‘ವಸುಧೈವ ಕುಟುಂಬಕಂ ಧ್ಯೇಯ ವಾಕ್ಯಕ್ಕನುಗುಣವಾಗಿ ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ದಿನಾಚರಣೆ; ಸರ್ವರಿಗೂ ಆರೋಗ್ಯ

ಲೇಖನ ಸಹಕಾರ :ಶರೋನ್ ಶೆಟ್ಟಿ ಆಯುರ್ವೇದದ ದೇವರು ಧನ್ವಂತರಿಯ ಗೌರವಾರ್ಥವಾಗಿ ಆಯುರ್ವೇದ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿಯ ಆಯುರ್ವೇದ ದಿನವನ್ನು ಸಾರ್ವಜನಿಕ ಸಂದೇಶ , ಸಾರ್ವಜನಿಕ ಸಹಭಾಗಿತ್ವ ಮತ್ತು ಸಾಮೂಹಿಕ ಆಂದೋಲನದ ಮೇಲೆ ಗಮನ ಕೇಂದ್ರೀಕರಿಸಿ ಆಯೋಜಿಸಲಾಗುತ್ತಿದೆ. ಇದು ಕೇವಲ ಮಾನವರಿಗಾಗಿ ಮಾತ್ರವಲ್ಲದೆ ಪರಿಸರಕ್ಕೆ ಪೂರಕವಾಗಿಯೂ ಆಚರಿಸಲ್ಪಡುತ್ತದೆ. ಈ ವಿಷಯವು ಭಾರತದ G-20 ಅಧ್ಯಕ್ಷತೆಯ ‘ವಸುಧೈವ ಕುಟುಂಬಕಂ’ ವಿಷಯಕ್ಕೆ ಅನುಗುಣವಾಗಿದೆ ಮತ್ತು ಆಯುರ್ವೇದ ದಿನ-2023 ರ ಮುಖ್ಯ ಥೀಮ್ ಅನ್ನು ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ಎನ್ನುವ […]

World Sight Day 2023: ಕಣ್ಣಿನ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ, ವಿಶ್ವ ದೃಷ್ಟಿ ದಿನದ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ. ಪಂಚೇಂದ್ರೀಯಗಳಲ್ಲಿ ಕಣ್ಣು (Eye) ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್​ ತಿಂಗಳ ಎರಡನೇ ಗುರುವಾರದಂದು […]

ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ!

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿದು ರೋಗಿಗಳಿಗೆ ಸೂಕ್ತ ಪ್ರಮಾಣ ನೀಡುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನ ಆಚರಿಸಲಾಗುತ್ತಿದೆ. ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ! ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವೇ ಎನಿಸಿಕೊಂಡ ಫಾರ್ಮಸಿ ವಿಭಾಗ ಹಲವು ವರ್ಷಗಳಿಂದ ತನ್ನದೆ ಆದ ಛಾಪು ಮೂಡಿಸಿದೆ. 2009ರಲ್ಲಿ ಇಂಟರ್‌ನ್ಯಾಶನಲ್‌ […]

ಡೆಂಗ್ಯೂ ಜ್ವರ ಮತ್ತು ಚಿಕುಂಗುನ್ಯ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈಕೈ ಮತ್ತು ಕೀಲು ನೋವು, ವಾಕರಿಕೆ/ ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆ ನೋವು, ಬಾಯಿ, ಮೂಗು ಹಾಗೂ ವಸಡುಗಳಲ್ಲಿ ರಕ್ತಸಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ […]

ಒಗ್ಗರಣೆಗೆ ಹಾಕಿದ ಕರಿಬೇವನ್ನು ಬೇಡವೆಂದು ಬಿಸಾಡುವ ಮುನ್ನ ಅದರ ಆಯುರ್ವೇದೀಯ ಪ್ರಯೋಜನದ ಬಗ್ಗೆ ತಿಳಿದುಕೊಳ್ಳಿ!!

ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ವಿಟಮಿನ್ ಸಿ, ಐ-ಕಾರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಮುಂತಾದ ಅಂಶಗಳನ್ನು ಹೊಂದಿರುವ ಕರಿಬೇವಿನ ಸೊಪ್ಪಿನ ಆರೋಗ್ಯದ ಪ್ರಯೋಜನಗಳು ಒಂದೆರೆಡಲ್ಲ. ಭಾರತೀಯ ಆಹಾರ ಪದ್ದತಿ ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ-ತಿನಿಸಿನ ಅವಿಭಾಜ್ಯ ಅಂಗವಾಗಿರುವ ಕರಿಬೇವಿನ ಸೊಪ್ಪನ್ನು ನೋಡದವರೇ ಇಲ್ಲ. ಬಹುತೇಕ ಮಂದಿ ಆಹಾರ ಪದಾರ್ಥಗಳಲ್ಲಿ ಹಾಕಲಾಗಿರುವ ಕರಿಬೇವಿನ ಸೊಪ್ಪನ್ನು ತೆಗೆದು ಬದಿಗಿಡುತ್ತಾರೆ ಇಲ್ಲವೆ ಬಿಸಾಡುತ್ತಾರೆ. ಆದರೆ ಈ ಸೊಪ್ಪನ್ನು ಸೇವಿಸುವುದರಿಂದ ಆಗುವ ಅಗಾಧ ಪ್ರಯೋಜನಗಳಿಂದ ಅವರು ವಂಚಿತರಾಗುತ್ತಾರೆ. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ […]