ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್​ ಪಡೆದು ಕುಂಬ್ಳೆ ದಾಖಲೆ ಸರಿಗಟ್ಟಿದ ಅಜಾಜ್ ಪಟೇಲ್

ಮುಂಬೈ: ಮುಂಬೈ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್, ಭಾರತ ಮೂಲದ ಅಜಾಜ್ ಪಟೇಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನಿಂಗ್ಸ್​ವೊಂದರಲ್ಲಿ ಎಲ್ಲಾ 10 ವಿಕೆಟ್​ಗಳನ್ನು ಪಟೇಲ್ ಕಬಳಿಸುವ ಮೂಲಕ ಭಾರತದ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ 1956ರಲ್ಲಿ ಇಂಗ್ಲೆಂಡ್​ನ ಜಿಮ್ ಲೇಕರ್, ಭಾರತದ ಅನಿಲ್ ಕುಂಬ್ಳೆ 1999ರಲ್ಲಿ ಈ ಸಾಧನೆ ಮಾಡಿದ್ದರು.

ಇದೀಗ ಕಿವೀಸ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್, ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿದರು. ಈ ಹಿಂದೆ ನ್ಯೂಜಿಲೆಂಡ್ ಆಲ್​ರೌಂಡರ್ ರಿಚರ್ಡ್​ ಹ್ಯಾಡ್ಲಿ 9 ವಿಕೆಟ್ ಪಡೆದಿದ್ದು ಗರಿಷ್ಠ ಸಾಧನೆಯಾಗಿತ್ತು.