ಕಾರ್ಕಳ: ಇಲ್ಲಿನ ಕಡ್ತಲ ಸಿರಿಬೈಲು ಬರ್ಭರೇಶ್ವರ ದುರ್ಗಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ನಾಡು-ನುಡಿಯ ಅನನ್ಯ ಸಾಧನೆಗಾಗಿ ಅಣ್ಣಪ್ಪ ಪೂಜಾರಿ ದೆಂದೂರು ಅವರಿಗೆ (ಸಂಘಟನೆ-ಸೇವೆ) ‘ಆದಿಗ್ರಾಮೋತ್ಸವ ಯುವ ಸಿರಿ ಗೌರವ’ ನೀಡಿ ಅಭಿನಂದಿಸಲಾಯಿತು.
ತ್ರಿಭಾಷಾ ಸಾಹಿತಿ ಮೌರಿಸ್ ತಾವ್ರೊ, ಅಜೆಕಾರು, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ನಿವೃತ್ತ ಶಿಕ್ಷಣ ಇಲಾಖೆಯ ಪರಿವೀಕ್ಷಕ ಕರುಣಾಕರ್ ಹೆಗ್ಡೆ , ಅಂತರರಾಷ್ಟ್ರೀಯ ಯೋಗ ಸಾಧಕ ಶೇಖರ್ ಕಡ್ತಲ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ ರಾಜ್ಯಾಧ್ಯಕ್ಷ ಶೇಖರ್ ಅಜೆಕಾರು, ಸಾಹಿತಿ ಪ್ರೇಮ ವಿ. ಸೂರಿಗ ಮೊದಲಾದವರು ಉಪಸ್ಥಿತರಿದ್ದರು.