ಶಾರದಾ ಮಹಿಳಾ ಮಂಡಲದಿಂದ ಬಡ ಕುಟುಂಬಕ್ಕೆ ಸೋಲಾರ ದೀಪ ಅಳವಡಿಸಲು ಆರ್ಥಿಕ ನೆರವು

ಕಾರ್ಕಳ: ಶಾರದಾ ಮಹಿಳಾ ಮಂಡಲ ವತಿಯಿಂದ ರೋಟರಿ ಆ್ಯನ್ಸ್ ಕ್ಲಬ್ ಹಾಗೂ ಯುವವಾಹಿನಿ ‘ಕರುಣಾಳು ಬಾ ಬೆಳಕು’ ಯೋಜನೆಯಡಿ ಎರಡು ಬಡ ಕುಟುಂಬಗಳಿಗೆ ಸೋಲಾರ ದೀಪ ಅಳವಡಿಸಲು ₹ 8 ಸಾವಿರ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.

ಶಾರದಾ ಮಹಿಳಾ ಮಂಡಳಿಯ ಅಧ್ಯಕ್ಷೆ ವಾರಿಜಾ ವಿ. ಕಾಮತ್ ರೋಟರಿ ಆ್ಯನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ಅವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು. ಕಾರ್ಯದರ್ಶಿ ಡಾ. ಹರ್ಷಾ ಕಾಮತ್ ಹಾಜರಿದ್ದರು.

ಭಾರತಿ ಅಮೀನ್ ಅವರ 19ನೇ ವಾರ್ಡ್ ಹಾಗೂ ಪ್ರದೀಪ ಅವರ 13ನೇ ವಾರ್ಡ್ ನಲ್ಲಿ ಸೋಲಾರ್ ದೀಪವನ್ನು ಯುವ ವಾಹಿನಿ ಸದಸ್ಯರಿಂದ ಅಳವಡಿಸಲಾಯಿತು. ಪುರಸಭೆ ಅಧ್ಯಕ್ಷೆ ಸುಮಾ ಕೇಶವ ಉಪಸ್ಥಿತರಿದ್ದರು.