ಗಂಡಸರ ಸಮಸ್ಯೆ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ? ಗಂಡಸರ ಮಾನಸಿಕ ಆರೋಗ್ಯ ಕುಸಿಯುತ್ತಿದೆ!

“ನೀನು ಗಂಡು ಹುಡ್ಗ, ನೀನು ಅಳೋ ಹಾಗಿಲ್ಲ” “ಗಂಡಸರು ಅಂದ್ರೆ ಮನಸ್ಸು ಗಟ್ಟಿ ಇರತ್ತೆ ನಿಮ್ಗೆ.. ಯಾವುದೇ ರೀತಿ ಸಹಾಯ ಬೇಕಾಗಲ್ಲ” ಇಂತಹ ಮಾತುಗಳನ್ನು ದಿನನಿತ್ಯ ನಾವು ಕೇಳುತ್ತಲೇ ಇರುತ್ತೇವೆ. ಪುರುಷರು ಅಂದ್ರೆ ಮಾನಸಿಕವಾಗಿ ತುಂಬಾ ಗಟ್ಟಿ, ಅವರಿಗೆ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಬರುವುದಿಲ್ಲ ಎಂಬ ಭಾವನೆ ಬಹುತೇಕರಿಗೆ ಇದೆ. ಇಂದು ನವೆಂಬರ್ ೧೯ನ್ನು ವಿಶ್ವ ಪುರುಷರ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಪುರುಷರ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದಿ, ನಮ್ಮಲ್ಲಿರುವ ತಪ್ಪು […]
ಈ ವಸ್ತುಗಳನ್ನು ಆಹಾರವಾಗಿ ಬಳಸಿದರೆ ಕಾಯಿಲೆ ನಿಮ್ಮ ಹತ್ರ ಸುಳಿಯೋದಿಲ್ಲ!ರಾಷ್ಟ್ರೀಯ ಆಯುರ್ವೇದ ದಿನದ ವಿಶೇಷ ಟಿಪ್ಸ್

ಇಂದು ಆಯುರ್ವೇದ ದಿನಾಚರಣೆ. ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ದಿನವಿದು. ಭಾರತದ ಪಾಲಿಗೆ ಆಯುರ್ವೇದ ಎನ್ನುವುದು ನಿಜಕ್ಕೂ ಒಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲವೇ ಭಾರತ. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ಒಂದು ಕಾಲದಲ್ಲಿ ನಮ್ಮಲ್ಲಿ ಮಾತ್ರ ವಿಶಿಷ್ಠ ಸ್ಥಾನವಿತ್ತು. ಆದರೆ, ಅದು ಈಗ ಲೋಕಕ್ಕೆ ಬೆಳಕನ್ನು ನೀಡುವ ನೆಮ್ಮದಿಯನ್ನು ಕಂಡುಕೊಳ್ಳುವ ಹೊಸ ದಾರಿಯಾಗಿದೆ. […]
ನೀವು ಕಾಫಿ ಪ್ರಿಯರೇ? ಹಾಗಾದ್ರೆ ಕಾಫಿ ಹೀರುವ ಮೊದಲು ಈ ವಿಷ್ಯಗಳು ನಿಮಗೆ ಗೊತ್ತಿರಲಿ

ಕಾಫಿ ಹೀರುತ್ತಾ ಮಧುರ ಕ್ಷಣಗಳನ್ನು ಕಳೆಯುವ ಅಭ್ಯಾಸ ತುಂಬಾ ಮಂದಿಗಿದೆ. ಹಾಗೆಯೇ ಕಾಫಿ ಕುಡಿಯುವ ಚಟ ಕೂಡ ಅಧಿಕ ಮಂದಿಗಿದೆ.ಒಂದು ಕಾಫಿ ಕುಡಿಯೋದು ಎಷ್ಟು ಆರೋಗ್ಯಕರ ಎಂಬುದನ್ನು ಹೇಳ್ತೇವೆ. ಕಾಫಿ ಕುರಿತ ಈ ಸಂಗತಿಗಳು ನಿಮಗೆ ಗೊತ್ತಿರಲಿ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಸಂಜೆ ಕಾಫಿ ಕುಡಿಯುವ ಅಭ್ಯಾಸವಿರುವವರು ಲೇಟ್ […]
ನೆನಪಿಡಿ, ನಿಮ್ಮ ಕಣ್ಣಿನ ಆರೋಗ್ಯ ಬಹಳ ಮುಖ್ಯ:ವಿಶ್ವ ದೃಷ್ಟಿ ದಿನದ ವಿಶೇಷ ಬರಹ

ಡಾ. ರೂಪಶ್ರೀ ರಾವ್ ಸರ್ವೇಂದ್ರಿಯಾಣಂ ನಯನಂ ಪ್ರದಾನಮ್ ಎಂಬ ಉಕ್ತಿಯಂತೆ ಕಣ್ಣಿನ ಮಹತ್ವ ಜಗತ್ತಿನ ಸೌಂದರ್ಯವನ್ನು ಅನುಭವಿಸಲು ಮಾನವನ ಜೀವನ ಸುಂದರವಾಗಲು ಅತೀ ಅಗತ್ಯ. ಕಣ್ಣು ಎಷ್ಟು ಶ್ರೇಷ್ಠವೋ ಅಷ್ಟೇ ಸೂಕ್ಷ್ಮ ಕೂಡ. ಕಣ್ಣಿನ ಮಹತ್ವ ಕಣ್ಣಿಲ್ಲದವನಿಗೆ ಕೇಳಿದರೆ ಹೇಳುವನು. ಕಣ್ಣಿನ ಸಮಸ್ಯೆ ಹುಟ್ಟಿದ ಮಗುವಿನಿಂದ ಹಿಡಿದು ಮುಪ್ಪಿನ ಕಾಲದವರೆಗೂ ಬರಬಹುದು. ಕಣ್ಣಿನ ಪೊರೆ ಸಮಾನ್ಯವಾಗಿ ಐವತ್ತನೇ ವಯಸ್ಸಿನಿಂದ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪೊರೆ ಇದ್ದಲ್ಲಿ ಒಂದು ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಕಣ್ಣಿನ ಒಳಭಾಗದಲ್ಲಿ ಲೆನ್ಸ್ […]
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಆಹಾರವಿದು:ವಿಶ್ವ ದೃಷ್ಟಿ ದಿನದ ಸ್ಪೆಷಲ್

ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು. ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ: ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ […]