ಪ್ರಗ್ನೆಂಟ್ ಆದ್ರೆ ಮುಟ್ಟಾಗಲ್ವಂತೆ ಅಂತ ಯಾರೋ ಹೇಳಿದಾಗ ಅಳುಕು ಕಾಡಿತ್ತು: ಹುಡುಗಿಯೊಬ್ಬಳ ಪಿಸುಮಾತು
ನಾನಿನ್ನೂ ಪುಟ್ಟ ಹುಡುಗಿಯಾಗಿದ್ದೆ. ಅಪ್ಪನ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದೆ. ಆ ಮನೆ ಯಜಮಾನರು, “ಇವತ್ತು ನನ್ನದೇ ಅಡಿಗೆ ಮಾರ್ರೆ, ನಮ್ಮವರು ಒಳಗಿಲ್ಲ” ಎನ್ನುತ್ತಾ ನಕ್ಕರು. ಮನೆಯೊಡತಿ ಮನೆಯ ಜಗುಲಿಯಲ್ಲೇ ಒಂದು ಮೂಲೆಯಲ್ಲಿ ಕೂತಿದ್ದರೂ, ಇವರು ಯಾಕೆ ಹೀಗೆ ಹೇಳಿದರು ಎಂದು ನನಗೆ ಅರ್ಥವಾಗದೇ ತಲೆಯೊಳಗೆ ಪ್ರಶ್ನೆಗಳ ಸರಮಾಲೆಯೇ ಉದ್ಭವಿಸಿತು. ನಾವು ಇಡೀ ದಿನ ಅಲ್ಲೇ ಇದ್ದರೂ ಅವರು ಮಾತ್ರ ಒಂದು ಮೂಲೆಯಲ್ಲೇ ಕೂತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಯಾರನ್ನೂ ಮುಟ್ಟದೇ ದೂರದಿಂದಲೇ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರು. ನಂಗಂತೂ ಎಲ್ಲವೂ […]