ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್ ಪರ್ಟ್ ಪಿಯು ಕಾಲೇಜಿನ 70 ವಿದ್ಯಾರ್ಥಿಗಳಿಗೆ 95 ಪರ್ಸೆಂಟೈಲ್‌ ಗಿಂತ ಅಧಿಕ ಅಂಕ

ಮಂಗಳೂರು: ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‌ಬೈಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ 70 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ 146 ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.

6 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ, 20 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಅಧಿಕ, 39 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಅಧಿಕ, 56 ವಿದ್ಯಾರ್ಥಿಗಳು 96 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.

ಸಂಕೇತ್ ಎನ್.ಎಸ್. (99.66), ಆಕಾಶ್ ಜಿ.ಮೇಸ್ತ (99.28), ಮುಹಮ್ಮದ್ ರುಮೈಜ್ (99.24), ಅರ್ಹನ್ ವಿಲಾಸ್ ಕೆ. (99.03), ವಿವೇಕರಾಜ್ ಎಂ.ದಂಡು (99.02), ಜೆರಿನ್ ಪಿ.ಐಸಾಕ್ (99.00), ಸ್ಕಂದ ಶಾನಭಾಗ್ (98.98), ಗೌರವ್ ನಾಯಕ್ ಎಚ್. (98.97), ಅಜಯ್ ಎಸ್.ಹೆಗ್ಡೆ (98.96), ವೃಷಭ್ ವಿ.ಜವಳಿ (98.86), ಸಾಥ್ವಿಕ್ ಎ.ಎಸ್. (98.56), ಶಾಲಂಕ್ ಎನ್.ಕುಲಕರ್ಣಿ (98.55), ತುಬಚಿ ಕೃತಿಕ್ ಚನಗೌಡ (98.55), ಅಭಿ ಎಸ್.ಕುಮಾರ್ (98.54), ಶ್ರೇಯಸ್ ಭಟ್ (98.40), ಭರತ್ ಕುಮಾರ್ ವೈ ರೇವಡಕುಂಡಿ (98.38), ತೇಜಸ್ ಕೆ.ರೈಸಾದ್ (98.25), ಯಶಸ್ವಿನಿ ಎಸ್ ಬಾಳಪ್ಪನವರ್ (98.20), ಅಭಿಷೇಕ ಪ್ರಕಾಶ್ ಕಲ್ಯಾಣಶೆಟ್ಟಿ (98.10), ಪ್ರಜ್ಞಾ ಬಿ ಶೆಟ್ಟಿಗಾರ್ (98.02), ಮದನ್ ಕುಮಾರ್ ಎಸ್.ವಿ. (97.88), ವಿಶಾಲ್ ಎಸ್. (97.72), ಮೋನಿಶ್ ಎಸ್. (97.72), ಸ್ನೇಹಲ್ ಮಹಿಮಾ ಕ್ಯಾಸ್ಟೆಲಿನೊ (97.67), ಪ್ರಣವ್ ಎಸ್.(97.65), ಗಗನ್ ಗೌಡ ಎಸ್.ಆರ್. (97.62), ಅನುಜ್ಞಾ ಕೆ.(97.58), ಕೃಷ್ಣಮೂರ್ತಿ ವಿಜಯಕುಮಾರ್ ಪೂಜಾರ್ (97.56), ಆದಿತ್ಯ ಮಲ್ಯ (97.50), ಪವನ್ ಎಸ್. ಧೂಳಶೆಟ್ಟಿ (97.50), ಸಾಯಿ ಚರಣ್ (97.49), ಇಶಾನ್ಯಾ ಬಿ.ಯು. (97.46), ಅಭಿನವ್ ಎನ್. (97.43), ಕನ್ನಿಕಾ ಜಿ.ಭಟ್ (97.38), ದಿಶಾಂತ್ ಕೆ. (97.36), ಅಭಿಷೇಕ್ ವೆಂಕಟೇಶ್ ನಾಯಕ್ (97.32), ಹಿಮಾಂಶು ಎಲ್. (97.29), ಖುಷಿ ಬಿ. ಹಲಕುರ್ಕಿ (97.26), ಶ್ರೀಹರಿ ಮಂಕಣಿ (97.14) ಅಂಕ ಪಡೆದಿದ್ದಾರೆ.

ಕ್ಯಾಟಗರಿ ವಿಭಾಗದಲ್ಲಿ ಶ್ರೇಯಸ್ ಕೆ. ನಿಶಾನಿ 463ನೇ ರ‍್ಯಾಂಕ್, ತೇಜಸ್ ಜೆ. ಕರ್ಮಲೆ 469ನೇ ರ‍್ಯಾಂಕ್, ವಿಶಾಲ್ ಎಸ್. 585ನೇ ರ‍್ಯಾಂಕ್, ಚಿರಾಗ್ ಸಿ. 619ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‌ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.