ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರವೇಶಿಸಿದ ಜಮ್ಮು-ಕಾಶ್ಮೀರದ ಟುಲಿಪ್ ಗಾರ್ಡನ್ !!

ಜಮ್ಮು ಮತ್ತು ಕಾಶ್ಮೀರ: ಶ್ರೀನಗರದಲ್ಲಿರುವ ಇಂದಿರಾಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಏಷ್ಯಾದ ಅತಿದೊಡ್ಡ ಉದ್ಯಾನವನವಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ (ಲಂಡನ್) ಅನ್ನು ಪ್ರವೇಶಿಸಿದೆ. ಉದ್ಯಾನವನ್ನು 68 ವಿಭಿನ್ನ ಪ್ರಭೇದಗಳ ಸಮೂಹದಿಂದ 1.5 ಮಿಲಿಯನ್ ಟುಲಿಪ್ ಬಲ್ಬ್‌ಗಳಿಂದ ಅಲಂಕರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಒಂದು ಲಕ್ಷ ಪ್ರವಾಸಿಗರು ಸುಂದರವಾದ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಟುಲಿಪ್ ಉದ್ಯಾನವು ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ […]

ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿರುವ ಭಾರತ, ಇಂದು ಸಂಜೆ 5.20ಕ್ಕೆ ಇಸ್ರೋದಿಂದ ನೇರಪ್ರಸಾರ: ಚಂದ್ರಯಾನ-3

ನವದೆಹಲಿ: ಇಸ್ರೋ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್​ ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಇಂದು (ಬುಧವಾರ) ಸಂಜೆ 5.20ಕ್ಕೆ ನೇರ ಪ್ರಸಾರ ಪ್ರಾರಂಭವಾಗುತ್ತದೆ.ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕ ಕ್ಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನಿಗಳು ಮತ್ತು ಶಿಕ್ಷಕರು ಕಾರ್ಯಾಚರಣೆಯ ಒಳನೋಟಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ನಡೆಯಲಿರುವ ಘಟನೆಯ ಮಹತ್ವವನ್ನು ವಿವರಿಸುತ್ತಾರೆ.ಇಂದು ಸಂಜೆ ಚಂದ್ರಯಾನ-3 ಲ್ಯಾಂಡರ್ ‘ಚಂದಮಾಮ’ನ ಸ್ಪರ್ಶಿಸಲಿರುವುದರಿಂದ ಭಾರತವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಜೀವನದ ಎಲ್ಲಾ ಹಂತಗಳನ್ನು ಮಿಗಿಲಾದ ದೊಡ್ಡ ಕ್ಷಣಕ್ಕಾಗಿ ಭಾರತೀಯರು ಜೋರಾದ ತಯಾರಿ […]

ದೇಶ, ವಿದೇಶಗಳಲ್ಲಿ ಪ್ರಾರ್ಥನೆ: ಚಂದ್ರಯಾನ 3 ಯಶಸ್ವಿಯಾಗಲೆಂದು ಹೋಮ, ಹವನ, ಪೂಜೆ ನಡೆಸುತ್ತಿರುವ ಭಕ್ತರು

ನವದೆಹಲಿ : ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್‌ ಆಗಲೆಂದು ಪ್ರಪಂಚಾದ್ಯಂತ ವಿವಿಧ ಧಾರ್ಮಿಕ ಸಮುದಾಯಗಳಿಂದ ಹೋಮ, ಹವನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲೆಂದು ದೇಶ ಸೇರಿದಂತೆ ಪ್ರಪಂಚಾದ್ಯಂತ ಭಕ್ತರು ಪ್ರಾರ್ಥನೆ […]

ವಿಕ್ರಮ್​ ಲ್ಯಾಂಡರ್​ ನಿಗದಿಯಂತೆಯೇ ಎಲ್ಲ ನಡೆಯಲಿದೆ: ಪ್ಲಾನ್​ ಬಿ ಇಲ್ಲ ಇಸ್ರೋ ಸ್ಪಷ್ಟನೆ

ಚಂದ್ರಯಾನ -3 ರ ಯೋಜನೆಯಂತೆಯೇ ಎಲ್ಲವೂ ನಡೆಯಲಿದೆ. ಬುಧವಾರ ನಿಗದಿಯಾದಂತೆ ವಿಕ್ರಮ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಮಾಡಲು ಇಸ್ರೋ ಸನ್ನದ್ದವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವುದೇ ಪ್ಲಾನ್​ ಬಿ ಹೊಂದಿಲ್ಲ ಎಂದು ಇಸ್ರೋದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ವಿಕ್ರಂ ಸಾಪ್ಟ್ ಲ್ಯಾಂಡಿಂಗ್​​​ನಲ್ಲಿ ಯಾವುದೇ ಮುಂದೂಡಿಕೆ ಅಥವಾ ಪ್ಲಾನ್ ಬಿ ಪ್ಲಾನ್​​​ ಅನ್ನು ಇಸ್ರೋ ಹೊಂದಿಲ್ಲ ಎಂದು ಈ ಅಧಿಕಾರಿ ಹೇಳಿದ್ದಾರೆ. ” ಆರಂಭದಲ್ಲಿ ಯೋಜಿಸಿದಂತೆ ಬುಧವಾರ ಸಂಜೆ ಲ್ಯಾಂಡಿಂಗ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ […]

ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ರ ಆ.31 ರಿಂದ ಕಾರ್ಯಾರಂಭ

ದೇವನಹಳ್ಳಿ (ಬೆಂಗಳೂರು ಗ್ರಾ) : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಕಳೆದ ಜನವರಿ 15ರಿಂದ ಕೆಲವು ವಿಮಾನಗಳ ಹಾರಾಟ ಮಾತ್ರ ಶುರುವಾಗಿತ್ತು.ಆಗಸ್ಟ್ 31 ರಿಂದ ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್ 2ರಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಡೆಯಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಆಗಸ್ಟ್ 31ರಿಂದ ಹೊಸ ಟರ್ಮಿನಲ್‌ನಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನಗಳ ಹಾರಾಟ ನಡೆಯಲಿದೆ. ದೇಶೀಯ ವಿಮಾನಯಾನ ನಡೆಸುವ […]