ಉಡುಪಿ ಪೂರ್ಣಪ್ರಜ್ಞ ಕಾಲೇಜು: “ಲೇಡಿಸ್ forum” ಘಟಕದ ಚಟುವಟಿಕೆಗಳ ಉದ್ಘಾಟನೆ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ “ಲೇಡಿಸ್ forum” ಘಟಕದ 2021-22 ನೇ ಸಾಲಿನ ಚಟುವಟಿಕೆಗಳ ಉದ್ಘಾಟನೆ ನಡೆಯಿತು. ಮಾಹೆಯ ಡಾ. ಸ್ಮಿತಾ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕೌಶಲದ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ ಅಧ್ಯಕ್ಷತೆ ವಹಿಸಿದ್ದರು. ಲೇಡಿಸ್ forum ಘಟಕದ ಸಂಯೋಜಕಿ ಮಧುಲಿಕಾ ವಿ. ಭಟ್ ಉಪಸ್ಥಿತರಿದ್ದರು. ಕುಮಾರಿ, ಮನಾಲ್, ವೈಷ್ಣವಿ ಹಾಗೂ ಪ್ರೀತಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಹೆಸರು ದುರ್ಬಳಕೆ ಆರೋಪ: ಉಡುಪಿ ನಗರಸಭೆ ಅಭಿಯಂತರ ವಿರುದ್ಧ ಡಿಸಿಗೆ ದೂರು ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ನಗರಸಭೆಯ ಅಭಿಯಂತರ ದಿವಾಕರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕಾಮಗಾರಿಯೊಂದರ ವಿಳಂಬಕ್ಕೆ ನನ್ನನ್ನು ಹೊಣೆಗಾರನನ್ನಾಗಿ ಮಾಡಿದ್ದಲ್ಲದೆ, ನನ್ನ ಹೆಸರನ್ನು ಸಾರ್ವಜನಿಕವಾಗಿ ದುರ್ಬಳಕೆ ಮಾಡಿದ್ದಾರೆ ಎಂದು ಅಭಿಯಂತರ ದಿವಾಕರ್ ವಿರುದ್ಧ ಸಚಿವೆ ಶೋಭಾ ಆರೋಪ ಮಾಡಿದ್ದಾರೆ.‌ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಸಚಿವರು ಸೂಚನೆ ನೀಡಿದ್ದಾರೆ. ಉಡುಪಿ ನಗರಸಭೆಯಲ್ಲಿ ಅಭಿಯಂತರರಾಗಿ […]

ಉಡುಪಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಹೃದಯಾಘಾತದಿಂದ ಮೃತ್ಯು

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರೋರ್ವರು ಕರ್ತವ್ಯದಲ್ಲಿದ್ದಾಗಲೇ ಬಸ್ ನಲ್ಲಿ ಹೃದಯಾಘಾತವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕೆಎಸ್‌ಆರ್‌ಟಿಸಿ ನಿರ್ವಾಹಕ ಸಖರಾಯಪಟ್ಟಣ ಬಳಿ ಕುನ್ನಾಳು ಗ್ರಾಮದ ನಿವಾಸಿ ವಿಜಯ ಕುಮಾರ್ (42) ಎಂದು ಗುರುತಿಸಲಾಗಿದೆ. ಬಸ್ ಚಿಕ್ಕಮಗಳೂರು ನಗರ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ಬಸ್ ಹೊರಟಿತ್ತು. ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಸಾಗುವಾಗ ನಿರ್ವಾಹಕ ವಿಜಯ ಕುಮಾರ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಾಲಕ ಮತ್ತು ಕೊಟ್ಟಿಗೆಹಾರ ನಿಲ್ದಾಣ […]

ಕುಂದಾಪುರ: ನ್ಯೂಯರ್ ಪಾರ್ಟಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ; 1 ಕೆ.ಜಿ. ಗಾಂಜಾ ವಶ

ಕುಂದಾಪುರ: ಹೊಸ ವರ್ಷದ ಪಾರ್ಟಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯೋರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1 ಕೆ.ಜಿ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕುಂದಾಪುರ ವಿಠಲವಾಡಿ ಮೂಲದ ವಿಶ್ವಪ್ರಸನ್ನ ಗೋಡೆ (26) ಬಂಧಿತ ಆರೋಪಿ. ಈತ ಹೊಸ ವರ್ಷದಲ್ಲಿ ಮೋಜು ಮಸ್ತಿ ಮಾಡಲು ಹೈದರಾಬಾದ್‌‌ನಿಂದ ಕುಂದಾಪುರಕ್ಕೆ ಬಸ್ ಮೂಲಕವಾಗಿ ಗಾಂಜಾ ತರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ಪೊಲೀಸರ ತಂಡಕ್ಕೆ ಖಚಿತ ಮಾಹಿತಿ‌ ಲಭಿಸಿದೆ. ಇದರ ಆಧಾರದಲ್ಲಿ ಡಿ.24ರ ತಡರಾತ್ರಿ […]

5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜ.23 ರಂದು ತಪ್ಪದೆ ಪೊಲಿಯೋ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯ 0-5 ವ಼ರ್ಷದೊಳಗಿನ ಪ್ರತಿಯೊಂದು ಮಕ್ಕಳಿಗೂ ಪೊಲಿಯೋ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು.   ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಜಿಲ್ಲೆಯಲ್ಲಿ ಈ ಬಾರಿ ಪಲ್ಸ್ ಪೊಲಿಯೋ ಲಸಿಕೆಯನ್ನು ಜನವರಿ 23 ರಂದು ನೀಡಲಾಗುತ್ತಿದ್ದು, ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆಯನ್ನು ತಪ್ಪದೇ ಹಾಕಿಸಬೇಕು. […]