ನವಗ್ರಹಗಳನ್ನು ಪ್ರತಿನಿಧಿಸುವ ನವರತ್ನ ಧಾರಣೆಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳು

ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳನ್ನು ಪ್ರತಿನಿಧಿಸುವ 9 ರತ್ನಗಳಾಗಿವೆ. ರತ್ನಗಳ ಗುಣಸ್ವರೂಪ ಮತ್ತು ಬಣ್ಣಗಳ ಆಧಾರದಲ್ಲಿ ಪ್ರತಿಯೊಂದು ಗ್ರಹಕ್ಕೆ ಒಂದು ರತ್ನವನ್ನು ಸೂಚಿಸಲಾಗಿದೆ. ಗುಲಾಬಿ ಬಣ್ಣವನ್ನು ಹೊಂದಿರುವ ಮಾಣಿಕ್ಯ ಅಥವಾ ರೂಬಿ ಸೂರ್ಯನಿಗೂ, ಮುತ್ತು ಚಂದ್ರನಿಗೂ, ಹವಳವನ್ನು ಕುಜನಿಗೂ, ಮರಕತ ಅಥವಾ ಪಚ್ಚೆ ಬುಧನಿಗೂ, ಪುಷ್ಯರಾಗ ಗುರುವಿಗೂ, ಹೊಳೆಯುವ ವಜ್ರ ಶುಕ್ರನಿಗೂ, ನೀಲಮಣಿ ಶನಿಗೂ, ಗೋಮೇಧಿಕಾ ರಾಹು, ವೈಢೂರ್ಯ ಅಥವಾ ಬೆಕ್ಕಿನಕಣ್ಣು ಕೇತುಗ್ರಹಕ್ಕೂ ನಿಯೋಜಿತವಾಗಿದೆ.

Traditional Settings of Navaratna Gems

ನವರತ್ನ ಖಚಿತ ಉಂಗುರ ಅಥವಾ ಆಭರಣಗಳನ್ನು ನಿರ್ದಿಷ್ಟ ರೀತಿಯಲ್ಲಿ ತಯಾರಿಸಿ ಅವುಗಳನ್ನು ಧರಿಸಲಾಗುತ್ತದೆ. ಈ ರತ್ನಗಳು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ರೂಬಿ ಅಥವಾ ಮಾಣಿಕ್ಯ

ಮಾಣಿಕ್ಯವು ನವರತ್ನದ ಪ್ರಮುಖ ರತ್ನಗಳಲ್ಲಿ ಒಂದಾಗಿದ್ದು ಇದು ಚೈತನ್ಯ, ಶುದ್ಧತೆ ಮತ್ತು ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ. ಈ ಕಲ್ಲು ಸರ್ವಶಕ್ತ ಸೂರ್ಯನನ್ನು ಪ್ರತಿನಿಧಿಸುತ್ತದೆ ಮತ್ತು ಜಾತಕದಲ್ಲಿ ದುರ್ಬಲ ಸೂರ್ಯನನ್ನು ಹೊಂದಿರುವವರು ಪ್ರಬಲವಾದ ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು ಇದನ್ನು ಧರಿಸಬಹುದು. ಇದರ ಬಣ್ಣವು ತಿಳಿ ಗುಲಾಬಿ ಬಣ್ಣದಿಂದ ಗಾಢ ರಕ್ತದ ಕೆಂಪು ಛಾಯೆಗಳವರೆಗೆ ಇರುತ್ತದೆ.

Ruby Gemstone | Ruby Stone – GIA

ನೈಸರ್ಗಿಕ ಮುತ್ತು

ಸಮುದ್ರದಾಳದಲ್ಲಿ ದೊರೆಯುವ ನೈಸರ್ಗಿಕ ಮುತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ. ಚಂದ್ರನು ಮನಸ್ಸಿನ ಭಾವನೆಗಳಿಗೆ ಕಾರಕನು. ತಮ್ಮ ಜಾತಕದಲ್ಲಿ ಚಂದ್ರನ ನಕಾರಾತ್ಮಕ ಪ್ರಭಾವವನ್ನು ಹೊಂದಿರುವ ಜನರು ಮುತ್ತುಗಳನ್ನು ಧರಿಸಬಹುದು. ಇದು ಭಾವನಾತ್ಮಕ ಸ್ಥಿರತೆ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೋಪದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

Buy Natural Pearl online | Buy Natural Natural Pearl India | Buy certified Australia Natural Pearl | Natural Pearl - GUASTER371NP

ಕೆಂಪು ಹವಳ

ಈ ಸೊಗಸಾದ ಕೆಂಪು-ಕಿತ್ತಳೆ ಬಣ್ಣದ ರತ್ನವು ಅದನ್ನು ಧರಿಸಿಕೊಂಡವರಿಗೆ ಧೈರ್ಯ, ಸ್ವಾಭಿಮಾನ, ಚುರುಕುತನ ಮತ್ತು ಸಂತೋಷದ ದಾಂಪತ್ಯ ಜೀವನ ನೀಡುತ್ತದೆ. ಉಗ್ರ ಮಂಗಳ ಗ್ರಹವು ಈ ಕಲ್ಲಿನ ಅಧಿಪತಿಯಾಗಿದೆ. ಮಂಗಳನದೋಷ ಹೊಂದಿರುವ ಜನರು ಸಾಮಾನ್ಯವಾಗಿ ಕೆಂಪು ಹವಳದ ರತ್ನಗಳನ್ನು ಧರಿಸುತ್ತಾರೆ. ಮೇಷ ಮತ್ತು ವೃಶ್ಚಿಕ ರಾಶಿಗಳು ಈ ರತ್ನದೊಂದಿಗೆ ಸಂಬಂಧ ಹೊಂದಿವೆ.

Natural Red Coral Stone For Astrological Purpose at Rs 800/carat | Pushp Vihar | Delhi | ID: 21463098930

ಗೋಮೇಧಿಕಾ/ ಗೋಮೇಧ

ಈ ಅರೆ-ಅಮೂಲ್ಯ ರತ್ನವು ರಾಹು ಗ್ರಹದೊಂದಿಗೆ ಸಂಬಂಧ ಹೊಂದಿದ್ದು, ಈ ಗ್ರಹದ ದುಷ್ಪರಿಣಾಮಗಳನ್ನು ತೊಡೆದುಹಾಕಲು ಧರಿಸಲಾಗುತ್ತದೆ. ಇದರ ಬಣ್ಣವು ಆಳವಾದ ಕಂದು ಬಣ್ಣದ ಜೇನು ಛಾಯೆಯಿಂದ ಕೆಂಪು-ಕಿತ್ತಳೆ ಬಣ್ಣಗಳಿಗೆ ಬದಲಾಗುತ್ತದೆ. ವ್ಯಸನಗಳು, ಜೂಜು, ಮಾದಕ ದ್ರವ್ಯಗಳು ಮತ್ತು ದುರಾಭ್ಯಾಸಗಳನ್ನು ತಪ್ಪಿಸಲು ಬಯಸುವ ಜನರು ಈ ಕಲ್ಲನ್ನು ಧರಿಸಬಹುದು. ಈ ಕಲ್ಲು ಧನಾತ್ಮಕ ಶಕ್ತಿ ಮತ್ತು ರಾಜಕೀಯ ಯಶಸ್ಸನ್ನು ಆಕರ್ಷಿಸುತ್ತದೆ.

Buy Gomed Stone Original Certified 9.7 Ratti at Amazon.in

ವಜ್ರ

ಪ್ರಪಂಚದ ಎಲ್ಲಾ ಮಹಿಳೆಯರ ಅತ್ಯುತ್ತಮ ಸಂಗಾತಿಯಾಗಿರುವ ವಜ್ರವು ಬುದ್ಧಿವಂತಿಕೆ, ಶಕ್ತಿ ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಸಂಕೇತಿಸುತ್ತದೆ. ಈ ಕಲ್ಲಿನೊಂದಿಗೆ ಸಂಬಂಧಿಸಿದ ರಾಶಿಗಳು ತುಲಾ ಮತ್ತು ವೃಷಭ ರಾಶಿ. ಶುಕ್ರನು ವಜ್ರಕ್ಕೆ ಅಧಿಪತಿಯಾಗಿದ್ದಾನೆ. ಈ ರತ್ನವು ಬಣ್ಣರಹಿತವಾಗಿದ್ದರೂ ಸಹ, ನೈಸರ್ಗಿಕ ವಜ್ರಗಳು ಕಾಮನಬಿಲ್ಲಿನ ಛಾಯೆಯನ್ನು ಹೊಂದಿರುತ್ತವೆ.

Pure Diamond - Kilikood - Find Malayali Businesses and Services in Canada

ನೀಲಿ ಅಥವಾ ನೀಲಮಣಿ

ಶನಿಗ್ರಹವನ್ನು ಅಧಿಪತಿಯಾಗಿ ಹೊಂದಿರುವ ಈ ನೀಲಿ ಬಣ್ಣದ ಅಮೂಲ್ಯ ರತ್ನವು ಖಿನ್ನತೆಯನ್ನು ಗುಣಪಡಿಸಲು ಉತ್ತಮವಾಗಿದೆ. ಶನಿ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ಈ ರತ್ನ ಸಹಕಾರಿ. ಆದಾಗ್ಯೂ, ಅತ್ಯಂತ ಬಲಿಷ್ಟ ರತ್ನವಾಗಿರುವುದರಿಂದ ಈ ರತ್ನದ ಧಾರಣೆಯು ಧರಿಸಿಕೊಂಡವರನ್ನು ಸಂಪೂರ್ಣವಾಗಿ ವಿನಾಶ ಮಾಡಬಲ್ಲದು ಎನ್ನುವ ನಂಬಿಕೆಯೂ ಇದೆ. ತಜ್ಞರ ಸಲಹೆ ಇಲ್ಲದೆ ಒಂಟಿ ನೀಲ ರತ್ನವನ್ನು ಧರಿಸಬಾರದು ಎನ್ನುವ ಎಚ್ಚರಿಕೆಗಳನ್ನು ನೀಡಲಾಗುತ್ತದೆ.

Buy GemsMart 5.00 Carat Kashmiri Blue Sapphire Neelam Stone Original Certified at Amazon.in

ಬೆಕ್ಕಿನ ಕಣ್ಣು ಅಥವಾ ಲೆಹ್ಸುನಿಯಾ

ಈ ಅರೆ-ಅಮೂಲ್ಯ ರತ್ನವು ಉದಾತ್ತತೆ ಮತ್ತು ದೂರದೃಷ್ಟಿಯನ್ನು ಪ್ರತಿನಿಧಿಸುತ್ತದೆ. ಬೆಕ್ಕಿನ ಕಣ್ಣುಗಳ ರೀತಿ ಕಾಣುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಕೇತು ಗ್ರಹಕ್ಕೆ ಸಂಬಂಧಿಸಿದೆ ಮತ್ತು ಬೂದು, ಜೇನು, ಕಂದು ಮತ್ತು ಇತರೆ ಬಣ್ಣಗಳಲ್ಲಿ ಕಂಡುಬರುತ್ತದೆ. ಇದು ಕುಖ್ಯಾತಿಯಿಂದ ರಕ್ಷಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ.

Cat's Eye Gemstone: Benefits of Wearing Lehsunia Stone

ಪುಷ್ಯರಾಗ

ಈ ಅಮೂಲ್ಯ ರತ್ನವು ಧನು ಮತ್ತು ಮೀನ ರಾಶಿಯವರಿಗೆ ಸಂಬಂಧಿಸಿದೆ. ಇದು ತನ್ನ ಆಳುವ ಗ್ರಹವಾದ ಗುರುವಿನ ಗುಣವನ್ನು ಆಕರ್ಷಿಸುತ್ತದೆ ಮತ್ತು ಧರಿಸಿಕೊಂಡವರಿಗೆ ಸಮೃದ್ಧಿ, ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಉತ್ಸಾಹವನ್ನು ನೀಡುತ್ತದೆ.

Buy 100% Pure Certified Sri-Lankan Pushkaraj (Kanaka Pushyaragam) Stone

ಪಚ್ಚೆ ಅಥವಾ ಪನ್ನಾ

ಪಚ್ಚೆ ರತ್ನಗಳು ಸಂವಹನ ಕೌಶಲ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಧರಿಸಿದವರಿಗೆ ಮಾನಸಿಕವಾಗಿ ಜಾಗರೂಕರಾಗಿರಲು ಸಹಾಯ ಮಾಡುತ್ತದೆ. ಇದರ ಗ್ರಹಾಧಿಪತಿ ಬುಧ, ಇದು ಮಿಥುನ ಮತ್ತು ಕನ್ಯಾ ರಾಶಿಯ ಚಿಹ್ನೆಗಳಿಗೆ ಸೂಕ್ತವಾಗಿದೆ. ಈ ರತ್ನವನ್ನು ಧರಿಸುವುದರಿಂದ ಏಕಾಗ್ರತೆಯ ಮಟ್ಟ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಬಹುದು.

Buy Panna Stone Original Certified 6.5 Ratti Natural Certified Loose Precious Emerald Gemstone at Amazon.in

ವಿ.ಸೂ: ಈ ರತ್ನಗಳನ್ನು ಧರಿಸುವ ಮೊದಲು ತಜ್ಞ ಜ್ಯೋತಿಷಿಗಳ ಬಳಿ ಸಮಾಲೋಚನೆ ನಡೆಸುವುದು ಸೂಕ್ತ. ರತ್ನಗಳ ಗುಣಮಟ್ಟ ಮತ್ತು ಪರಿಶುದ್ದತೆಗಾಗಿ ವಿಶ್ವಾಸಾರ್ಹ ಚಿನ್ನ ತಯಾರಕರನ್ನು ಸಂಪರ್ಕಿಸುವುದು ಒಳಿತು.