ಉಡುಪಿ: ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಪೌರಾಯುಕ್ತ

ಉಡುಪಿ: ಕೋವಿಡ್–19 ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್ ನಿಯಾಮವಳಿಗಳನ್ನು ಪಾಲಿಸದೇ ಇರುವುದು ಕಂಡುಬಂದಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ವಾಣಿಜ್ಯ ಮಳಿಗೆ, ಮಾಲ್ ಅಥವಾ ಇನ್ನಿತರ ಉದ್ದಿಮೆಗಳಲ್ಲಿ ಸಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪ್ರವೇಶ ದ್ವಾರದಲ್ಲಿ ತಾಪಮಾನ ಪರಿಶೀಲಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ರೋಗ ಲಕ್ಷಣ ಇರುವವರಿಗೆ ಪ್ರವೇಶ ನೀಡಬಾರದು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60, ಭಾರತ […]

ಒಮೈಕ್ರಾನ್ ಭೀತಿ: ಮದುವೆ, ಸಮಾರಂಭಗಳಿಗೆ ಹೊಸ ರೂಲ್ಸ್..!!

ಬೆಂಗಳೂರು: ಒಮೈಕ್ರಾನ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತಾಡಿದ ಸಚಿವ ಆರ್. ಅಶೋಕ್, ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಹಾಗೆ, ಇನ್ಮುಂದೆ ಶಾಲೆಗಳಲ್ಲಿ ಯಾವುದೇ ಸಭೆ- ಸಮಾರಂಭ ನಡೆಸುವಂತಿಲ್ಲ ಎಂದು ಸೂಚನೆ ನೀಡಿದರು. ಸಿನಿಮಾ, ಮಾಲ್ ಗಳಲ್ಲಿ ವ್ಯಾಕ್ಸಿನೇಷನ್ ಆದವರಿಗೆ ಮಾತ್ರ ಅವಕಾಶ. ಚಿತ್ರಮಂದಿರಕ್ಕೆ ಪ್ರವೇಶಿಸಲು ಲಸಿಕೆ ಕಡ್ಡಾಯ ಎಂದರು. ಮದುವೆ, ಸಮಾರಂಭಗಳಿಗೆ ಹೊಸ […]

ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಆರ್.ಸಾಗರ ನಾರ್ತ್​ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ನಡೆದಿದೆ. ಮೈಸೂರಿನ ಮೇಟಗಳ್ಳಿಯ ಬಡವಾಣೆಯ ನಿವಾಸಿಗಳಾದ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮೃತ ನವೀನ್​​ ನಿಸರ್ಗಳ ಮಾವ ಆಗಿದ್ದು, ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಯುವತಿಯ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಯುವತಿಗೆ ಚಾಮರಾಜನಗರ ಸಮೀಪದ ಗ್ರಾಮದ ಯುವಕನೊಂದಿಗೆ ನವೆಂಬರ್ 20 ರಂದು ಮದುವೆ ಮಾಡಿದ್ದರು. ಆದರೆ ಮದುವೆಯಾದ […]

ಸದ್ಯದಲ್ಲೇ ಕೊಳಚೆ ನೀರಿನಿಂದ ಓಡಲಿವೆ ಕಾರು, ಟ್ರಕ್, ಬಸ್.!

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದಿಂದ ವಾತಾವರಣ ದಿನೇ ದಿನೇ ಹದಗೆಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರೀನ್ ಹೈಡ್ರೋಜನ್ ಬಳಸಿ ಕಾರು, ಟ್ರಕ್ ಮತ್ತು ಬಸ್‌ಗಳನ್ನು ಓಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಗರಗಳ ಕೊಳಚೆ ನೀರು ಮತ್ತು ಘನ ತ್ಯಾಜ್ಯದಿಂದ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಬಳಸಿ ಬಸ್‌, ಕಾರು ಮತ್ತು ಟ್ರಕ್‌ಗಳನ್ನು ಓಡಿಸುವ ಯೋಜನೆ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 6ನೇ ರಾಷ್ಟ್ರೀಯ ಹಣಕಾಸು ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. […]

ಉಡುಪಿ: ಡಿ.5ಕ್ಕೆ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರ

ಉಡುಪಿ: ನಗರದ ಬೀಡಿನಗುಡ್ಡೆ ವ್ಯಾಪ್ತಿಯ ವಲಸೆ ಕಾರ್ಮಿಕರ ಕಾಲೋನಿಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಯನ್ನಾಗಿ ನೋಂದಾಯಿಸುವ ಸಲುವಾಗಿ ಡಿಸೆಂಬರ್ 5ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೀಡಿನಗುಡ್ಡೆ ಮಂಡಳಿಯ ಶಿಶುಪಾಲನಾ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್, ಪಿ.ಎಂ.ಎಸ್.ವೈ.ಎ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್, ವಾಣಿಜ್ಯ ವಾಹನಗಳ ಕ್ಲೀನರ್ ಮತ್ತು ನಿರ್ವಾಹಕರಿಗೂ ಅನ್ವಯವಾಗುವ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಸಹ ಅವಕಾಶ […]