ತುಟಿಯ ಅಂದ ಚೆಂದ ಕಾಪಾಡೋದು ತುಂಬಾ ಮುಖ್ಯ ಯಾಕಂದ್ರೆ !

ಸುಂದರವಾದ ಮುಖಕ್ಕೆ ನಗು ಎಷ್ಟು ಮುಖ್ಯವೋ ಹಾಗೆ ತುಟಿಯ ಅಂದವು ಅಷ್ಟೇ ಮುಖ್ಯ. ಮೃದುವಾದ ತುಟಿಗಳು ಯಾರಿಗೆ ಇಷ್ಟ ಇಲ್ಲ ಹೇಳಿ, ಒಡೆಯುವ ತುಟಿಗಳನ್ನು ರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ, ತುಟಿಗಳ ಅಂದ ಹಾಳಾಗುತ್ತದೆ.

ಕೆಲವೊಮ್ಮೆ ಒಡೆದ ತುಟಿಗಳಿಂದ ರಕ್ತ ಬರುವುದೂ ಉಂಟು, ಈ ವೇಳೆ ಸಾಕಷ್ಟು ಉರಿ, ನೋವು ಕಾಣಿಸಿಕೊಳ್ಳುತ್ತದೆ. ತುಟಿಗಳು ಒಣಗಿದ ಕೂಡಲೇ ಕೆಲವರು ತುಟಿಗಳಿಗೆ ಎಂಜಲು ಹಾಕುತ್ತಾರೆ. ಇದರಿಂದ ತುಟಿಗಳು ಒಡೆಯುತ್ತವೆ. ಎಂಜಲು ಹಾಕುವುದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ. ನಾವು ಸುಲಭವಾಗಿ ತುಟಿಯ ಆರೈಕೆ ಮಾಡೋಣ ರಮಿತಾ ಶೈಲೆಂದ್ರ ರಾವ್  ಬರಹ

 

ನೀರು


ತುಟಿಗಳು ಒಣಗುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಹೆಚ್ಚೆಚ್ಚು ನೀರು ಕುಡಿಯಬೇಕು. ಪ್ರತಿದಿನ 2.5 ಲೀಟರ್ ಆದರೂ ನೀರು ಕುಡಿಯಿರಿ.

ಕೊಬ್ಬರಿ ಎಣ್ಣೆ


ತುಟಿಗಳು ಮೃದುವಾಗಿರಬೇಕಿದ್ದರೆ, ಕೊಬ್ಬರಿ ಎಣ್ಣೆ ನೊಂದಿಗೆ ಒಂದು ಹನಿ ರೋಸ್ ವಾಟರ್ ಮಿಕ್ಸ್ ಮಾಡಿಕೊಂಡು ತುಟಿಗಳಿಗೆ ಹಚ್ಚಬೇಕು.

ಜೇನು ತುಪ್ಪ

ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಮಾಯಿಶ್ಚರೈಸರ್ ಇದ್ದಂತೆ. ತುಟಿಗಳ ಮೇಲೆ ಜೇನುತುಪ್ಪವನ್ನು ನೇರವಾಗಿ ಹಚ್ಚಬಹುದು. ಇಲ್ಲದೇ ಹೋದರೆ, ಮಲಗುವುದಕ್ಕೂ ಮುನ್ನ ಗ್ಲಿಸರಿನ್ ಜೊತೆಗೆ ಜೇನುತುಪ್ಪ ಸೇರಿಸಿ ಹಚ್ಚಿದರೆ, ಫಲಿತಾಂಶ ಅತ್ಯುತ್ತಮವಾಗಿರುತ್ತದೆ.

ಹಾಲಿನ ಕೆನೆ


ಹಾಲಿನ ಕೆನೆಯನ್ನು ತುಟಿಗಳಿಗೆ ಹಚ್ಚಿ 10 ನಿಮಿಷಗಳ ಕಾಲ ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ ತುಟಿಗಳನ್ನು ನಯವಾಗಿ ಒರೆಸಬೇಕು. ಪ್ರತಿನಿತ್ಯ ಹೀಗೆ ಮಾಡುವುದರಿಂದ ತುಟಿಗಳ ಬಣ್ಣ ಕೂಡ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

ಲಿಪ್ ಬಾಲ್ಮ್
ಸದಾಕಾಲ ಲಿಪ್ ಬಾಲ್ಮ್ ಇಟ್ಟುಕೊಂಡಿರಿ. ತುಟಿಗಳು ಒಡೆಯದಂತೆ ನೋಡಿಕೊಳ್ಳಲು ತುಪ್ಪ, ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಅತ್ಯಂತ ಉಪಯೋಗಕಾರಿಯಾಗಿದೆ. ಇದರಿಂದ ತುಟಿಗಳನ್ನು ಉತ್ತಮವಾಗಿ ರಕ್ಷಣೆ ಮಾಡಿಕೊಳ್ಳಬಹುದು.

ರಮಿತಾ ಶೈಲೆಂದ್ರಾ ರಾವ್ ಕಾರ್ಕಳ