ಅಡುಗೆಗೆ ಯಾವ ಎಣ್ಣೆ ಬೆಸ್ಟ್, ಯಾವ ಎಣ್ಣೆಗೆ ಯಾವ ಗುಣ? ಅಡುಗೆ ಎಣ್ಣೆಯ ಈ ಸಂಗತಿಗಳನ್ನು ನೀವು ತಿಳಿದುಕೊಂಡಿರಲೇಬೇಕು!

ಅಡುಗೆ ಎಣ್ಣೆಯ ಬಳಕೆ ಬಗ್ಗೆ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಂಡಿರಲೇಬೇಕು. ಸನ್ಫ್ಲವರ್ ಎಣ್ಣೆ, ಸಾಸಿವೆ ಎಣ್ಣೆ, ತೆಂಗಿನೆಣ್ಣೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಇವುಗಳಲ್ಲಿ ಆರೋಗ್ಯಕ್ಕೆ ಒಳ್ಳೇದು ಯಾವುದು, ಇವುಗಳ ಮೂಲ ಗುಣಗಳೇನು ಎಂದು ತಿಳಿದುಕೊಂಡಿರೋದು ಕೂಡ ತುಂಬಾ ಮುಖ್ಯ. 2024ರಲ್ಲಿ ICMR ಮತ್ತು NIN ಹೊಸ ಡಯಟ್ ಗೈಡ್ಲೈನ್ಸ್ ಕೊಟ್ಟಿದ್ದಾರೆ. ಅದರಲ್ಲಿ “ಒಂದೇ ಎಣ್ಣೆಯನ್ನು ಬಳಸುವ ಬದಲು, ಬೇರೆ ಬೇರೆ ಎಣ್ಣೆಗಳನ್ನು ಮಿಕ್ಸ್ ಮಾಡಿ ಬಳಸಿ” ಎನ್ನುವ ಸಲಹೆ ನೀಡಲಾಗಿದೆ. ಯಾಕಂದ್ರೆ, ಒಂದೊಂದು ಎಣ್ಣೆಯಲ್ಲೂ ಒಂದೊಂದು ತರಹದ […]
ಈ ಒಂದು ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭ: ಸಿಕ್ಕಿದ್ರೆ ಮಿಸ್ ಮಾಡದೇ ತಿನ್ನಿ ಯಾಕಂದ್ರೆ!

ಈ ಹಣ್ಣು ತಿಂದ್ರೆ ನಿಮ್ಮ ದೇಹಕ್ಕೆ ಬೇಕಾದಷ್ಟು ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶ ಸಿಗುತ್ತೆ. ಆಗಾಗ ಈ ಹಣ್ಣು ತಿಂದ್ರೆ ಜೀರ್ಣಕ್ರೀಯೆ ಚೆನ್ನಾಗಿರುವುದರ ಜೊತೆಗೆ ಹೃದಯದ ಆರೋಗ್ಯ ಕೂಡ ಮಸ್ತ್ ಆಗಿರುತ್ತೆ. ಹೌದು ನಿಮ್ಮ ದೇಹಕ್ಕೆ ಪೋಷಕಾಂಶ ನೀಡುವ ಈ ಹಣ್ಣೇ ಡ್ರ್ಯಾಗನ್ ಫ್ರೂಟ್ . ಒಂದು ಡ್ರ್ಯಾಗನ್ ನಿಂದ ಎಷ್ಟೊಂದೆಲ್ಲಾ ಆರೋಗ್ಯ ಲಾಭ ಗೊತ್ತಾ: ಒಂದು ಡ್ರ್ಯಾಗನ್ ಹಣ್ಣು ನಿಮ್ಮ ದೈನಂದಿನ ವಿಟಮಿನ್ ಸಿ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ, […]
ಹೊಟೇಲ್ ನಲ್ಲಿ ಊಟದ ಬಳಿಕ ಸೋಂಪು ಕಾಳು ಯಾಕೆ ಕೊಡ್ತಾರೆ? ಅಸಲಿ ಕಾರಣ ಇಲ್ಲಿದೆ ನೋಡಿ !

ಹೊಟೇಲ್ ನಲ್ಲಿ ಊಟ ಮಾಡಿ ಬಿಲ್ ಕೊಡುವ ಸಮಯ ಬಂದಾಗ ಸೋಂಪು ಕಾಳಿನ ಜೊತೆಗೆ ಪುಟ್ಟ ಪುಟ್ಟ ಕಲ್ಲುಸಕ್ಕರೆಯನ್ನು ಕೊಡುವ ಕ್ರಮನ್ನು ನೀವು ನೋಡಿರುತ್ತೀರಿ. ಆ ಸೋಂಪು ಮತ್ತು ಕಲ್ಲುಸಕ್ಕರೆ ತಿಂದದ್ದೇ ಊಟ ಪರಿಪೂರ್ಣ ಆಯ್ತು ಎನ್ನುವ ಭಾವನೆ ನಿಮ್ಮಲ್ಲಿ ಮೂಡಿರುತ್ತೆ.ಆದ್ರೆ ಸೋಂಪು ಮತ್ತು ಕಲ್ಲು ಸಕ್ರೆ ಯಾಕೆ ಕೊಡ್ತಾರೆ ಇದರಿಂದ ನಮಗೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆದಾಗುತ್ತಾ ಎನ್ನುವ ಕುರಿತು ತಿಳ್ಕೊಳ್ಳೋಣ. ಹೋಟೆಲ್ನಲ್ಲಿ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ, ನಿಮಗೆ ಹೊಟ್ಟೆಯಲ್ಲಿ ಭಾರ, ಅನಿಲ […]
ನೀವು ಕಾಫಿ ಪ್ರಿಯರೇ? ಕಾಫಿ ಇಷ್ಟ ಅಂತ ಬೇಕಾಬಿಟ್ಟಿ ಕಾಫಿ ಕುಡಿಬೇಡಿ!

ಕಾಫಿ ಇಷ್ಟ ಅಂತ ಹೇಳಿ ಮಿತಿಮೀರಿ ಕಾಫಿ ಕುಡಿಯುವವರಿದ್ದಾರೆ. ಆದರೆ ಕಾಫಿ ಅತಿಯಾದರೆ ದೀರ್ಘಕಾಲಿಕ ರೋಗಗಳನ್ನು ತಂದೊಡ್ಡುವ ಸಾಧ್ಯತೆಗಳಿದ್ದು. ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಹಾಗೂ ಆತಂಕ (Anxiety) ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಏನಂತಾರೆ ವೈದ್ಯರು? ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ರೋಗಿಗಳು ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಏಕೆಂದರೆ ಕೆಲಸ ಸಮಯದಲ್ಲಿ ಕಾಫಿ ಸುಲಭವಾಗಿ ಲಭ್ಯವಿರುವ ಕಾರಣ ಅಭ್ಯಾಸವನ್ನು […]
ನೀವು ಮೀನುಪ್ರಿಯರಾ? ಹಾಗಾದ್ರೆ ಈ ಮೀನು ಸಿಕ್ರೆ ತಿನ್ನದೇ ಇರ್ಬೇಡಿ ಮತ್ತೆ!

ಮೀನೆಂದರೆ ಮಾಂಸಹಾರಿ ಪ್ರಿಯರ ಹಾಟ್ ಫೆವರೇಟ್. ಮೀನಿನ ಫ್ರೈ, ಗಸಿ, ಬೇರೆ ಬೇರೆ ರೀತಿಯ ಪಲ್ಯಗಳು ಇವರಿಗೆ ಅಚ್ಚಮೆಚ್ಚು. ಭಾರತದ ಈ ಜನಪ್ರಿಯ ಮೀನಾದ ರೋಹು ಮೀನು ನಮ್ಮ ದೇಹ ಮತ್ತು ಅಂಗಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರುಚಿಕರವಾದ ಮತ್ತು ಪೌಷ್ಟಿಕ ಮೀನು. ಹಾಗಾದ್ರೆ ಬನ್ನಿ ಈ ಮೀನಿನ ಬಗ್ಗೆ ತಿಳಿದುಕೊಳ್ಳೋಣ. ಈ ಮೀನಿನಲ್ಲಿರುವ ಆರೋಗ್ಯಕರ ಲಕ್ಷಣಗಳನ್ನು ಮೀನು ತಿನ್ನುವವರು ತಿಳಿದುಕೊಳ್ಳಲೇಬೇಕು. ಬರೀ ಈ ಮೀನು ಮಾತ್ರವಲ್ಲ, ಸಾಮಾನ್ಯವಾದ ಮೀನುಗಳಿಂದ ಆರೋಗ್ಯಕ್ಕೆ ಸಿಗುವ ಪೂರಕ ಅಂಶಗಳನ್ನೂ ಇಲ್ಲಿ […]