ಬೆಳಿಗ್ಗೆ ಲೇಟಾಗಿ ತಿಂಡಿ ತಿನ್ನುವ ಅಭ್ಯಾಸ ನಿಮಗಿದ್ರೆ  ಕೂಡಲೇ ಬಿಟ್ಟು ಬಿಡಿ, ಯಾಕೆ ಅನ್ನೋದನ್ನು ಒಮ್ಮೆ ಓದಿ

ಈಗೀಗ ಜೀವನಶೈಲಿ ಸಂಪೂರ್ಣ ಬದಲಾಗಿಬಿಟ್ಟಿದೆ. ಬೆಳಿಗ್ಗೆ ಎದ್ದವರೇ ಬ್ಯುಸಿಯಾಗಿಬಿಡುವ ಅದೆಷ್ಟೋ ಮಂದಿ ಸರಿಯಾಗಿ ತಿಂಡಿಯನ್ನೂ ತಿನ್ನದೇ ಆಫೀಸ್ ಕೆಲಸಕ್ಕೋ, ಮನೆ ಕೆಲಸಕ್ಕೋ ತೊಡಗುವುದು ಮಾಮೂಲು, ಆದ್ರೆ ಏನೂ ತಿನ್ನದೇ ಬೆಳಿಗ್ಗಿನ ಅದೆಷ್ಟೋ ಹೊತ್ತು ಹೊಟ್ಟೆ ಖಾಲಿಯಾಗಿರಿಸಿಕೊಳ್ಳುವವ ಜನರು ಹೆಚ್ಚಿದ್ದಾರೆ. ಅಂತವರಿಗೋಸ್ಕರವೇ ಈ ಮಾಹಿತಿ. ಬೆಳಿಗ್ಗೆ ತುಂಬಾ ಹೊತ್ತಿನವರೆಗೂ ಏನೂ ತಿನ್ನದೇ ಇದೋದ್ರಿಂದ ನಮ್ಮ ಆರೋಗ್ಯದ ಮೇಲಾಗುವ ಗಂಭೀರ ಸಮಸ್ಯೆಗಳು ಅಷ್ಟಿಷ್ಟಲ್ಲ.

ಸಾಮಾನ್ಯ ಮಹಿಳೆಯರು ಬೆಳಿಗ್ಗೆ ಎದ್ದಾಗಿನಿಂದ ಸರಿಯಾಗಿ ತಿಂಡಿ ತಿನ್ನದೇ ಮಕ್ಕಳಿಗೆ ಸ್ಕೂಲ್ ಗೆ ಕಳಿಸೋದ್ರಲ್ಲಿ, ಅವರಿವರ ಆರೈಕೆ ಮಾಡೋದ್ರಲ್ಲಿ ಜಾಸ್ತಿ ಸಮಯ ಕಳೆದು ಸರಿಯಾಗಿ ತಿಂಡಿಯನ್ನೂ ತಿನ್ನದೇ ಕೆಲಸ ಮಾಡೋದ್ರಿಂದ ಬಹಳ ಬೇಗ ಆರೋಗ್ಯದ ಸಮಸ್ಯೆಗೆ ಒಳಗಾಗುತ್ತಾರಂತೆ. ತುಂಬಾ ಮಹಿಳೆಯರು ಮಾತ್ರವಲ್ಲ ಪುರುಷರೂ ಕೂಡ ಬೇರೆ ಬೇರೆ ಒತ್ತಡಗಳಿಗೊಳಗಾಗಿ ತಿಂಡಿ ತಿನ್ನುವಾಗ ಸಮಯ 11 ಮೀರಿರುತ್ತದೆ. ಮಹಾನಗರದಲ್ಲಿ ವಾಸಿಸುವ ಬಹುತೇಕ ಮಂದಿ ತಡವಾಗಿ ಎದ್ದು ಬೆಳಿಗ್ಗೆ ತಿಂಡಿಯನ್ನೇ ತಿನ್ನದೇ ಮಧ್ಯಾಹ್ನ ಊಟವನ್ನೇ ಮಾಡುವ ಸಂಪ್ರದಾಯ ಹೊಂದಿದ್ದಾರೆ. ಈ ಅಭ್ಯಾಸ ಸುಮಾರು 100 ರಷ್ಟು ವಿವಿಧ ರೋಗಗಳನ್ನು ಆಹ್ವಾನಿಸಿದಂತೆ ಎಂದು  ಡಾ. ವಿ.ಕೆ. ರಾಂಚಿಯ ಖ್ಯಾತ ಆಯುರ್ವೇದ ತಜ್ಞ ಪಾಂಡೆ ಹೇಳುತ್ತಾರೆ.

ಬೆಳಿಗ್ಗೆ ತಡವಾಗಿ ತಿಂಡಿ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲವು (ಆ್ಯಸಿಡ್​​ ಅಂಶ) ಸಂಗ್ರಹವಾಗಲು ಪ್ರಾರಂಭಿಸುತ್ತದೆಯಂತೆ ಇದರಿಂದ ವಿವಿಧ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈ ಆಮ್ಲವು ಹೊಟ್ಟೆಯೊಳಗೆ ಸಂಗ್ರಹವಾಗಿ ಹೊಟ್ಟೆಯ ಒಳ ಪದರವನ್ನು ಹಾನಿಮಾಡುತ್ತದೆ, ಆಮ್ಲೀಯತೆ (ಗ್ಯಾಸ್​ಟ್ರಿಕ್​)ಕೂಡ ಉಂಟಾಗುವುದು ಇದರಿಂದಲೇ. ಭವಿಷ್ಯದಲ್ಲಿ ಇದು ತುಂಬಾ ಡೇಂಜರಸ್ ಆಗಿದೆ.

ಹಾಗಾಗಿ ಬೆಳಿಗ್ಗೆ 8 ರಿಂದ 9 ರ ನಡುವೆ ಏನನ್ನಾದರೂ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡರೆ ಆರೋಗ್ಯ ಆರಾಮಾಧಾಯಕವಾಗಿರುತ್ತದೆ. ಹಣ್ಣು, ತರಕಾರಿ, ಆರಾಮಾದಾಯಕ ತಿಂಡಿಗಳನ್ನು ಈ ಸಮಯದಲ್ಲಿ ತಿಂದರೆ ಒಳ್ಳೆಯದು, ಬೆಳಿಗ್ಗೆ ಸಮಯ ಕಡಿಮೆ ಇದ್ದರೆ ರಾತ್ರಿಯೇ ಹಣ್ಣುಗಳನ್ನು ನೆನೆಯಿಸಿ, ದಾನ್ಯಗಳನ್ನು ನೆನೆಸಿ ಬೆಳಿಗ್ಗೆ ತಿಂದರೆ ಒಳ್ಳೇದು. ನಮ್ಮ ಆರೋಗ್ಯ ನ್ಮಮ ಕೈಯಲ್ಲಿ ಎಂದು ಹೇಳುವುದು ಇದೇ ಕಾರಣಕ್ಕೆ ಇನ್ನಾದರೂ ತುಂಬಾ ಹೊತ್ತಾದ ಮೇಲೆ ತಿನ್ನುವ ಅಭ್ಯಾಸ ಬಿಟ್ಟುಬಿಡಿ