ಉಡುಪಿ: ಹೈರಿಸ್ಕ್ ದೇಶದಿಂದ ಬಂದಿರುವ ಮೂವರಿಗೆ ಹೋಮ್ ಕ್ವಾರಂಟೈನ್‌: ಡಿಸಿ ಕೂರ್ಮಾರಾವ್

ಉಡುಪಿ: ಉಡುಪಿ ಜಿಲ್ಲೆಗೆ ಕಳೆದ ಐದು ದಿನಗಳಲ್ಲಿ 91 ಮಂದಿ ವಿದೇಶದಿಂದ ಆಗಮಿಸಿದ್ದು, ಈ ಪೈಕಿ ಮೂರು ಮಂದಿ ಹೈರಿಸ್ಕ್ ದೇಶದಿಂದ ಬಂದಿದ್ದಾರೆ. ಇವರೆಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಹೈರಿಸ್ಕ್ ದೇಶದಿಂದ ಬಂದಿರುವ ಮೂವರನ್ನು ಹೋಮ್ ಕ್ವಾರಂಟೈನ್‌ ನಲ್ಲಿ ಇರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಒಂದು ವಾರದಲ್ಲಿ ಜಿಲ್ಲೆಗೆ ಕೇರಳದಿಂದ 69 ಮಂದಿ ಬಂದಿದ್ದು, ಅದರಲ್ಲಿ 9 […]

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಕಲ ಮುನ್ನೆಚ್ಚರಿಕೆ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕಮ್ರಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೋವಿಡ್ ಸೋಂಕು ಹರಡುವುದನ್ನು ತಡೆಯಲು, ಶೀಘ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸಬೇಕಾಗಿದ್ದು, ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 2312 ರಂತೆ 16,187 ಪರೀಕ್ಷೆ ನಡೆಸಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿದಿನ 5000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ಪ್ರಸ್ತುತ ಪಾಸಿಟಿವಿಟಿ ದರ 0.4 ಇದ್ದು, ಸಕ್ರಿಯ ಪ್ರಕರಣಗಳು 88 […]

ಉಡುಪಿ ಗ್ರಾಮೀಣ ಬಂಟರ ಸಂಘದಿಂದ ಅಂಡಾರು ದೇವಿಪ್ರಸಾದ್ ಶೆಟ್ಟಿಗೆ ಸನ್ಮಾನ

ಉಡುಪಿ: ಉಡುಪಿ ಗ್ರಾಮೀಣ ಭಂಟರ ಸಂಘ/ ಟ್ರಸ್ಟ್ ನ ವತಿಯಿಂದ ನಡೆದ ಮಹಿಳೆಯರಿಗಾಗಿ ಒಂದು ದಿನದ ಉದ್ಯಮಶೀಲತ ಪ್ರೇರಣಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಂಘದ ವತಿಯಿಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಅಭಿನಂದಿಸಿದರು. ಟ್ರಸ್ಟನ ಅಧ್ಯಕ್ಷ ಅಶೋಕ್ ಶೆಟ್ಟಿ, ಸಂಘದ ಅಧ್ಯಕ್ಷ ಸಖರಾಮ ಶೆಟ್ಟಿ, ಹಿರಿಯರಾದ ಡಾ. ಎಚ್.ಬಿ. ಶೆಟ್ಟಿ, ಡಾ. ರವಿರಾಜ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ […]

ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ (83) ಅವರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂ ಕುಸಿದುಬಿದ್ದಿದ್ದರು. ಇದರಿಂದ ಅವರ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 1938 ಜನವರಿ 28ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ್ದ ಶಿವರಾಂ, ಕನ್ನಡ ಚಿತ್ರರಂಗದಲ್ಲಿ ಪೋಷಕ, ಹಾಸ್ಯ ಪಾತ್ರದಲ್ಲಿ ಸುಮಾರು 6 […]

ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್​ ಪಡೆದು ಕುಂಬ್ಳೆ ದಾಖಲೆ ಸರಿಗಟ್ಟಿದ ಅಜಾಜ್ ಪಟೇಲ್

ಮುಂಬೈ: ಮುಂಬೈ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್, ಭಾರತ ಮೂಲದ ಅಜಾಜ್ ಪಟೇಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇನ್ನಿಂಗ್ಸ್​ವೊಂದರಲ್ಲಿ ಎಲ್ಲಾ 10 ವಿಕೆಟ್​ಗಳನ್ನು ಪಟೇಲ್ ಕಬಳಿಸುವ ಮೂಲಕ ಭಾರತದ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ 1956ರಲ್ಲಿ ಇಂಗ್ಲೆಂಡ್​ನ ಜಿಮ್ ಲೇಕರ್, ಭಾರತದ ಅನಿಲ್ ಕುಂಬ್ಳೆ 1999ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಕಿವೀಸ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್, ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ […]