ಸಂಸ್ಕೃತ ಕಾಲೇಜು ವೃತ್ತಕ್ಕೆ ಶ್ರೀನಿವಾಸ ಉಪಾಧ್ಯ ಪಣಿಯಾಡಿ ವೃತ್ತ ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಉಡುಪಿ ಸಂಸ್ಕೃತ ಕಾಲೇಜು ಬಳಿಯ ವೃತ್ತಕ್ಕೆ ಶ್ರೀನಿವಾಸ ಉಪಾಧ್ಯ ಪಣಿಯಾಡಿ ವೃತ್ತ ಎಂದು ನಾಮಕರಣಗೊಳಿಸುವ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಇದ್ದಲ್ಲಿ 30 ದಿವಸಗಳ ಒಳಗೆ ಉಡುಪಿ ನಗರಸಭೆ ಕಛೇರಿಗೆ ಸಲ್ಲಿಸುವಂತೆ ಹಾಗೂ ನಂತರ ಬರುವ ಆಕ್ಷೇಪಣೆ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ: ಶಶಿ ತರೂರ್

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಅವರು ಈಗಿರುವ ಪದ್ಧತಿಯನ್ನೇ ಮುಂದುವರಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣಾ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ವಾದವನ್ನು ಮಂಡಿಸಿದ ಶಶಿ ತರೂರ್ ತಾವು ಆಯ್ಕೆಯಾದರೆ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುವುದಾಗಿ ಹೇಳಿದ್ದಾರೆ. ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ. ಇದು ನಮ್ಮ ಪಕ್ಷದ ಭವಿಷ್ಯದ ಸಮೀಕ್ಷೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮೂವರು ನಾಯಕರಲ್ಲಿ […]

ರಾಜ್ ಬಿ ಶೆಟ್ಟಿ ನೃತ್ಯ ಸಂಯೋಜನೆಯಲ್ಲಿ ಮೂಡಿಬಂತು ತುಳುನಾಡ ದೈವಾರಾಧನೆ: ಕನ್ನಡದ RRR ಕೈಚಳಕದ ಕಾಂತಾರಾ!!

ವಿಶ್ವ ಚಲನಚಿತ್ರ ವೇದಿಕೆಯಲ್ಲಿ ಸಂಚಲನ ಮೂಡಿಸುತ್ತಿರುವ, ತುಳುನಾಡು, ತುಳು ಸಂಸ್ಕೃತಿಯ ಬಗ್ಗೆ ಅಮೋಘ ಚಿತ್ರಣವನ್ನು ಹೊಂದಿರುವ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರುವ ಹೊಂಬಾಳೆ ಫಿಲಂಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಹಿಂದೆ ರಾಜ್ ಬಿ.ಶೆಟ್ಟಿ ಮತ್ತು ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿಯವರ ಕೈ ಚಳಕವೂ ಇದೆ! ಇಡೀ ಚಲನಚಿತ್ರದ ಅತ್ಯಂತ ಅಮೋಘ ಮತ್ತು ಅಕಲ್ಪನೀಯ ದೃಶ್ಯವಾಗಿರುವ ದೈವಾರಾಧನೆಯ ದೃಶ್ಯಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್.ಬಿ. ಶೆಟ್ಟಿ. . @RajbShettyOMK […]

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು ಬೆಳಿಗ್ಗೆ 9: 30 ರಿಂದ ದುರ್ಗಾಹೋಮ ಬೆಳಿಗ್ಗೆ 10.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಗಜಪುರ ಆನಗಳ್ಳಿ, ಕುಂದಾಪುರ ಇವರಿಂದ) ಮಧ್ಯಾಹ್ನ 12.00ಕ್ಕೆ ಮಹಾಪೂಜೆ, “ಭಜನಾ ಕಾರ್ಯಕ್ರಮ” (ಶ್ರೀ ರಾಮ ಭಜನಾ ಮಂಡಳಿ ಮಟಪಾಡಿ ಇವರಿಂದ) ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ಸಂಜೆ 5.00ರಿಂದ “ಭಜನಾ ಕಾರ್ಯಕ್ರಮ” (ಪಂಚವರ್ಣ ಮಹಿಳಾ ಭಜನಾ ಮಂಡಳಿ ಕೋಟ ಇವರಿಂದ) ಸಂಜೆ 7.00ರಿಂದ “ದಾಸ […]