂದ್ರ ಸರ್ಕಾರ ಸೋಮವಾರ ಸಂಜೆ ಘೋಷಿಸಿತು. ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಗೆ ಡಿಸೆಂಬರ್ 2019 ರಲ್ಲಿ ಸಂಸತ್ತು ಅನುಮೋದನೆ ನೀಡಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಪೀಡಿತ ಅಲ್ಪ ಸಂಖ್ಯಾತ ಹಿಂದೂಗಳು ದಶಕಗಳಿಂದ ಭಾರತದಲ್ಲಿ ಶರಣಾರ್ಥಿಗಳಾಗಿದ್ದು ಇಂಥವರಿಗೆ ಭಾರತೀಯ ಪೌರತ್ವ ನೀಡುವ ಕಾನೂನು ಇದಾಗಿದೆ. 1950 ರಲ್ಲಿ ಸಿ ಎ ಎ ಕಾನೂನು ಜಾರಿಗೊಳಿಸಲಾಗಿದ್ದರೂ ಕಳೆದ ಕೆಲವು ದಶಕಗಳಿಂದ ಶರಣಾರ್ಥಿಗಳಿಗೆ ಪೌರತ್ವ ನೀಡಲಾಗಿರಲಿಲ್ಲ. ಮೋದಿ ಸರ್ಕಾರ 2019 ರಲ್ಲಿ ಕಾನೂನಿಗೆ […]

ಕುನೋ ಉದ್ಯಾನದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಚಿರತೆ ಗಾಮಿನಿ

ಭೋಪಾಲ್: ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆ ಗಾಮಿನಿ 5 ಮರಿಗಳಿಗೆ ಜನ್ಮ ನೀಡಿದೆ. ಇದು ಭಾರತದಲ್ಲಿ ಜನಿಸಿದ ಮರಿಗಳ ಸಂಖ್ಯೆಯನ್ನು 13 ಕ್ಕೆ ಏರಿಸಿದೆ. ಇದು ಕಳೆದ ಕೆಲವು ತಿಂಗಳಲ್ಲಿ ಮರಿ ಇಟ್ಟ ನಾಲ್ಕನೇ ಪ್ರಕರಣವಾಗಿದೆ.

ದೇಶದ ಹೆಗ್ಗುರುತಾದ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುಗ್ರಾಮ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಪ್ರಧಾನ ಮಂತ್ರಿ ಇಂದು ದ್ವಾರಕಾ ಎಕ್ಸ್‌ಪ್ರೆಸ್‌ವೇಯ (Dwarka Expressway) ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಇದು ಸಂಚಾರ ಹರಿವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ದೆಹಲಿ ಮತ್ತು ಗುರುಗ್ರಾಮ್ ನಡುವಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂಟು ಪಥಗಳ ದ್ವಾರಕಾ […]

71 ನೇ ವಿಶ್ವಸುಂದರಿ ಸ್ಪರ್ಧೆ: ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ

ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ ಅವರು 28 ವರ್ಷಗಳ ಅಂತರದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ (Miss World) 2024 ಸ್ಪರ್ಧೆಯ 71 ನೇ ಆವೃತ್ತಿಯನ್ನು ಗೆದ್ದಿದ್ದಾರೆ. ಮುಂಬೈನಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರಾಂಡ್ ಫಿನಾಲೆ ನಡೆಯಿತು. ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತೆ ಸಿನಿ ಶೆಟ್ಟಿ ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಪ್ರಪಂಚದಾದ್ಯಂತದ 112 ಸ್ಪರ್ಧಿಗಳನ್ನು ಒಳಗೊಂಡಿದ್ದ ಸ್ಪರ್ಧೆಯಲ್ಲಿ ಟಾಪ್ ಎಂಟರಲ್ಲಿ ಸಿನಿಶೆಟ್ಟಿ ಇದ್ದರೂ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಳ್ಳಲಾಗಲಿಲ್ಲ. […]

ಭಾರತ v/s ಇಂಗ್ಲೆಂಡ್ ಟೆಸ್ಟ್: 4-1 ಅಂತರದಿಂದ ಸರಣಿ ಗೆದ್ದ ಭಾರತ

ಧರ್ಮಶಾಲಾ: ಸ್ಪಿನ್ನರ್‌ಗಳ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್‌ ಪಂದ್ಯವನ್ನು(Test Match) ಭಾರತ (Team India) ಒಂದು ಇನ್ನಿಂಗ್ಸ್‌ ಮತ್ತು 64 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. 259 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 195 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಪಿನ್ನರ್‌ ಅಶ್ವಿನ್‌ 5 ವಿಕೆಟ್‌ ಪಡೆದರೆ ಬುಮ್ರಾ ಮತ್ತು ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಪಡೆದರು. ರವೀಂದ್ರ ಜಡೇಜಾ 1 […]