ತಮಿಳು ನೆಲದಲ್ಲಿ ರಾಮಾಯಣದ ಭವ್ಯ ಹೆಗ್ಗುರುತುಗಳಿವೆ; ಸಮಸ್ತ ತಮಿಳರು ಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಬೇಕು: ಪೇಜಾವರ ಶ್ರೀ ಕರೆ

ಚೆನ್ನೈ: ತಮಿಳು ನೆಲ, ಭಾಷೆ, ಸಂಸ್ಕೃತಿಯಲ್ಲೂ ರಾಮಾಯಣದ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿವೆ. ಕಂಬ ರಾಮಾಯಣದಂಥ ಸಾಹಿತ್ಯ ಕೃತಿಗಳು, ಭರತನಾಟ್ಯ ದಂಥ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತುಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಧನಿಷ್ಕೋಟಿ, ರಾಮಸೇತು, ರಾಮೇಶ್ವರದಂಥಹ ಪವಿತ್ರ ಸ್ಥಳಗಳು ತಮಿಳು ನೆಲದಲ್ಲೇ ಇರುವುದಂತೂ ರಾಮಾಯಣದೊಂದಿಗೆ ತಮಿಳಿನ ನಂಟಿಗೆ ಶ್ರೇಷ್ಠ ಸಾಕ್ಷಿಗಳಾಗಿವೆ ಎಂದು ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥಕ್ಷೇತ್ರ ನಿರ್ಮಾಣ ಟ್ರಸ್ಟ್ ನ ಟ್ರಸ್ಟಿಯೂ ಆಗಿರುವ […]

ಉಡುಪಿ: ಗುಡುಗು ಸಹಿತ ಭಾರಿ ಮಳೆ

ಉಡುಪಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಾದ್ಯಂತ ಇಂದು ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಜಡಿ ಮಳೆಯು ಸಂಜೆ 7.30ರ ವೇಳೆಗೆ ಬಿರುಸು ಪಡೆದುಕೊಂಡಿತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ವರ್ಷಾಧರೆ ಆಗಿದೆ. ಉಡುಪಿ, ಕಾರ್ಕಳ, ಹೆಬ್ರಿ, ಕಾಪು, ಪೆರ್ಡೂರು ಸಹಿತ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ.

ಮೀನು ಹಿಡಿಯಲು ಹೋದ ಇಬ್ಬರು ನದಿಯಲ್ಲಿ ಮುಳುಗಿ ಸಾವು

ಬೆಳ್ತಂಗಡಿ: ಮೀನು ಹಿಡಿಯಲು ಹೋದ ಇಬ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ಪಂಪ್ ಹೌಸ್ ಬಳಿ ಸೋಮಾವತಿ ನದಿಯಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ನದಿಯಲ್ಲಿ ಮುಳುಗಿದ ಇಬ್ಬರ ಪೈಕಿ ಓರ್ವರನ್ನು ಉಜಿರೆ ಶಿವಾಜಿ ನಗರದ ರೆಂಜಳ ನಿವಾಸಿ ರಮೇಶ್ (48) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ರಮೇಶ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮಾವತಿ ನದಿಯ ಜಾಕ್ ವೆಲ್ ಸಮೀಪ ದಡದಲ್ಲಿ ಇಂದು ಅವರ ಉಡುಗೆ ಮತ್ತು ಮೀನು ಹಿಡಿಯುವ ಬಲೆ, ಮೊಬೈಲ್ ದೊರಕಿದೆ. […]

ಚೆನ್ನೈ: ಮಡಿಪ್ಪಾಕಮ್ ಮಧ್ವಾಶ್ರಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿದ ಪೇಜಾವರ ಶ್ರೀ

ಚೆನ್ನೈ: ತಮಿಳುನಾಡು ಪ್ರವಾಸದಲ್ಲಿ ಇರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ಚೆನ್ನೈ ಮಡಿಪ್ಪಾಕಮ್ ನ ಮಧ್ವಾಶ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ವಿಗ್ರಹ ಪ್ರತಿಷ್ಠಾನೆ ನೆರವೇರಿಸಿ, ಕಲಶಾಭಿಷೇಕ ಸಹಿತ ಮಹಾಪೂಜೆ ನೆರವೇರಿಸಿದರು. ಬಳಿಕ ಚೆನ್ನೈನ ನಂಗನಲ್ಲೂರಿಗೆ ತೆರಳಿದ ಅವರು, ಅಲ್ಲಿ ಪ್ರತಿಷ್ಠಿತ ಚಕ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಸೇವಾಭಾರತಿ ಸಹಯೋಗದಲ್ಲಿ ಆರಂಭಿಸಿರುವ ಅತ್ಯಾಧುನಿಕ ಸೌಕರ್ಯ ಹೊಂದಿರುವ ಸಂಚಾರಿ ಆಸ್ಪತ್ರೆಯನ್ನು ಶ್ರೀಪಾದರು ಉದ್ಘಾಟಿಸಿದರು. ಆಸ್ಪತ್ರೆ ಮುಖ್ಯಸ್ಥ ಡಾ. ಸತ್ಯನಾರಾಯಣ ಪ್ರಸಿದ್ಧ ಧಾರ್ಮಿಕ ನೇತಾರ ಮಡಿಪ್ಪಾಕ್ಕಮ್ ಮುರಳಿ ವಿಷ್ಣುಮೂರ್ತಿ […]

ಉಡುಪಿ: ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಉಡುಪಿ: ಇಲ್ಲಿನ ಪಿಪಿಸಿ ಕಾಲೇಜಿನ ಸಮೀಪ ವಕೀಲ ಲಕ್ಷ್ಮಣ ಶೆಣೈ ಅವರ ಮನೆ ಬಳಿಯ ನಿರ್ಜನ ಪ್ರದೇಶದಲ್ಲಿ ಎರಡು ಬೃಹತ್ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ವಕೀಲ ಲಕ್ಷ್ಮಣ ಶೆಣೈ, ಗಣೇಶ ಆಚಾರ್ಯ, ಸುಧೀರ್ ನಾಯಕ್, ಆಟೊ ಚಾಲಕ ರಾಜಕುಮಾರ್ ಅವರು ಕಾರ್ಯಾಚರಣೆ ನಡೆಸಿ ಒಂದು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ದೂರದ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.