ಪ್ರಸಿದ್ಧ ದಾಲ್ ಸರೋವರದಲ್ಲಿ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಪ್ರಾರಂಭಿಸಿದ ಅಮೆಜಾನ್ ಇಂಡಿಯಾ

ಶ್ರೀನಗರ: ಅಮೆಜಾನ್ ಇಂಡಿಯಾ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ತನ್ನ ಮೊದಲ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಅನ್ನು ಘೋಷಿಸಿದೆ. ದೈತ್ಯ ಇ ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ನಾವು ಇಂದು ಶ್ರೀನಗರದ ದಾಲ್ ಸರೋವರದಲ್ಲಿ ನಮ್ಮ ಮೊದಲ ತೇಲುವ ‘ಐ ಹ್ಯಾವ್ ಸ್ಪೇಸ್’ ಮಳಿಗೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದೇವೆ. ‘ಐ ಹ್ಯಾವ್ ಸ್ಪೇಸ್’ ಸ್ಟೋರ್ ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಅನುಕೂಲಕರ ವಿತರಣಾ ಅನುಭವವನ್ನು ಒದಗಿಸುವ ಮತ್ತು ಹೆಚ್ಚುವರಿ […]

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ರಸಾಯನಶಾಸ್ತ್ರ ಶೈಕ್ಷಣಿಕ ಕಾರ್ಯಾಗಾರ

ಕಾರ್ಕಳ: ರಸಾಯನಶಾಸ್ತ್ರವು ನಿರಂತರ ಅಧ್ಯಯನ ಮತ್ತು ಅಧ್ಯಾಪನಕ್ಕೆ ಪೂರಕವಾಗಿದ್ದು, ಬೋಧನಾ ಅಭ್ಯಾಸ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ ಹೇಳಿದರು. ಅವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಲ್ಯಾಣಪುರದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ಸ್ಟ್ಯಾನಿ ಲೋಬೋ ಮಾತನಾಡಿ, ಉತ್ತಮ ಬೋಧನೆಯಲ್ಲಿ ಇಂತಹ ಕಾರ್ಯಗಾರವು ವಿಶೇಷ ಪಾತ್ರವನ್ನು ವಹಿಸುತ್ತದೆ. ವಿಷಯದ […]

ಚಾರ ನವೋದಯ ವಿದ್ಯಾಲಯದಲ್ಲಿ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡ ನಾಟಿ

ಹೆಬ್ರಿ: ಸಾಲುಮರದ ತಿಮ್ಮಕ್ಕ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ನೀಡಿದ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಸುವಂತೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ಮಹತ್ವವಿರುವ ಶ್ರೀತಾಳೆ ಗಿಡಗಳನ್ನು ಎಲ್ಲರೂ ಬೆಳೆಸಿ ಉಳಿಸಿ ಎಂದು ಉಡುಪಿಯ ‘ನಮ್ಮ ಮನೆ ನಮ್ಮ ಮರ’ ತಂಡದ ರೂವಾರಿ ಅವಿನಾಶ್ ಕಾಮತ್ ಹೇಳಿದರು. ಅವರು ಜು. 28 ರಂದು ಹೆಬ್ರಿ ಚಾರ ಜವಾಹರ ನವೋದಯ ವಿದ್ಯಾಲಯ ಹಾಗೂ ರಕ್ಷಕ-ಶಿಕ್ಷಕ ಸಮಿತಿಯ ನೇತೃತ್ವದಲ್ಲಿ ಉಡುಪಿಯ ನಮ್ಮ ಮನೆ ನಮ್ಮ […]

ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ

ಮಣಿಪಾಲ: ವೈರಲ್ ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು, ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಮತ್ತು ರೋಗದ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸಲು ಪ್ರತೀ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಜಾಗತಿಕವಾಗಿ ಆಚರಿಸಲಾಗುತ್ತದೆ. ವಿಶ್ವ ಹೆಪಟೈಟಿಸ್ ದಿನದ ಈ ವರ್ಷದ ಘೋಷ ವಾಕ್ಯ ‘ನಾವು ಕಾಯುತ್ತಿಲ್ಲ’. ಈ ರೋಗದ ಬಗ್ಗೆ ಮಾಹಿತಿ ಇಲ್ಲದವರು ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಮತ್ತು ತಕ್ಷಣವೇ ಜೀವರಕ್ಷಕ ಚಿಕಿತ್ಸೆಯನ್ನು ಪಡೆಯಬೇಕು. ವಿಶ್ವ ಆರೋಗ್ಯ ಸಂಸ್ಥೆಯು 2030 ರ ವೇಳೆಗೆ ಹೆಪಟೈಟಿಸ್ ಕಾಯಿಲೆಯನ್ನು […]

ಧಾರವಾಡದಲ್ಲಿ ನಿರಂತರ ಭೀಕರ ಮಳೆ ಹಿನ್ನೆಲೆ 198 ಮನೆಗಳಿಗೆ ಹಾನಿ

  ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸದ್ಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಲವೆಡೆ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿ, ಸಾವು-ನೋವು ಸಂಭವಿಸಿದೆ.ಧಾರವಾಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ   8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ 87 ಮನೆಗಳು, ಅಳ್ನಾವರ ತಾಲೂಕಿನಲ್ಲಿ 4, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 11, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 7, ಕಲಘಟಗಿ ತಾಲೂಕಿನಲ್ಲಿ 45, […]