ಧಾರೇಶ್ವರ ಯಕ್ಷ ಬಳಗದ 8ನೇ ವರ್ಷದ ತಾಳಮದ್ದಲೆ ಸಪ್ತಾಹ ಸಮಾರೋಪ ಸಮಾರಂಭ

ಉಡುಪಿ: ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರಿನ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಸೆ.18ರಿಂದ 24ರವರೆಗೆ ನಡೆದ 8ನೇ ವರ್ಷದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭವು ಶನಿವಾರದಂದು ನಡೆಯಿತು. ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಯಕ್ಷಗಾನ ಕಲಾರಂಗಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಕಲಾ ಸೇವೆ ಯಕ್ಷಗಾನ ರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಇನ್ನಷ್ಟು ಕಾಲ ಸಿಗುವಂತಾಗಬೇಕು ಎಂದರು. […]

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 26 ರಿಂದ ಆ. 5 ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಮಹೋತ್ಸವ ಜರಗಲಿದೆ. ಸೆ. 26ರ ಮಧ್ಯಾಹ್ನ 12ಕ್ಕೆ ಶ್ರೀ ದೇವಿಯ ಉತ್ಸವ ಮೂರ್ತಿಗೆ ಚಿನ್ನದ ಮುಖವಾಡ ಮತ್ತು ನೂತನ ರಾಜ್ಯದ ಅಟ್ಟೆಕುಪ್ಪಸ ಸಮರ್ಪಣೆ ಜರುಗಲಿದೆ. ಪ್ರತೀ ನಿತ್ಯ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ ಜರಗಲಿದೆ. ಅ. 2ರಂದು ರಾತ್ರಿ ಶಾರದಾ ಪ್ರತಿಷ್ಠೆ, ವಿಶೇಷ ಪೂಜೆ, […]

ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ಕೋಟ: ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಸೆ.26 ಸೋಮವಾರದಿಂದ ಅ. 05 ಬುಧವಾರದವರೆಗೆ ಶರನ್ನವರಾತ್ರಿಯ ಅಂಗವಾಗಿ ಪ್ರತಿದಿನ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ, ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಸಕಲ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಶ್ರೀದೇವಿಯ ಪವಿತ್ರ ಕುಂಕುಮ ಪ್ರಸಾದವನ್ನು ಸ್ವೀಕರಿಸಿ ಸಪರಿವಾರ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿಯ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುವ, ಆನಂದ ಸಿ.ಕುಂದರ್ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಪ್ರಶಾಂತ್ […]

ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಶರನ್ನವರಾತ್ರಿ ಮಹೋತ್ಸವ

ಉಡುಪಿ: ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಸೆ. 26 ರಿಂದ ಅ. 05ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉದ್ಘಾಟನಾ ಸಮಾರಂಭವು ಸೆ.26 ಸೋಮವಾರ ಸಂಜೆ: 6.30ಕ್ಕೆ ಗಾಲವ ಮಂಟಪ, ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರ ಇಲ್ಲಿ ನಡೆಯಲಿದೆ. ಉದ್ಘಾಟನೆ :ಕೆ. ರಘುಪತಿ ಭಟ್, ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷತೆ: ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರ ಮುಖ್ಯ ಅತಿಥಿಗಳು: ಮಹೇಂದ್ರ ಕುಮಾರ್, ನೀಲಾವರ ಅಧ್ಯಕ್ಷರು […]

ಭಾರತೀಯ ಬೌಲರ್ ವಿನೂ ಮಂಕಡ್ ಅವರ ಮಾಂಕಡಿಂಗ್ ತಂತ್ರದಿಂದ ಪಂದ್ಯ ಮತ್ತು ಭಾರತೀಯರ ಹೃದಯ ಗೆದ್ದ ದೀಪ್ತಿ ಶರ್ಮಾ

ಕ್ರಿಕೆಟ್ ಕ್ರೀಡೆಯಲ್ಲಿ, ಬೌಲರ್ ಬೌಲ್ ಮಾಡುವ ಅಂತಿಮ ಹಂತದಲ್ಲಿದ್ದಾಗ ನಾನ್-ಸ್ಟ್ರೈಕಿಂಗ್ ಬ್ಯಾಟ್ಸ್‌ಮನ್ ಕ್ರೀಸ್ ತೊರೆದು ಬ್ಯಾಕ್ ಅಪ್ ಮಾಡಿದಲ್ಲಿ ಬೌಲರ್ ಅವರನ್ನು ರನ್ ಔಟ್ ಮಾಡುವ ಪ್ರಕ್ರಿಯೆಯನ್ನು ಮಾಂಕಡಿಂಗ್ ಎನ್ನುತ್ತಾರೆ. 1948 ರ ಸಿಡ್ನಿ ಟೆಸ್ಟ್‌ನಲ್ಲಿ ಇದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡಿದ ಭಾರತೀಯ ಬೌಲರ್ ವಿನೂ ಮಾಂಕಡ್ ಅವರ ತಂತ್ರವನ್ನು ಕ್ರಿಕೆಟ್ ಜಗತ್ತಿನಲ್ಲಿ ಅವರದೇ ಹೆಸರಿನಿಂದ ಗುರುತಿಸಲಾಗುವುದು ಭಾರತೀಯರಿಗೆ ಹೆಮ್ಮೆ. ಒಬ್ಬ ಭಾರತೀಯ ಕ್ರಿಕೆಟಿಗನ ಇದೇ ತಂತ್ರವನ್ನು ಬಳಸಿ ಇನ್ನೊಬ್ಬಾಕೆ […]