ಪೌಷ್ಟಿಕ ಆಹಾರವೂ ವಿಷವಾಗಬಹುದು ಜೋಕೆ ! ವಿರುದ್ದ ಆಹಾರ ಸೇವನೆ ಬಗ್ಗೆ ಡಾ.ಹರ್ಷಾ ಕಾಮತ್ ಹೇಳ್ತಾರೆ ಕೇಳಿ

ಆಯುರ್ವೇದದಲ್ಲಿ ಆಹಾರಕ್ಕೆ ಅಪಾರ ಮಹತ್ವವಿದೆ. ಆರೋಗ್ಯಕ್ಕೆ ಪೂರಕವಾದ ಆಹಾರ ಕ್ರಮವು ನಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆ. ಆದರೆ ನಿಮಗೆ ಗೊತ್ತಾ? ನಾವು ಸೇವಿಸುವ ಪೌಷ್ಟಿಕ ಆಹಾರ ಕೂಡ ವಿಷವಾಗಿ ಪರಿಣಮಿಸಬಹುದು,ಮತ್ತು ನಮ್ಮಆರೋಗ್ಯಕ್ಕೆ ಮಾರಕವಾಗಬಲ್ಲದು! ಹೌದು ಇದು ನಿಜ. ಇದರ ಉಲ್ಲೇಖ ಆಯುರ್ವೇದದಲ್ಲಿದೆ. ಬೇರೆಬೇರೆ ಕಾರಣಗಳಿಂದ ದಿನ ನಿತ್ಯದಲ್ಲಿ ಸೇವಿಸುವ ಆಹಾರವೇ ನಮ್ಮ ದೇಹದೊಳಗೆ ನಂಜಾಗಿ ಪರಿವರ್ತಿತವಾಗಿ ಕಾಲಕ್ರಮೇಣ ಬೇರೆ ಬೇರೆ ರೋಗಗಳನ್ನು ಉಂಟುಮಾಡಬಲ್ಲದು. ಇದನ್ನು ವಿರುದ್ಧ ಅನ್ನ ಅಥವಾ ವಿರುದ್ಧ ಆಹಾರ ಅಂತ ಕರೆಯುತ್ತೇವೆ. ಏನು ಹೇಳುತ್ತೆ ಆಯುರ್ವೇದ? […]
ನಿದ್ದೆ ಮಾಡೋದಕ್ಕೆ ಇರೋ ಈ ನಿಯಮ ಪಾಲಿಸಿದ್ರೆ ನೀ ಗೆದ್ದೆ : ಸುಖವಾಗಿ ಮಲಗಲು ಇಲ್ಲಿದೆ ಟಿಪ್ಸ್

ಮಲಗಿದಾಗೆಲ್ಲಾ ನಿದ್ದೆ ಬರುತ್ತದೆಯೇ…? ಸಂತೆಯಲ್ಲೂ ಮಲಗಿದರೆ ನಿದ್ರಾದೇವಿ ಮುತ್ತಿಕೊಳ್ಳುತ್ತಾಳಾ? ಅಬ್ಬಾ ಈ ತರ ಮಲಗೋದು ಎಷ್ಟ್ ಮಜಾ ಅಲ್ವಾ, ಆಹಾ ನಿದ್ದೆ! ಅಂತ ಖುಷಿ ಪಡೋದಲ್ಲ ನೀವು, ಹೊತ್ತು ಗೊತ್ತು ಇಲ್ಲದೇ ನಿದ್ದೆ ಮಾಡೋದು ತಪ್ಪು ಅನ್ನುತ್ತೆ ಆಯುರ್ವೇದ. ಸಾಮಾನ್ಯವಾಗಿ ಹಲವರು ಮಧ್ಯಾಹ್ನದ ಹೊತ್ತಲ್ಲಿ ಗಡದ್ದಾಗಿ ನಿದ್ದೆ ಹೊಡಿಯುತ್ತಾರೆ. ಅದು ಕೂಡ ಆಯುರ್ವೇದದಲ್ಲಿ ನಿಷಿದ್ಧ ಅಂತಿದೆ. ಹಾಗಂತ ನೀವು ಕೂತು ಮಲಗಬಹುದಂತೆ ! ಆದ್ರೆ ಇದಕ್ಕೂ ಒಂದಷ್ಟು ನಿಯಮ ಫಾಲೋ ಮಾಡಿದ್ರೆ ಬೆಸ್ಟ್. ಮಲಗೋಕೂ ಇದೆ ರೂಲ್ಸು, […]