ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆ ಹೋಗಲಾಡಿಸೋದು ಹೇಗೆ?

ರಮಿತಾ ಶೈಲೆಂದ್ರ ರಾವ್ ಕಾರ್ಕಳ

ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಮುಖದ ಆಕರ್ಷಣೆ ಹಾಗೂ ಸೌಂದರ್ಯವನ್ನು ಕಡಿಮೆ ಮಾಡುವುದು. ಈ ಸಮಸ್ಯೆಗೆ ನಾವು ನಿತ್ಯವು ಕೆಲವು ಆರೈಕೆ ವಿಧಾನಗಳನ್ನು ಅನುಸರಿಸಿದರೆ ಉಪಶಮನ ಪಡೆಯಬಹುದು.
ಚರ್ಮದ ಆರೈಕೆಯ ವಿಷಯ ಬಂದಾಗ ಸಾಮಾನ್ಯವಾಗಿ ಮೊಡವೆ, ಕಲೆಗಳು, ಮುಖದ ಆಕರ್ಷಣೆ, ಫೇಸ್ ಮಾಸ್ಕ್ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಕಣ್ಣಿನ ಸುತ್ತ ಕಾಡುವ ಕಲೆಯ ಬಗ್ಗೆ ಅಷ್ಟಾಗಿ ಮಹತ್ವ ನೀಡುವುದಿಲ್ಲ. ಕಣ್ಣಿನ ಸುತ್ತಲಿನ ಚರ್ಮವು ಸೂಕ್ಷ್ಮತೆಯಿಂದ ಕೂಡಿರುತ್ತದೆ. ನಿದ್ದೆ ಇಲ್ಲದಿದ್ದರೆ, ಆಯಾಸವಾಗಿದ್ದರೆ ಅಥವಾ ಇನ್ಯಾವುದೋ ಔಷಧಗಳ ಅಡ್ಡ ಪರಿಣಾಮ ಉಂಟಾಗಿದ್ದರೆ ಕಣ್ಣುಗಳ ಸುತ್ತ ಉಬ್ಬು ಹಾಗೂ ಗಾಢವಾದ ಕಪ್ಪು ಬಣ್ಣವು ಕಾಣಿಸಿಕೊಳ್ಳುವುದು.

 ನೀರು 


ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗಿದ್ದರೆ ದಿನಕ್ಕೆ 10 ಲೋಟ ನೀರು ಕುಡಿಯಬೇಕು. ಹಣ್ಣುಗಳ ಜ್ಯೂಸ್ ಕುಡಿಯಿರಿ. ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು.

 ಸೌತೆಕಾಯಿಂದ ಆರೈಕೆ

ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗೆಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಸೌತೆಕಾಯಿ ಪೀಸ್ ಇಡುವ ಬದಲು ಅದರ ರಸವನ್ನು ಕಣ್ಣಿನ ಸುತ್ತ ಹಚ್ಚಿದರೂ ಸಾಕು ಕಪ್ಪು ಕಲೆ ಕಡಿಮೆಯಾಗುವುದು.

 ಅರಿಶಿಣ ಪುಡಿ ಮತ್ತು ಪೈನಾಪಲ್ ರಸ 

ಅರಿಶಿಣ ಪುಡಿಯನ್ನು ಪೈನಾಪಲ್ ಜ್ಯೂಸ್ ಜೊತೆ ಮಿಶ್ರಣ ಮಾಡಿ ಕಣ್ಣಿನ ಸುತ್ತಾ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಕಣ್ಣಿನ ಸುತ್ತ ಉಂಟಾಗಿರುವಾಗ ಕಪ್ಪು ಕಲೆ ಸಂಪೂರ್ಣವಾಗಿ ಕಡಿಮೆಯಾಗುವುದು.

ಪುದೀನಾ ರಸ 

ಪುದೀನಾ ಎಲೆಯ ರಸವನ್ನು ಹಿಂಡಿ ಅದನ್ನು ಕಣ್ಣಿನ ಸುತ್ತ ಹಚ್ಚಿದರೂ ಕಪ್ಪು ಕಲೆಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.

ಹಗಲು & ರಾತ್ರಿ ಆರೈಕೆ : ರಾತ್ರಿ ಹೊತ್ತು ಮಲಗುವ ಮುನ್ನ ಕಣ್ಣಿನ ಕೆಳಭಾಗದಲ್ಲಿ ದಪ್ಪ ಕೆನೆ, ಬಾದಾಮಿ ಎಣ್ಣೆ, ಹರಳೆಣ್ಣೆಯಂತಹ ವಟಮಿನ್ ಭರಿತ ಎಣ್ಣೆಯನ್ನು ಅನ್ವಯಿಸಬೇಕು. ಅದೇರೀತಿ ಹಗಲಿನಲ್ಲಿ ಸನ್‍ಸ್ಕ್ರೀನ್ ಕ್ರೀಮ್ ಅನ್ನು ಅನ್ವಯಿಸಿಕೊಳ್ಳಲು ಮರೆಯಬಾರದು. ವಿಶೇಷವಾಗಿ ಕಣ್ಣಿನ ಮೇಲಿನ ರೆಪ್ಪೆಯ ಭಾಗಗಳಿಗೂ ಅನ್ವಯಿಸಬೇಕು. ಸಾಮಾನ್ಯವಾಗಿ ಅದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ.

 ಕಣ್ಣಿನ ವ್ಯಾಯಾಮ 

ಕಣ್ಣಿಗೆ ಕೊಂಚ ವ್ಯಾಯಾಮವನ್ನು ನೀಡಿದರೆ ಕಣ್ಣಿನ ಆರೋಗ್ಯ ಹಾಗೂ ಅದರ ಸುತ್ತಲಿನ ಚರ್ಮವು ಬಿಗಿತ ಹಾಗೂ ಆರೋಗ್ಯದಿಂದ ಕೂಡಿರುತ್ತದೆ. ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡು ಎರಡು ನಿಮಿಷಗಳ ಕಾಲ ಹಿಡಿದಿಡಿ. ನಂತರ ನಿಧಾನವಾಗಿ ಕಣ್ಣು ಬಿಡಿ. ಮತ್ತೆ ಅದೇ ಕ್ರಮವನ್ನು ಅನುಸರಿಸಿ. ಹೀಗೆ ಪ್ರತಿದಿನ ಐದು ಬಾರಿ ಮಾಡುವುದರಿಂದ ಕಣ್ಣಿನ ಆರೋಗ್ಯವು ಸುಧಾರಿಸುವುದು. ಕಣ್ಣಿನ ಸುತ್ತಲಿನ ಭಾಗವು ಯೌವ್ವನದಿಂದ ಕೂಡಿರುತ್ತದೆ.

 ಸೂಕ್ತ ನಿದ್ರೆ 


ಸೂಕ್ತ ಅವಧಿಗಳ ನಿದ್ರೆ ಮಾಡುವುದರಿಂದ ಕಣ್ಣುಗಳ ಆರೋಗ್ಯ ಹಾಗೂ ಮುಖದ ಚರ್ಮವು ಆರೋಗ್ಯಕರವಾಗಿ ಹಾಗೂ ಆಕರ್ಷಕವಾಗಿ ಇರುತ್ತದೆ. ಇಲ್ಲವಾದರೆ ಆಯಾಸ ಹಾಗೂ ಮಂಕಾದ ತ್ವಚೆಯು ನಮ್ಮ ಆಕರ್ಷಣೆಯನ್ನು ಕಡಿಮೆ ಮಾಡುವುದು.

ರಮಿತಾ ಶೈಲೆಂದ್ರ ರಾವ್ ಕಾರ್ಕಳ