ಈ ಮುಟ್ಟಿನ ಬಟ್ಟಲನ್ನು ಬಳಸಿದ್ರೆ ಎಷ್ಟೊಂದೆಲ್ಲಾ ಲಾಭ! ಮಹಿಳೆಯರಿಗೆ ಮಾತ್ರವಲ್ಲ, ಹೆಣ್ಣು ಮಕ್ಕಳ ಕಾಳಜಿಯಿರುವ ಪುರುಷರಿಗೂ ಈ ವಿಷ್ಯ ಗೊತ್ತಿರಬೇಕು!ಇದು ಉಡುಪಿXPRESS.COM ಕಾಳಜಿ

ನೀವು ನಿಮ್ಮ ಹೆಂಡತಿ, ಮಗಳು, ಅಕ್ಕ- ತಂಗಿಯರ ಕುರಿತು ಕಾಳಜಿ ಇರುವ ಪುರುಷರಾಗಿದ್ದರೆ, ನಿಮ್ಮದೇ ಆರೋಗ್ಯ, ಪರಿಸರದ ಕುರಿತು ಕಾಳಜಿ ಹೊಂದಿರುವ ಮಹಿಳೆಯಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಮೆನ್ಸ್ಟ್ರುವಲ್ ಕಪ್ ಅಥವಾ ಮುಟ್ಟಿನ ಬಟ್ಟಲು ಅನ್ನೋ ಪದ ಒಮ್ಮೆಯಾದರೂ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಮುಟ್ಟು ಅನ್ನೋ ಪದವನ್ನೇ ಹೇಳಲಿಕ್ಕೆ ಹಿಂಜರಿಯುವ ಹೆಣ್ಣುಮಕ್ಕಳು ಅಥವಾ ಇದು ನಮಗೆ ಸಂಬಂಧಿಸಿದ್ದಲ್ಲ ಅಂತ ಕಡೆಗಣಿಸುವ ಗಂಡುಮಕ್ಕಳು ಎಲ್ಲರೂ ಕೂಡಾ ಏನಿದು ಮುಟ್ಟಿನ ಬಟ್ಟಲು ಅಂತ ಯೋಚನೆ ಮಾಡೇ ಮಾಡಿರುತ್ತೀರಾ. ಹಾಗಾದ್ರೆ ಈ […]

ಮನೆಯಲ್ಲೇ ಸುಲಭದಲ್ಲಿ ಅಣಬೆ ಬೆಳೆಸಿ ಒಳ್ಳೆಯ ಹಣ ಗಳಿಸಿ : ಅಣಬೆ ಕೃಷಿಯ ಬಗ್ಗೆ ಸಿಂಪಲ್ಲಾಗ್ ಹೇಳ್ತಿವಿ ಕೇಳಿ!

ಕೃಷಿ ಮಾಡಬೇಕು ಅಂದರೆ ಎಕರೆಗಟ್ಟಲೆ ಜಮೀನು, ಲಕ್ಷಗಟ್ಟಲೆ ಹೂಡಿಕೆ ಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಇಂದಿನ ದಿನಗಳಲ್ಲಿ ಅಣಬೆ (ಮಶ್ರೂಮ್) ಬೆಳೆ ಅತ್ಯಂತ ಬೇಡಿಕೆಯಲ್ಲಿದ್ದು, ಹೋಟೆಲ್ಗಳಿಂದ ಹಿಡಿದು ಮನೆಗಳವರೆಗೆ ಎಲ್ಲೆಡೆ ಗ್ರಾಹಕರಿದ್ದಾರೆ. ವಿಶೇಷವೆಂದರೆ, ಈ ಬೆಳೆಗೆ ಹೆಚ್ಚಿನ ಜಾಗವೂ ಅಗತ್ಯವಿಲ್ಲ, ದೊಡ್ಡ ಹೂಡಿಕೆಯೂ ಬೇಕಾಗಿಲ್ಲ. ಮನೆಯ ಒಂದು ಮೂಲೆಯಲ್ಲೇ ಬೆಳೆಸಬಹುದಾದ ಈ ಅಣಬೆಗಳು ಕೈತುಂಬಾ ಆದಾಯ ತರುವ ಸಾಮರ್ಥ್ಯ ಹೊಂದಿವೆ.ಬನ್ನಿ ಹಾಗಾದ್ರೆ ಅಣಬೆ ಕೃಷಿ ಹೇಗೆ ಮಾಡ್ಬೋದು ಅನ್ನೋದ್ರ […]

ನಿಮಗೆ ಆಗಾಗ ಜ್ವರ ಬರುತ್ತಾ? ಹಾಗಾದ್ರೆ ಇವನ್ನೆಲ್ಲಾ ತಪ್ಪದೇ ತಿನ್ನಲು ಶುರುಮಾಡಿ ಜ್ವರ ಹತ್ರ ಸುಳಿಯಲ್ಲ!

ಕೆಲವರಿಗೆ ಆಗಾಗ ಜ್ವರ ಬರುತ್ತಿರುತ್ತದೆ. ಸಣ್ಣ ಪುಟ್ಟ ಜ್ವರಗಳಾದರೂ ಒಂದಷ್ಟು ದಿನಗಳ ಕಾಲ ಕಂಗಾಲು ಮಾಡಿಬಿಡುತ್ತೆ. ರೋಗನಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿದಲ್ಲಿ ಇಂತಹ ಜ್ವರ ಖಂಡಿತವಾಗಿಯೂ ನಮ್ಮ ಹತ್ತಿರ ಸುಳಿಯಲ್ಲ. ಹಾಗಾದ್ರೆ ಬನ್ನಿ ಜ್ವರ ಹತ್ತಿರ ಬರದೇ ಇರಲು ಏನೆಲ್ಲಾ ತಿನ್ಬೇಕು ಅನ್ನೋದನ್ನು ನೋಡೋಣ.ಜೊತೆಗೆ ಏನು ತಿನ್ನಬಾರದು? ಆರೋಗ್ಯಕರ ಜೀವನ ಶೈಲಿ ಅಂದ್ರೆ ಏನು ಅನ್ನೋದನ್ನೂ ನೋಡೋಣ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ: ಆರೋಗ್ಯ ಕಾಪಾಡುವ ನೈಸರ್ಗಿಕ ಮಾರ್ಗ ಮಾನವ ದೇಹವನ್ನು ಸೋಂಕುಗಳಿಂದ ರಕ್ಷಿಸುವ ಪ್ರಮುಖ ಬಲವೇ […]

ಸೈಕಾಲಜಿಯ ಪ್ರಕಾರ ಇವಿಷ್ಟು ಸಂಗತಿಗಳನ್ನು ನೀವು ಎಲ್ಲರಿಗೂ ಟಾಂ ಟಾಂ ಮಾಡದೇ ಆದಷ್ಟು ಗುಟ್ಟಾಗಿರಿಸಬೇಕಂತೆ !

ಈಗಿನ  ಹೊಸ ಟ್ರೆಂಡ್ ನಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನು ಖಾಸಗಿಯಾಗಿಡೋದೇ ಕಡಿಮೆಯಾಗಿದೆ. ಎಲ್ಲವನ್ನೂ ಸ್ನೇಹಿತರ ಮುಂದೆ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಬಿಡುತ್ತೇವೆ. ಎಷ್ಟೋ ಖಾಸಗಿ ಮಾತುಗಳು ಎಲ್ಲೆಲ್ಲೂ ಸೋರಿಕೆಯಾಗುತ್ತವೆ. ಆದರೆ ನಮಗೆ ಸಂಬಂಧಪಟ್ಟ ಒಂದಷ್ಟು ಮಾಹಿತಿಗಳನ್ನು ಖಾಸಗಿಯಾಗಿಡುವುದರಿಂದ ಎಷ್ಟೋ ಚಿಂತೆಗಳನ್ನು ತಪ್ಪಿಸಬಹುದು ಮತ್ತು ನೆಮ್ಮದಿಯುತ ಜೀವನ ನಡೆಸಬಹುದು ಎನ್ನುತ್ತೆ ಸೈಕಾಲಜಿ. ಇದರಿಂದ ಮಾನಸಿಕ ನೆಮ್ಮದಿ ಕೂಡ ಹೆಚ್ಚುತ್ತದೆ. ಸೈಕಾಲಜಿ ಪ್ರಕಾರ ನಾವು ಕೆಲವೊಂದು ವಿಷಯಗಳನ್ನು ಖಾಸಗಿಯಾಗಿಡಬೇಕಂತೆ ಯಾವುದು ಆ ಸಂಗತಿಗಳು ತಿಳಿದುಕೊಳ್ಳೋಣ ಬನ್ನಿ. ಅತಿಯಾಗಿ ಹಂಚಿಕೊಳ್ಳುವುದರಿಂದ […]

ತಂಗಳು ಅನ್ನ ಎಂದು  ಸಸಾರ ಮಾಡ್ತೀರಾ? : ತಂಗಳನ್ನ ಆರೋಗ್ಯಕ್ಕೆ ಎಷ್ಟೊಂದು ಶಕ್ತಿ ಕೊಡುತ್ತೆಂದು ನಿಮಗೆ ಗೊತ್ತಾ?

ತುಂಬಾ ಮಂದಿಗೆ ತಂಗಳು ಅನ್ನವೆಂದರೆ ತಾತ್ಸಾರ ಭಾವನೆ. ಕೆಲವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಭಾವನೆ ಬೆಳೆದುಬಿಟ್ಟಿದೆ. ಹಾಗಾಗಿ ತಂಗಳು ಅನ್ನವನ್ನು ಬಿಸಾಕುವವರೇ ಜಾಸ್ತಿ. ಆದರೆ ನೆನಪಿರಲಿ ಇಂತಹ ತಂಗಳನ್ನದಲ್ಲೂ ಇದೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳು! ಹೌದು. ತಂಗಳನ್ನ ಜೀರ್ಣಕ್ರಿಯೆಯ ಆರೋಗ್ಯಕ್ಕೆ  ಪ್ರಯೋಜನಕಾರಿಯಾಗಿರುವ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಇನ್ಮುಂದೆ ತಂಗಳು ಅನ್ನವನ್ನು ಎಸೆಯುವ ಮುನ್ನ ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ತಿಳಿದುಕೊಳ್ಳಿ.