ಸದ್ಯದಲ್ಲೇ ಕೊಳಚೆ ನೀರಿನಿಂದ ಓಡಲಿವೆ ಕಾರು, ಟ್ರಕ್, ಬಸ್.!

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದಿಂದ ವಾತಾವರಣ ದಿನೇ ದಿನೇ ಹದಗೆಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರೀನ್ ಹೈಡ್ರೋಜನ್ ಬಳಸಿ ಕಾರು, ಟ್ರಕ್ ಮತ್ತು ಬಸ್‌ಗಳನ್ನು ಓಡಿಸುವ ಯೋಜನೆಯನ್ನು ಹಾಕಿಕೊಂಡಿದೆ.

ನಗರಗಳ ಕೊಳಚೆ ನೀರು ಮತ್ತು ಘನ ತ್ಯಾಜ್ಯದಿಂದ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಬಳಸಿ ಬಸ್‌, ಕಾರು ಮತ್ತು ಟ್ರಕ್‌ಗಳನ್ನು ಓಡಿಸುವ ಯೋಜನೆ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

6ನೇ ರಾಷ್ಟ್ರೀಯ ಹಣಕಾಸು ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. ನಾನು ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ನಿಂದ ಚಲಿಸುವ ಪೈಲಟ್ ಪ್ರಾಜೆಕ್ಟ್ ಕಾರನ್ನು ಖರೀದಿಸಿದ್ದೇನೆ. ಈ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ನಗರದಲ್ಲಿ ಓಡಿಸುತ್ತೇನೆ ಎಂದಿದ್ದಾರೆ.