ನನ್ನೊಳಗಿನ ನೋವು ನಿನಗೂ, ಯಾರಿಗೂ ಗೊತ್ತಿಲ್ಲ…!!!
♣ ಅಶೋಕ್ ಕುಂದರ್ ಉಡುಪಿ ರೆಂಬೆ ತುದಿಯ ನೋಟವದು. ಸುತ್ತಲೂ ನೂರಾರು ಕಣ್ಣುಗಳು ಆ ರೆಂಬೆ ತುದಿಯನ್ನೇ ದಿಟ್ಟಿಸುತ್ತಿರಬಹುದು. ಪ್ರತಿದಿನ ವಿಹರಿಸುವಂತೆ ಹಾರುತ್ತಿರುವಾಗ ಲಕ್ಷಾಂತರ ಕಣ್ಣುಗಳು ನನ್ನನ್ನು ನೋಡುತ್ತಿರಬಹುದು. ನಾ ಬಡಿಯುವ ರೆಕ್ಕೆಗಳಿಗೆ ಅದು ತಿಳಿದಿಲ್ಲ. ಕಣ್ಣುಗಳಿಗಂತು ತಾನ್ ತಲುಪುವ ಗುರಿಯದ್ದೇ ಚಿಂತೆಯಾಗಿತ್ತು. ಆದರೂ ನನ್ನನು ನನ್ನದೇ ರೆಕ್ಕೆಗಳು ಈ ರೆಂಬೆ ತುದಿಯಲ್ಲಿ ತಂದು ನಿಲ್ಲಿಸಿತ್ತು. ಎಷ್ಟೋ ತಿಂಗಳುಗಳಿಂದ ನಾ ಇಲ್ಲಿ ಬಂದು ಕೂರುತ್ತಿದ್ದೆ. ಪ್ರತಿ ಸಲ ಬರುವಾಗ ಒಂದೊಂದು ನೋಟ. ಮಳೆ ಬಿದ್ದಾಗ, ಬಿಸಿಲಿದ್ದಾಗ, ಚಳಿಯಲ್ಲಿ […]
ಏನ್ ಗೊತ್ತಾ, ತಿಳಿದಷ್ಟು ಸುಲಭ ಅಲ್ಲ ಸಾಗೋ ಈ ದಾರಿ, ಅಗಲೋ ಮುನ್ನ ಖುಷಿಯಿಂದ ಅನುಭವಿಸಿ ಒಂದ್ಸಾರಿ !
♥ ಐಶ್ವರ್ಯ .ಆರ್. ನಾಯ್ಕ್ ಸಂತೋಷದಿಂದ ಮೂರು ಹೊತ್ತು ಊಟ, ಕಣ್ಣು ತುಂಬ ನಿದ್ದೆ, ಆಟ ಪಾಠ ಅಂತ ಪಾಲಕರ ಕಣ್ ರೆಪ್ಪೆಯೊಳಗೆ ಜೋಪಾನವಾಗಿ ಇರೋ ನಮಗೆ, ನಿಜವಾದ ಜೀವನದ ಕಸರತ್ತು ಒಂದು ರೀತಿಲಿ ಅರಿವಾಗೋದು ಅವರಿಂದ ದೂರ ಆದಾಗ ಮಾತ್ರ. ಕೆಲವರಿಗೆ ಈ ಅನುಭವ ಹೊಸತೇನಲ್ಲ. ಆದರೂ ನನ್ನ ಕೆಲವು ಸೆಣಸಾಟಗಳನ್ನು ನಿಮ್ಮ ಮುಂದೆ ಇಡುತ್ತೇನೆ ಕೇಳಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗೋದು ಅನಿವಾರ್ಯ ಆಗೋಗಿದೆ. ಇನ್ನು ನಾನ್ ಇಷ್ಟ ಪಟ್ಟಿರುವುದನ್ನು ಓದಬೇಕು […]
ಸುಖವೂ ಉಂಟು, ದುಃಖವೂ ಉಂಟು: ಕೊರೋನಾ ಕಲಿಸಿದ ಪಾಠ ನೂರೆಂಟು
♠ ರಂಜಿತ್ ಸಸಿಹಿತ್ಲು ಈ ಕೊರೋನಾ ಎನ್ನುವ ಮಹಾಮಾರಿ ಇದೆಯಲ್ವಾ ವಿಶ್ವದ ಅದೆಷ್ಟೋ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂಡಿಹಿಪ್ಪೆಕಾಯಿ ಮಾಡಿದೆ. ಅದೆಷ್ಟೋ ಜನರ ಉಸಿರನ್ನೇ ಹೀರಿ ಬಿಟ್ಟಿದೆ. ವಾಣಿಜ್ಯ ವ್ಯವಹಾರ ಶೈಕ್ಷಣಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇದೆಲ್ಲದರ ನಡುವೆಯೂ ಪ್ರತಿಯೊಂದು ಒಳ್ಳೆಯದರಲ್ಲೂ ಕೆಟ್ಟದು, ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯ ಸಂಗತಿಗಳು ಇರುತ್ತೆ ಅನ್ನುತ್ತಾರಲ್ಲ ಹಾಗೆಯೇ ಈ ಕೊರೊನದಿಂದಲೂ ಕೆಲವೊಂದು ಒಳ್ಳೆಯ ಬೆಳವಣಿಗೆಗಳೇ ಆಯಿತೇನೋ ಅನ್ನಿಸುತ್ತಿದೆ. ಮನುಷ್ಯ ಭೂಮಿ ಮೇಲಿರುವ ಅತ್ಯಂತ ಕ್ರೀಯಾಶೀಲ ಪ್ರಾಣಿ,ತನ್ನ ಔದ್ಯೋಗಿಕ […]
ಕಣ್ಣು ಬಿಟ್ಟು ನೋಡಿ, ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !
ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು. ನಾನಾ ಬವಣೆಗಳ ನಡುವೆಯೂ ಮಾನವನ […]
ಅವನನ್ನು ಕಣ್ಣರಳಿಸಿ ನೋಡಿ ಬಿಡಿ: ನಿಮಗೂ ಅವನ ಮೇಲೆ ಪ್ರೀತಿಯಾಗ್ತದೆ !
♥ಸ್ವಾತಂತ್ರ್ಯ ಎ.ಎನ್ ಬರಡು ಭೂಮಿಯಲ್ಲಿರುವ ಮಣ್ಣ ನೋಡಿ ಆಶ್ಚರ್ಯವಾಗುವುದಿಲ್ಲ, ನದಿಯಲ್ಲಿರುವ ನೀರು ನೋಡಿ ಹೊಸತ್ತು ಅನ್ನಿಸುವುದಿಲ್ಲ, ಆದರೆ ನನ್ನ ಪ್ರೀತಿಯ ಹುಡುಗನ ಸಹವಾಸದಿಂದ ಇವೆಲ್ಲವೂ ಆಕರ್ಷಕವೆನಿಸತೊಡಗಿತು.ಪ್ರೀತಿಯೆಂದರೆ ಒಂದು ಹನಿಯಷ್ಟು ನಂಬಿಕೆ, ಆಸಕ್ತಿ ಇರದ ನನಗೆ ಪ್ರೀತಿಯ ಅನುಭವ ಕೊಟ್ಟದ್ದು ನನ್ನವನು ! ಎಲ್ಲೋ ಕಳೆದು ಹೋದ ನನ್ನ ಮನಸ್ಸನ್ನು ಮತ್ತೆ ಹುಡುಕಿಕೊಟ್ಟ ಕೀರ್ತಿ ಅವನದ್ದು. ನನ್ನ ತುಂಬಾ ಸತಾಯಿಸುವ, ಪ್ರೀತಿಸುವ ಅವನು, ತನ್ನ ಪವಿತ್ರವಾದ ವಿಶಾಲ ಮನಸ್ಸಲಿ, ನನ್ನನ್ನು ಬಚ್ಚಿಟ್ಟು ಕೊಂಡಿದ್ದಾನೆ. ಬಯಸಿದ ತಕ್ಷಣ ಎಂದಿಗೂ ಸಮಯಕ್ಕೆ […]