ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆ ಹೋಗಲಾಡಿಸೋದು ಹೇಗೆ?

ರಮಿತಾ ಶೈಲೆಂದ್ರ ರಾವ್ ಕಾರ್ಕಳ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಮುಖದ ಆಕರ್ಷಣೆ ಹಾಗೂ ಸೌಂದರ್ಯವನ್ನು ಕಡಿಮೆ ಮಾಡುವುದು. ಈ ಸಮಸ್ಯೆಗೆ ನಾವು ನಿತ್ಯವು ಕೆಲವು ಆರೈಕೆ ವಿಧಾನಗಳನ್ನು ಅನುಸರಿಸಿದರೆ ಉಪಶಮನ ಪಡೆಯಬಹುದು. ಚರ್ಮದ ಆರೈಕೆಯ ವಿಷಯ ಬಂದಾಗ ಸಾಮಾನ್ಯವಾಗಿ ಮೊಡವೆ, ಕಲೆಗಳು, ಮುಖದ ಆಕರ್ಷಣೆ, ಫೇಸ್ ಮಾಸ್ಕ್ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಕಣ್ಣಿನ ಸುತ್ತ ಕಾಡುವ ಕಲೆಯ ಬಗ್ಗೆ ಅಷ್ಟಾಗಿ ಮಹತ್ವ ನೀಡುವುದಿಲ್ಲ. ಕಣ್ಣಿನ ಸುತ್ತಲಿನ ಚರ್ಮವು ಸೂಕ್ಷ್ಮತೆಯಿಂದ ಕೂಡಿರುತ್ತದೆ. ನಿದ್ದೆ ಇಲ್ಲದಿದ್ದರೆ, […]

ಉಗುರಿನ ಬಗ್ಗೆ ನಿರ್ಲಕ್ಷ ಮಾಡ್ಬೇಡಿ: ಚೆಂದದ ಉಗುರಿಗೆ ಒಂದಿಷ್ಟು ಟಿಪ್ಸ್ ಗಳು

ಕೈ-ಕಾಲಿನ ಬೆರಳುಗಳ ಸೌಂದರ್ಯ ಹೆಚ್ಚಿಸುವುದೇ ಉಗುರುಗಳು. ಅಂತದ್ರಲ್ಲಿ ಉಗುರಿನ ಬಗ್ಗೆ ಕಾಳಜಿಯನ್ನು ವಹಿಸದವರು ಯಾರಿದ್ದಾರೆ ಹೇಳಿ.ಸ್ತ್ರೀಯರಿಗಂತೂ ತಮ್ಮ ಉಗುರುಗಳು ಹೆಚ್ಚು ಆಕರ್ಷಕ, ಸುಂದರವಾಗಿ ಕಾಣಬೇಕೆಂಬ ಆಸೆ ಜಾಸ್ತಿ ಇರುತ್ತದೆ. ಈಗಿನ ಜೀವನ ಶೈಲಿ ಹಾಗೂ ಕೆಲಸಗಳ ನಡುವೆ ಉಗುರಿನ ಆರೈಕೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಕಷ್ಟದ ವಿಷಯ. ಉಗುರನ್ನು ಕೇವಲ ಸುಂದರವಾಗಿಡುವುದಲ್ಲ, ಸುಂದರವಾಗಿಡುವುದರ ಜೊತೆಗೆ ಉಗುರಿನ ಸ್ವಚ್ಛತೆಯು ಬಹಳ ಮುಖ್ಯ. ಉಗುರು ಸ್ವಚ್ಛವಾಗಿದ್ದಷ್ಟು ನಮ್ಮ ಆರೋಗ್ಯ ಕೂಡಾ ಹೆಚ್ಚು ಹದಗೆಡುವುದಿಲ್ಲ. ಉಗುರಿನ ಸಂದಿಗಳಲ್ಲಿ ಉಳಿಯುವ ಕೊಳೆ […]

ತುಟಿಯ ಅಂದ ಚೆಂದ ಕಾಪಾಡೋದು ತುಂಬಾ ಮುಖ್ಯ ಯಾಕಂದ್ರೆ !

ಸುಂದರವಾದ ಮುಖಕ್ಕೆ ನಗು ಎಷ್ಟು ಮುಖ್ಯವೋ ಹಾಗೆ ತುಟಿಯ ಅಂದವು ಅಷ್ಟೇ ಮುಖ್ಯ. ಮೃದುವಾದ ತುಟಿಗಳು ಯಾರಿಗೆ ಇಷ್ಟ ಇಲ್ಲ ಹೇಳಿ, ಒಡೆಯುವ ತುಟಿಗಳನ್ನು ರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ, ತುಟಿಗಳ ಅಂದ ಹಾಳಾಗುತ್ತದೆ. ಕೆಲವೊಮ್ಮೆ ಒಡೆದ ತುಟಿಗಳಿಂದ ರಕ್ತ ಬರುವುದೂ ಉಂಟು, ಈ ವೇಳೆ ಸಾಕಷ್ಟು ಉರಿ, ನೋವು ಕಾಣಿಸಿಕೊಳ್ಳುತ್ತದೆ. ತುಟಿಗಳು ಒಣಗಿದ ಕೂಡಲೇ ಕೆಲವರು ತುಟಿಗಳಿಗೆ ಎಂಜಲು ಹಾಕುತ್ತಾರೆ. ಇದರಿಂದ ತುಟಿಗಳು ಒಡೆಯುತ್ತವೆ. ಎಂಜಲು ಹಾಕುವುದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ. ನಾವು […]

ನಾನು ದಪ್ಪ ಇದ್ದೀನಿ ಸಣ್ಣಗಾಗಬೇಕು ಅಂತಿದ್ದೀರಾ? ಇಲ್ಲಿದೆ ಅದ್ಭುತ ಟಿಪ್ಸ್

ಅತಿಯಾದ ದೇಹದ ತೂಕ ಹೊಂದುವುದು ಅನೇಕ ಖಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಮಿತಿಯಾದ ದೇಹ ತೂಕ ಹೊಂದುವುದರಿಂದ ಆಯಸ್ಸು ಹೆಚ್ಚಾಗುತ್ತದೆ. ಈಗಿನ ಆಹಾರ ಕ್ರಮ, ಜೀವನ ಶೈಲಿ, ಅತಿಯಾದ ಒತ್ತಡ ದೇಹದ ತೂಕ ಹೆಚ್ಚಲು ಕಾರಣವಾಗಿದೆ. ಕೆಲವರು ಅತಿಯಾಗಿ ತಿಂದರೆ, ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದರಿಂದಲೂ ತೂಕ ಹೆಚ್ಚಾಗುತ್ತದೆ. ಆಹಾರ ಸೇವಿಸದೇ ಇರುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಸಮಯಕ್ಕೆ ಸರಿಯಾಗಿ ಆರೋಗ್ಯಯುತ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸಿಂಥಿಯಾ ಮೆಲ್ವಿನ್ ಅವರ “ನಮ್ಮ […]

ನಿಮಗೆ ಸನ್ ಬರ್ನ್ ಸಮಸ್ಯೆ ಇದ್ಯಾ: ಇಲ್ಲಿದೆ ಸುಲಭ ಮನೆಮದ್ದು!

ಬಿಸಿಲಿಗೆ ಮೈ ಯೊಡ್ಡಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಅಲ್ವಾ? ಆದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ತಿಳಿಬಿಸಿಲಿಗೆ ಮೈಯೊಡ್ಡಬೇಕು ಅನ್ನೋದು ನಿಮಗೆ ಗೊತ್ತಿರಲಿ. ಯಾಕೆಂದರೆ ಬೇರೆ ಸಮಯದಲ್ಲಿ ಬಿಸಿಲಿನಲ್ಲಿ ಇರುವಂತಹ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುವುದು. ದೀರ್ಘಕಾಲ ತನಕ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಪರಿಣಾಮವಾಗಿ ತ್ವಚೆಯಲ್ಲಿ ಸುಟ್ಟ ಸಮಸ್ಯೆಯು ಕಾಣಿಸಬಹುದು. ಇವುಗಳನ್ನೇ ನಾವು ಸನ್ ಬರ್ನ್ ಎಂದು ಕರೆಯುತ್ತೆವೆ. ಇದರ ಸಮಸ್ಯೆ ಚರ್ಮ ಎದ್ದು […]