ಉಡುಪಿ ಜಿಲ್ಲಾ ರಜತ ಮಹೋತ್ಸವ: ಸಾರ್ವಜನಿಕರಿಂದ ಲಾಂಛನ ವಿನ್ಯಾಸ ಆಹ್ವಾನ

ಉಡುಪಿ: ಜಿಲ್ಲೆ ಆರಂಭಗೊಂಡು 25 ವಸಂತಗಳು ಸಂದ ಹಿನ್ನಲೆಯಲ್ಲಿ, ಆಗಸ್ಟ್‌ 25 ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವು ನಡೆಯಲಿದ್ದು, ರಜತ ಮಹೋತ್ಸವ ಕಾರ್ಯಕ್ರಮದ ಅಂದವಾದ ಲಾಂಛನವನ್ನು, ಟ್ಯಾಗ್ಲೈನ್‌ ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ ನೀಡಲು ಸಾರ್ವಜನಿಕರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ರಚಿಸಿದ ಅತ್ಯುತ್ತಮ ಲಾಂಛನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುವುದು, ಆಯ್ಕೆಯಾದ ಲಾಂಛನಕ್ಕೆ ರೂ.10000 (ರೂಪಾಯಿ ಹತ್ತು ಸಾವಿರಗಳು) ಗಳ ಬಹುಮಾನ ನೀಡಲಾಗುವುದು. ಲಾಂಛನವನ್ನು ಜಿಲ್ಲಾಧಿಕಾರಿ ಕಛೇರಿಯ ಈಮೇಲ್‌ ವಿಳಾಸ […]

22ನೇ ಕಾಮನ್‌ವೆಲ್ತ್ ಗೇಮ್ಸ್‌ ಗೆ ವಿದಾಯ: 22 ಚಿನ್ನ ಸೇರಿದಂತೆ 61 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಭಾರತ

ಬರ್ಮಿಂಗ್‌ಹ್ಯಾಮ್‌: ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಸೋಮವಾರ ರಾತ್ರಿ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು. 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಂದ 5,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ ಹನ್ನೊಂದು ದಿನಗಳ ಕ್ರೀಡಾ ಚಟುವಟಿಕೆಗಳ ನಂತರ ಆಟಗಳು ಅಧಿಕೃತವಾಗಿ ಮುಕ್ತಾಯಗೊಂಡವು. ಸಮಾರೋಪ ಸಮಾರಂಭದಲ್ಲಿ ಬಾಕ್ಸರ್ ನಿಖತ್ ಝರೀನ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ರಾಷ್ಟ್ರಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಿದರು. 2026 ರಲ್ಲಿ ಕ್ರೀಡಾಕೂಟದ ಮುಂದಿನ ಆವೃತ್ತಿಯನ್ನು ಆಯೋಜಿಸಲಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾ […]

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿ

ಬ್ರಹ್ಮಾವರ: ಇಲ್ಲಿನ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ 2022-23 ಸಾಲಿನ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ತೆರೆದಿದೆ. ಬಹುಬೇಡಿಕೆಯ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಗಳು ಲಭ್ಯವಿದೆ. ಲಭ್ಯವಿರುವ ಕೋರ್ಸ್ ಗಳು ಬಿ. ಎಸ್ಸಿ ನರ್ಸಿಂಗ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ಬ್ಯಾಚುಲರ್ ಆಫ್ ಹೋಟೇಲ್ ಅಡ್ಮಿನಿಷ್ಟ್ರೇಷನ್ ಡಿಪ್ಲೋಮಾ ಇನ್ ಎಕ್ಸ್ ರೇ ಟೆಕ್ನಾಲಜಿ ಡಿಪ್ಲೋಮಾ ಇನ್ ಒಟಿ ಟೆಕ್ನಾಲಜಿ ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಬಿ.ಡಿ ಶೆಟ್ಟಿ […]

ಈಸೀ ಲೈಫ್ ನಲ್ಲಿ ಸಬ್ಸಿಡಿಯೊಂದಿಗೆ ಪಡೆಯಿರಿ ಕಾರ್ಬನ್ ಫೈಬರ್ ದೋಟಿ ಹಾಗೂ ಅಡಿಕೆ ಮರ ಹತ್ತುವ ಯಂತ್ರ

ಈಸೀ ಲೈಫ್ ನಲ್ಲಿ ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷಧಿ ಸಿಂಪಡಿಸಲು ಸುದೀರ್ಘ ಬಾಳಿಕೆಯ ಕಾರ್ಬನ್ ಫೈಬರ್ ದೋಟಿ ಮತ್ತು ಅಡಿಕೆ ಮರ ಹತ್ತುವ ಯಂತ್ರ ಇದೀಗ ಸಬ್ಸಿಡಿಯೊಂದಿಗೆ ಲಭ್ಯ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – 9945836004 ಹಿರಿಯಡ್ಕ – 9606970682 ಪಡುಬಿದ್ರಿ – 9902872121 ಕುಂದಾಪುರ – 9901765921 […]

ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್ ಪರ್ಟ್ ಪಿಯು ಕಾಲೇಜಿನ 70 ವಿದ್ಯಾರ್ಥಿಗಳಿಗೆ 95 ಪರ್ಸೆಂಟೈಲ್‌ ಗಿಂತ ಅಧಿಕ ಅಂಕ

ಮಂಗಳೂರು: ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‌ಬೈಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ 70 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ 146 ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ. 6 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ, 20 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಅಧಿಕ, 39 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಅಧಿಕ, 56 ವಿದ್ಯಾರ್ಥಿಗಳು 96 […]