ಡೆಂಗ್ಯೂ ಜ್ವರ ಮತ್ತು ಚಿಕುಂಗುನ್ಯ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈಕೈ ಮತ್ತು ಕೀಲು ನೋವು, ವಾಕರಿಕೆ/ ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆ ನೋವು, ಬಾಯಿ, ಮೂಗು ಹಾಗೂ ವಸಡುಗಳಲ್ಲಿ ರಕ್ತಸಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ […]

ಒಗ್ಗರಣೆಗೆ ಹಾಕಿದ ಕರಿಬೇವನ್ನು ಬೇಡವೆಂದು ಬಿಸಾಡುವ ಮುನ್ನ ಅದರ ಆಯುರ್ವೇದೀಯ ಪ್ರಯೋಜನದ ಬಗ್ಗೆ ತಿಳಿದುಕೊಳ್ಳಿ!!

ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ವಿಟಮಿನ್ ಸಿ, ಐ-ಕಾರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಮುಂತಾದ ಅಂಶಗಳನ್ನು ಹೊಂದಿರುವ ಕರಿಬೇವಿನ ಸೊಪ್ಪಿನ ಆರೋಗ್ಯದ ಪ್ರಯೋಜನಗಳು ಒಂದೆರೆಡಲ್ಲ. ಭಾರತೀಯ ಆಹಾರ ಪದ್ದತಿ ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ-ತಿನಿಸಿನ ಅವಿಭಾಜ್ಯ ಅಂಗವಾಗಿರುವ ಕರಿಬೇವಿನ ಸೊಪ್ಪನ್ನು ನೋಡದವರೇ ಇಲ್ಲ. ಬಹುತೇಕ ಮಂದಿ ಆಹಾರ ಪದಾರ್ಥಗಳಲ್ಲಿ ಹಾಕಲಾಗಿರುವ ಕರಿಬೇವಿನ ಸೊಪ್ಪನ್ನು ತೆಗೆದು ಬದಿಗಿಡುತ್ತಾರೆ ಇಲ್ಲವೆ ಬಿಸಾಡುತ್ತಾರೆ. ಆದರೆ ಈ ಸೊಪ್ಪನ್ನು ಸೇವಿಸುವುದರಿಂದ ಆಗುವ ಅಗಾಧ ಪ್ರಯೋಜನಗಳಿಂದ ಅವರು ವಂಚಿತರಾಗುತ್ತಾರೆ. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ […]

Zumba Dance Workout: ಜುಂಬಾ ಡಾನ್ಸ್ ಮಾಡುವುದರ 4 ಪ್ರಮುಖ ಪ್ರಯೋಜನಗಳಿವು

Zumba Dance Workout: ಅನೇಕ ಜನರಿಗೆ ಜುಂಬಾ ಡ್ಯಾನ್ಸ್ ವರ್ಕೌಟ್  (Zumba Dance Workout) ಒಂದು ಹವ್ಯಾಸವಾಗಿದೆ. ಆದರೆ ಈ ರೀತಿಯ ವ್ಯಾಯಾಮವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? Zumba Dance Workout: ದೇಹವನ್ನು ಸದೃಢವಾಗಿಡಲು ಜನರು ಹಲವಾರು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ, ಆದರೆ ಒಂದು ವ್ಯಾಯಾಮವು ತುಂಬಾ ಆಸಕ್ತಿದಾಯಕವಾಗಿದೆ. ಈ ವರ್ಕೌಟ್‌ನ ಹೆಸರು ಜುಂಬಾ ಡ್ಯಾನ್ಸ್ ವರ್ಕೌಟ್ (Zumba Dance Workout). ಇದು ಇತರ ವ್ಯಾಯಾಮಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ಸ್ನಾಯುಗಳು ಟೋನ್ ಆಗುತ್ತವೆ, […]

ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಮದ್ರಾಸ್‌ ಐ ಸೋಂಕು ಹರಡುವಿಕೆ ಆತಂಕ

ವಿಜಯಪುರ/ ಧಾರವಾಡ :ಬಹುತೇಕರಲ್ಲಿ ಐ ಇನ್ಪೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ ಸೆಂಟರ್‌ಗಳೇ ಹೆಚ್ಚಿರುವ ಇರುವ ವಿಜಯಪುರ ಮತ್ತು ಧಾರವಾಡ ನಗರಗಳಲ್ಲಿ ಮದ್ರಾಸ್‌ ಐ ಭಯ ಮತ್ತಷ್ಟು ಭೀತಿ ಮೂಡಿಸಿದೆ. ಕಾರಣ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ, ಹಾಸ್ಟೆಲ್​ಗಳಲ್ಲಿ ಇರುವುದರಿಂದ ಮದ್ರಾಸ್‌ ಐ ಕಾಣಿಸಿಕೊಂಡಿದೆ. ಮದ್ರಾಸ್‌ ಐ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರೋಗಿಗಳ ಪೈಕಿ ಶೇ.30 ರಷ್ಟು ಕೋಚಿಂಗ್​ಗಾಗಿ ಬಂದ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ ವಾಸವಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಕಾಣಿಸಿಕೊಂಡ ಮದ್ರಾಸ್‌ ಐ […]

ಟೊಮೆಟೊ ಬೆಲೆ ಆಯ್ತು, ಈಗ ಹುಣಸೆಯ ಬೆಲೆಯೂ ಹೆಚ್ಚಳ

ಬೆಂಗಳೂರು: ನೂರರ ಗಡಿಯಲ್ಲಿದ್ದ ಹುಣಸೆ ಬೆಲೆ ಇದೀಗ 200ರ ಗಡಿ ತಲುಪಿದೆ.ಟೊಮೆಟೊ ದರ ಗಗನಕ್ಕೇರಿರುವ ಬೆನ್ನಲ್ಲೇ ಇದೀಗ ಹುಣಸೆ ಹುಳಿ ಬೆಲೆಯೂ ಏಕಾಏಕಿ ಏರಿಕೆಯಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳು ಒಂದೊಂದಾಗಿ ಜನಸಾಮಾನ್ಯರ ಕೈಗೆಟಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ವಾರದಿಂದೀಚೆಗೆ ಕೆಜಿಗೆ 90 ರೂ. ಇದ್ದ ಹುಣಸೆ ಬೆಲೆ ಈಗ 140ರಿಂದ 150 ರೂ.ಗೆ ಮಾರಾಟವಾಗುವ ಮೂಲಕ 50 ರೂ. ಹೆಚ್ಚಳವಾಗಿದೆ. ಇನ್ನು ಅತುಅತ್ತಮ ಗುಣಮಟ್ಟದ ಹುಣಸೆ ದರ 200ರಿಂದ 220 ರೂ ತಲುಪಿದೆ. ವರದಿಗಳ ಪ್ರಕಾರ, ಹುಳಿ ರುಚಿಯನ್ನು ಹೆಚ್ಚು […]