ಮಣಿಪಾಲ: ಇಲ್ಲಿನ ಮಂಚಿ ರಾಜೀವನಗರದ ಆರನೇ ಅಡ್ಡ ರಸ್ತೆಯಲ್ಲಿ ಬಹೃತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ.
ಹೆಬ್ಬಾವು ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಧೀರ್ ಶೇರಿಗಾರ್ ಮಂಚಿ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಲೋಕೇಶ್ ಭಂಡಾರಿ ಹಾಗೂ ಶಿವಪ್ರಸಾದ್ ರಾಜೀವನಗರ ಹಾವನ್ನು ಹಿಡಿಯಲು ಸಹಕರಿಸಿದರು. ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಮಂಚಿ ರಾಜೀವನಗರ ಪರಿಸರದಲ್ಲಿ ಹೆಬ್ಬಾವುಗಳ ಸಂಚಾರ ಹೆಚ್ಚಾಗಿದ್ದು, ಆಗಾಗ ಪತ್ತೆಯಾಗುತ್ತಿದೆ. ಜನವಸತಿ ಪ್ರದೇಶದ ಸಮೀಪವೇ ಅರಣ್ಯ ಇರುವುದರಿಂದ ಹೆಬ್ಬಾವುಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿವೆ. ಈ ಹಿಂದೆಯೂ ಆರನೇ ಅಡ್ಡರಸ್ತೆಯಲ್ಲೇ ಬೃಹತ್ ಗಾತ್ರದ ಎರಡು ಹೆಬ್ಬಾವುಗಳು ಪತ್ತೆಯಾಗಿದ್ದವು. ಅವುಗಳನ್ನು ಸುಧೀರ್ ಶೇರಿಗಾರ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.