ನೀವು ರೀಲ್ಸ್ ಪ್ರಿಯರೇ, ರಾಶಿ ರಾಶಿ ರೀಲ್ಸ್ ಗಳನ್ನು ಮಾಡೋದು, ಹೆಚ್ಚಿನ ರೀಲ್ಸ್ ವೀಕ್ಷಣೆಗಾಗಿ ಸಮಯ ಮೀಸಲಿಡೋದು ನಿಮ್ಮ ದಿನಚರಿಯ ಭಾಗವೇ, ಹಾಗಾದ್ರೆ ಇನ್ನು ಮುಂದಾದ್ರೂ ನೀವು ರೀಲ್ಸ್ ವೀಕ್ಷಣೆಯನ್ನು ಕಡಿಮೆಯಾಡುದೊಳಿತು!
ಹೌದು. ರೀಲ್ಸ್ ನಿಂದಾಗಿ ಕಣ್ಣಿಗೆ ಹೆಚ್ಚಿನ ಹಾನಿಯಾದ ಪ್ರಕರಣಗಳು ಸಂಶೋಧನೆಯಿಂದ ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗಾ ಕಾಣಿಸುತ್ತಲೇ ಇರುವ ರೀಲ್ಸ್ ಗಳಿಗೆ ಕಣ್ಣು ಹೊಂದಿಕೊಂಡು ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕೂಡ ಬರುತ್ತೆ ಎನ್ನುವುದು ಸಾಬೀತಾಗಿದೆ.
ಯಶೋಭೂಮಿ-ಇಂಡಿಯಾ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ನೇತ್ರಶಾಸ್ತ್ರ ಮತ್ತು ಅಖಿಲ ಭಾರತ ನೇತ್ರಶಾಸ್ತ್ರೀಯ ಸೊಸೈಟಿಯ ಸಭೆಯಲ್ಲಿ ನೇತ್ರ ತಜ್ಞರು ಈ ಗಂಭೀರ ವಿಷಯವನ್ನು ಹಂಚಿಕೊಂಡಿದ್ದಾರೆ. ಡಿಜಿಟಿಲ್ ಲೋಕ ಸತತವಾಗಿ ನಮ್ಮ ಕಣ್ಣುಗಳ ಮೇಲೆ ಒತ್ತಡ ಹಾಕುತ್ತಿದ್ದು ಇದರಿಂದ ಒಣಗಣ್ಣಿನ ಸಿಂಡ್ರೋಮ್, ಸಮೀಪದೃಷ್ಟಿ ಉಂಟಾಗಿ ಕಣ್ಣಿನ ಮೇಲೆ ಒತ್ತಡ ಅತೀಯಾಗುತ್ತಿದೆ ಎಂದು ತಜ್ಞ ತಂಡ ವರದಿ ನೀಡಿದೆ.
ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ವೈದ್ಯರ ಬಳಿ ಬಂದು ತನ್ನ ಕಣ್ಣುಗಳಲ್ಲಿ ನಿರಂತರ ಉರಿ ಶುರುವಾಗಿದೆ ಎನ್ನುತ್ತಾನೆ. ಸತತವಾದ ಪರೀಖ್ಷೆಯ ಬಳಿಕ ಅವನು ದೀರ್ಘಕಾಲ ಒಂದೆಡೆ ಕುಳಿತು ರೀಲ್ಸ್ ನೋಡುವುದರಿಂದ ಅವನ ಕಣ್ಣುಗಳು ಸಾಕಷ್ಟು ತೇವಾಂಶವನ್ನು ಉತ್ಪಾದಿಸುತ್ತಿಲ್ಲ ಎನ್ನುವ ಬಗ್ಗೆ ವೈದ್ಯರು ಕಂಡುಕೊಂಡಿದ್ದಾರೆ. ಹಾಗೂ ಆ ಹುಡುಗನಿಗೆ ಕಣ್ಣಿನ ಹನಿಗಳನ್ನು ವೈದ್ಯರು ನೀಡಿದರು.
ಹಾಗೂ ಅವನಿಗೆ ಸಲಹೆ ನೀಡಲಾಯಿತು ಅದೇನೆಂದರೆ 20-20-20 ನಿಯಮವನ್ನು ಅನುಸರಿಸುವುದು ಹೀಗೆಂದರೆ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಂಡು 20 ಅಡಿ ದೂರದಲ್ಲಿರುವ ಏನನ್ನಾದರೂ ನೋಡುವ ಪರಿಪಾಠ.
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ನಿರಂತರವಾಗಿ ಮೊಬೈಲ್ ಪರದೆಯಲ್ಲಿ ರೀಲ್ಸ್ ನೋಡುವುದರಿಂದ ಕಣ್ಣು ಮಿಟುಕಿಸುವುದು ಕೂಡ ಶೇಕಡಾ 50 ರಷ್ಟು ಕಡಿಮೆಯಾಗುತ್ತಿದೆಯಂತೆ. ಒಣ ಕಣ್ಣಿನ ಸಿಂಡ್ರೋಮ್ ಗೆ ಇದು ಮಾರಕವಾಗಲಿದೆಯಂತೆ. ಆದಷ್ಟು ರೀಲ್ಸ್ ಹಾಗೂ ಮೊಬೈಲ್ ನೋಡುವುದನ್ನು ಕಡಿಮೆ ಮಾಡದಿದ್ದರೆ ದೀರ್ಘಕಾಲದ ದೃಷ್ಟಿ ಸಮಸ್ಯೆಗಳಿಗೆ ಮತ್ತು ಕಣ್ಣುಗಳ ಮೇಲೆ ಶಾಶ್ವತ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತಂತ್ರಜ್ಞಾನನ್ನು ಮಿತವಾಗಿ ಬಳಸದೇ ಇದ್ದರೆ ಖಂಡಿತ ನಮ್ಮ ಕಣ್ಣಿನ ಆರೋಗ್ಯಕ್ಕೂಇದು ಮಾರಕವಾಗುತ್ತೆ. ನೀವು ರೀಲ್ಸ್ ನೋಡುವುದನ್ನು ಕಡಿಮೆ ಮಾಡಿ ವಾಸ್ತವದ ಚಿತ್ರಣಗಳನ್ನು ಅನುಭವಿಸಿ ಆರೋಗ್ಯ ಕಾಪಾಡಿಕೊಳ್ಳಿರಿ












