ಉಡುಪಿ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ: ಎರಡು ಆಡಿಯೋ ಕ್ಲಿಪ್ ಬಹಿರಂಗ

ಉಡುಪಿ: ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಕೋಣೆಯ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾಜೇಶ್ ಕುಂದರ್ ತಮ್ಮ ಸಹೋದ್ಯೋಗಿಗಳ ಕಿರುಕುಳದ ವಿರುದ್ದ ದೂರು ನೀಡಿದ್ದಾರೆನ್ನಲಾಗುವ ಆಡಿಯೋ ಕ್ಲಿಪ್ ಗಳು ಪೋಲೀಸರ ವಶವಾಗಿದೆ. ಮೊದಲನೆ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರಾಜೇಶ್ ಕೈಕೆಳಗೆ ಇಬ್ಬರು ಸಿಬ್ಬಂದಿ […]

ಉಡುಪಿ ಜಲಸಾರಿಗೆ ಇಲಾಖೆಯ ಟಿ ಟಿ ಎಸ್ ಫಾಯದೆರವರ ಬೀಳ್ಕೊಡುಗೆ ಸಮಾರಂಭ

ಉಡುಪಿ: ಜಲಸಾರಿಗೆ ಇಲಾಖೆ ಉಡುಪಿ ವಿಭಾಗ ವತಿಯಿಂದ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಟಿ ಟಿ ಎಸ್ ಫಾಯದೆರವರ ಬೀಳ್ಕೊಡುಗೆ ಸಮಾರಂಭ ಮಣಿಪಾಲದ ಕಂಟ್ರಿ ಇನ್ನ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನೆಡೆಯಿತು. ಉಡುಪಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಸುಮಾರು 35 ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಕಾರ್ಯ ನಿರ್ವಾಹಕ ಇಂಜಿನಿಯರ್ ಟಿ ಟಿ ಎಸ್ ಫಾಯದೆರವರನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಲಸಾರಿಗೆ ಮಂಡಳಿ ಕಾರವಾರದ ಮುಖ್ಯ […]

ದಟ್ಟ ಕಾಡಿನಲ್ಲಿ “ಗೊರಂಕ್’ ಎಂಬ ಶಬ್ಧ ಕೇಳಿದಾಗ: ಸಂದೇಶ್ ಸಾಲ್ಯಾನ್ ಬರೆದ ಹಂಟಿಂಗ್ ಪ್ರಸಂಗ

ಶಿಕಾರಿಗೆ ಹೊರಟವರನ್ನು ನೋಡುವಾಗ ನನಗೆ ಅದೆಂಥದೋ ಖುಷಿ-ಕುತೂಹಲ. ಕೇಪಿನ ಕೋವಿಯ ನಳಿಕೆಗೆ ತೆಂಗಿನ ಒಣಸಿಪ್ಪೆಯ ನಾರಿನ ಜತೆಗೆ ಗುಂಡುಗಳನ್ನು ತುಂಬಿ ಕಬ್ಬಿಣದ ಸರಳಿನಿಂದ ಒಳಗೆ ತಳ್ಳುವ ಪ್ರಕ್ರಿಯೆಯಲ್ಲಿ ಬೇಟೆಗಾರನಲ್ಲಿ ಕಂಡುಬರುವ ತನ್ಮಯತೆ ಬಹಳ ಸುಂದರವಾಗಿರುತ್ತದೆ. ಭರ್ಜರಿ ಊಟದ ಬಳಿಕ ತಾಂಬೂಲ ಹಾಕಿಕೊಳ್ಳುವವರ ಹಾಗೆ. ಸಾಮಾನ್ಯವಾಗಿ ಬೇಟೆಗಾರರು ಬೇರೆಯವರ ಕೈಗೆ ತಮ್ಮ ಕೋವಿಯನ್ನು ಕೊಡುವುದಿಲ್ಲ. ಆದರೂ ನನ್ನ ಕುತೂಹಲ ನೋಡಿ ನನ್ನ ಪರಿಚಯಸ್ಥರೊಬ್ಬರು ನನ್ನ ಕೈಗೆ ಖಾಲಿ ಕೋವಿ ಕೊಟ್ಟಿದ್ದರು. ಬಹಳ ಖುಷಿಯಿಂದ ಎತ್ತಿಕೊಂಡು, ಸುಮ್ಮನೆ ಒಂದೆಡೆ ಗುರಿ […]

ರಾಜ್ಯಾದ್ಯಂತ ಎರಡು ವಾರ ವಿಕೇಂಡ್ ಕರ್ಪ್ಯೂ; ಬೆಂಗಳೂರಿನಲ್ಲಿ ಶಾಲೆ ಬಂದ್; ಬಾರ್, ಥಿಯೇಟರ್, ಪಬ್ 50:50 ರೂಲ್ಸ್..!!

ಬೆಂಗಳೂರು: ಕೋವಿಡ್, ಓಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಜ.7ರಿಂದ ಎರಡು ವಾರ ರಾಜ್ಯಾದ್ಯಾಂತ ವಾರಾಂತ್ಯ ಕರ್ಪ್ಯೂ ( Weekend Curfew ) ಜಾರಿಗೊಳಿಸಲಾಗಿದೆ. ನೈಟ್ ಕರ್ಪ್ಯೂ ( Night Curfew ) ಮುಂದಿನ ಎರಡು ವಾರ ಮುಂದುವರೆಸಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು. ಇಂದಿನ ಸಿಎಂ ಸಭೆಯ ಬಳಿಕ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ಅವರು, ಕೋವಿಡ್ ಹೊಸ ಮಾರ್ಗಸೂಚಿಗಳು ನಾಳೆ (ಜ.5) ರಿಂದ […]

ನಿಮ್ಮ ಈ ಹವ್ಯಾಸಗಳೇ ಜೀವಕ್ಕೆ ಮಾರಕವಾಗಬಹುದು ಜೋಕೆ!

ವಯಸ್ಸು ಜಾಸ್ತಿಯಾಗುತ್ತಿದ್ದಂತೆಯೇ ಹುಮ್ಮಸ್ಸೂ ಕುಸಿಯತೊಡಗುತ್ತದೆ. ಯೌವ್ವನದಲ್ಲಿರುವ ಉಲ್ಲಾಸ ಕ್ರಮೇಣ ಮರೆಯಾಗುತ್ತದೆ.ಉಲ್ಲಾಸ ಕಡಿಮೆಯಾದಂತೆ ಆರೋಗ್ಯದಲ್ಲಿಯೂ ಏರು ಪೇರಾಗುತ್ತದೆ. ಹೀಗಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಹವ್ಯಾಸಗಳು ಎಂದರೆ ನೀವು ಒಪ್ಪಿಕೊಳ್ಳಲೇಬೇಕು.ಯಾವೆಲ್ಲಾ ಹವ್ಯಾಸಗಳಿಂದ ಆರೋಗ್ಯ ಏರುಪೇರಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಕೆಟ್ಟ ಜೀವನಶೈಲಿ, ಕೆಲವೊಂದು ಅಭ್ಯಾಸಗಳು ವ್ಯಕ್ತಿ ವಯಸ್ಸಾಗಿ ಕಾಣುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಎಲ್ಲರೂ ತಾವೂ ಯಾವಾಗಲೂ ಯಂಗ್ ಆಗಿ ಕಾಣಬೇಕೆಂದೇ ಇಷ್ಟಪಡುತ್ತಾರೆ. ಯಾವ ಹವ್ಯಾಸಗಳು ನಮಗೆ ಹೆಚ್ಚು ವಯಸ್ಸಾದಂತೆ ಕಾಣುವುದು ಎಂಬುದನ್ನು ಅರಿತುಕೊಂಡು […]