ಅವನನ್ನು ಕಣ್ಣರಳಿಸಿ ನೋಡಿ ಬಿಡಿ: ನಿಮಗೂ ಅವನ ಮೇಲೆ ಪ್ರೀತಿಯಾಗ್ತದೆ !

♥ಸ್ವಾತಂತ್ರ್ಯ ಎ.ಎನ್ ಬರಡು ಭೂಮಿಯಲ್ಲಿರುವ ಮಣ್ಣ ನೋಡಿ ಆಶ್ಚರ್ಯವಾಗುವುದಿಲ್ಲ, ನದಿಯಲ್ಲಿರುವ ನೀರು ನೋಡಿ ಹೊಸತ್ತು ಅನ್ನಿಸುವುದಿಲ್ಲ, ಆದರೆ ನನ್ನ ಪ್ರೀತಿಯ ಹುಡುಗನ ಸಹವಾಸದಿಂದ ಇವೆಲ್ಲವೂ ಆಕರ್ಷಕವೆನಿಸತೊಡಗಿತು.ಪ್ರೀತಿಯೆಂದರೆ  ಒಂದು ಹನಿಯಷ್ಟು ನಂಬಿಕೆ, ಆಸಕ್ತಿ ಇರದ ನನಗೆ ಪ್ರೀತಿಯ ಅನುಭವ ಕೊಟ್ಟದ್ದು ನನ್ನವನು ! ಎಲ್ಲೋ ಕಳೆದು ಹೋದ ನನ್ನ ಮನಸ್ಸನ್ನು ಮತ್ತೆ ಹುಡುಕಿಕೊಟ್ಟ ಕೀರ್ತಿ ಅವನದ್ದು. ನನ್ನ ತುಂಬಾ ಸತಾಯಿಸುವ, ಪ್ರೀತಿಸುವ ಅವನು, ತನ್ನ ಪವಿತ್ರವಾದ ವಿಶಾಲ ಮನಸ್ಸಲಿ, ನನ್ನನ್ನು ಬಚ್ಚಿಟ್ಟು ಕೊಂಡಿದ್ದಾನೆ. ಬಯಸಿದ ತಕ್ಷಣ ಎಂದಿಗೂ ಸಮಯಕ್ಕೆ […]

ಎಲ್ಲಾ ಮುಗೀತು ಅಂದುಕೊಳ್ಳಲೇಬೇಡಿ, ಕನಸು ಇನ್ನೇನು ಶುರುವಾಗುತ್ತೆ !

♠ ಆರ್.ಜೆ.ಅಚ್ಲಾಡಿ ನಾವು ಜೀವನದಲ್ಲಿ ಎರಡು ವಿಚಾರಕ್ಕಾಗಿ  ಹೋರಾಟ ನಡೆಸುತ್ತಲೇ ಇರುತ್ತೇವೆ. ಒಂದು ಬದುಕಿಗಾಗಿ, ಮತ್ತೊಂದು ಬದುಕುವುದಕ್ಕಾಗಿ. ಸಣ್ಣಗೆ ಹುಷಾರ್ ತಪ್ಪಿ ಜೀವಕ್ಕೇನಾದರು ಆದರೂ ವೈದ್ಯರ ಬಳಿ ದೌಡಾಯಿಸಿ ಸಮಸ್ಯೆ ವಾಸಿಯಾಗುವ ತನಕ ಪ್ರಪಂಚವೇ ತಲೆಕೆಳಗಾದಂತೆ ಚಡಪಡಿಸುತ್ತೇವೆ, ಇದು ನಾವು ಬದುಕುವುದಕ್ಕಾಗಿ ನಡೆಸುವ ಹೋರಾಟ. ಸಣ್ಣ ಸಂಬಳದ ನೌಕರಿಯಿಂದ ಹಿಡಿದು, ಕೋಟಿ-ಕೋಟಿ ಸಂಪಾದಿಸುತ್ತಾ ಇನ್ನಷ್ಟು-ಮತ್ತಷ್ಟು ಸಂಪಾದಿಸಬೇಕು ಎಂದು ಜೀವನಪೂರ್ತಿ ಹೋರಾಟದಲ್ಲಿರುತ್ತಾನೆ. ಇದು ಬದುಕಿಗಾಗಿ ನಡೆಸುವ ಹೋರಾಟ. ಬದುಕು ಮತ್ತು ಬದುಕುವುದು ಎನ್ನುವ ಎರಡು ವಿಚಾರಗಳು ಸಂಪೂರ್ಣವಾಗಿ ಮಾನವ […]

 ￰ಚೈನೀಸ್ ಆಪ್ ನಿಷೇಧಿಸಲು ಚಪ್ಪಾಳೆ ಹೊಡೆಯುವುದನ್ನು ಮೊದಲು ನಿಲ್ಲಿಸಿ: ಡಾ.ಶಶಿಕಿರಣ್ ಶೆಟ್ಟಿ ಬರಹ

ಈಗ ಎಲ್ಲಾ ಕಡೆ ಕೇಳುತ್ತಿರುವ ಕೂಗು ಒಂದೇ, ನಮ್ಮ ಸೈನಿಕರನ್ನು ಕೊಂದ ಪಾಪಿ ಚೀನಾದ ಆಪ್ ನಿಲ್ಲಿಸಿ ಎಂದು, ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಲ್ಲ ಅಂತಾರಾಷ್ಟ್ರೀಯ ಕಾನೂನು ಇದಕ್ಕೆ ಅಡ್ಡಿಯಾಗಬಹುದು. ಅದಕ್ಕೆ ನಾವೇ ಜಾಗೃತಗೊಳ್ಳಬೇಕಿದೆ. ಅಮೇರಿಕಾದ 2 ಅಣು ಬಾಂಬ್ ಬಿದ್ದ ದಿನವೇ ಜಪಾನ್ ನ ಜನರು ಅಮೇರಿಕಾದ ವಸ್ತುಗಳನ್ನು ಮುಟ್ಟುವುದನ್ನೇ ಬಿಟ್ಟಿದ್ದಾರೆ. ಇಂದು ಒಂದು ಅಮೇರಿಕಾದ ಸೂಜಿ ಕೂಡ ಜಪಾನ್ ಅಲ್ಲಿ ಮಾರಾಟವಾಗುತಿಲ್ಲ, ಜಪಾನ್ ಜನರಿಗಾದದ್ದು ಭಾರತೀಯರಿಗೇಕೆ ಆಗುತಿಲ್ಲ? ಕೇವಲ ಟಿಕ್ ಟಾಕ್ ಒಂದೇ […]

ಬೆಕ್ಕುರಾಯನೊಂದಿಗೆ ಪ್ರೀತಿಯಾಯ್ತು: ಪುಷ್ಪಾ ಬರೆದ ಬರಹ

ಹೇ ..ಚಿನ್ನು….. ನಿಜವಾಗಿಯು ನೀನೊಬ್ಬ ಸುಂದರ ಯುವಕ ಕಣೊ. ನಿನ್ನ ಕೆಂದುಟಿಯಯೊಳಗಿನ ನಗು ಮಿಟುಕುವ ಕಣ್ಣ ರೆಪ್ಪೆಗಳು ಹಾಲುಗಲ್ಲದ ಮೇಲೆ ಹುರಿಗಡ್ಡದ ನಡುವೆ ಪುಟ್ಟ ನಗು  ಎಲ್ಲವನ್ನೂ ಯೋಚಿಸಿ ಕೂತಿದ್ದೆ ನಿನ್ನ ಗೊತ್ತಾ? ನನ್ನ ರಾಜ  ಅಲ್ವಾ ನೀನು? ನಿನಗೇನು ಚೆನ್ನಾಗಿಯೇ ಇರುತ್ತೀಯ ಬಿಡು,  ಯಾಕಂದ್ರೆ ಯಾವಾಗಲೂ ಎಲ್ಲೆಲ್ಲೋ ಸುತ್ತಾಡ್ಕೊಂಡು ಬರ್ತಿಯಾ .. ಸೂಜಿ ಬೆಳಕಿನಂತೆ ಎಲ್ಲರ ಕಣ್ಣಲ್ಲೂ ಮಿಂಚುತ್ತೀಯಾ. ನಿನ್ನ ಬಗ್ಗೆ   ನಿನ್ನ ಬಗ್ಗೆ ನಿನ್ನ ಗೆಳೆಯ ಚೋಟುನತ್ರ ವಿಚಾರಿಸುತ್ತಲೇ ಇರುತ್ತೇನೆ. ಅವನೆಲ್ಲಾ ನಿನ್ನ ಕತೆ […]

ಇವನೆಂದೂ ನಂಗೆ ರಕ್ಷಾಬಂಧನದ ಗಿಫ್ಟ್ ಕೊಟ್ಟಿಲ್ಲ ಯಾಕಂದ್ರೆ? : “ರಕ್ಷಾ” ಬಂಧನದ ದಿನ ರಕ್ಷಾ ಬರೆಯುತ್ತಾರೆ.

ಸಾಮಾನ್ಯವಾಗಿ ಈ ತಮ್ಮಂದಿರು ಅಕ್ಕನ ಮೇಲಿರೋ ಪ್ರೀತಿನ ವ್ಯಕ್ತಪಡಿಸೋದಿಲ್ಲ. ಆದರೆ ಅವರು ಅಕ್ಕಂದಿರ ಮೇಲೆ ಬೆಟ್ಟದಷ್ಟು ಪ್ರೀತಿ, ಕಾಳಜಿ ಇಟ್ಕೊಂಡಿರ್ತಾರೆ ಅನ್ನೋದು ಪ್ರತಿಯೊಬ್ಬ ಅಕ್ಕನಿಗೂ ತಿಳಿದಿರುವ ಸಂಗತಿ. ಅದೇ ರೀತಿ ಸೈಲೆಂಟಾಗೆ ಇದ್ದುಕೊಂಡು, ಸ್ಟ್ರಾಂಗ್‌ ಸಪೋರ್ಟ್‌ ನೀಡೋನು ನನ್ನ ತಮ್ಮ ಪಪ್ಪು.  ಹೌದು ತಮ್ಮ ಆಗಿದ್ರೂ, ಅಣ್ಣನ ಸ್ಥಾನದಲ್ಲಿ ಇದ್ಕೊಂಡು ನನ್ನೆಲ್ಲಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರೋನು ಇವ್ನು. ನಾವಿಬ್ಬರೂ ಹುಟ್ಟಿದ ದಿನ ಒಂದೇ, ಆದರೆ ವರ್ಷ ಬೇರೆ ಬೇರೆ. ಈ ಸನ್ನಿವೇಶವೇ ನಮ್ಮ ನಡುವೆ ವಿಭಿನ್ನ ರೀತಿಯ […]