ಶತಮಾನದ ಸಂಭ್ರಮಕ್ಕೆ ಸಜ್ಜಾದ ಪುತ್ತೂರು ಎಲ್.ವಿ.ಪಿ. ಶಾಲೆ

ಉಡುಪಿ: ಉಡುಪಿಯ ಪುತ್ತೂರಿನ ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಶೈಕ್ಷಣಿಕ ಸೇವೆಯಲ್ಲಿ ನೂರು ವರ್ಷಗಳನ್ನು ಪೂರೈಸಿದ್ದು, ಈ ಐತಿಹಾಸಿಕ ಸಂಭ್ರಮವನ್ನು ನ. 20 ಮತ್ತು 21ರಂದು ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಜ್ಜಾಗಿದೆ. ‘ಜ್ಞಾನದ ಪಯಣಕ್ಕೆ’ ನೂರರ ಸಂಭ್ರಮ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ಬಹುಮಾನ ವಿತರಣೆ, ಸಭಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ […]
ಉದ್ಯೋಗವಕಾಶ

ಉಡುಪಿಯ ಪ್ರಸಿದ್ಧ ಪ್ರಿ ಸ್ಕೂಲ್ ಒಂದಕ್ಕೆ ಟೀಚರ್ ಬೇಕಾಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9880450014
ಉಡುಪಿ: PRATHVI AGENCIES ಸಂಸ್ಥೆಗೆ ‘ಅಕೌಂಟ್ ಅಸಿಸ್ಟೆಂಟ್ ಹಾಗೂ ಬಿಲ್ಲಿಂಗ್’ ಹುದ್ದೆಗೆ ನೇಮಕಾತಿ

ಉಡುಪಿ: ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ‘ಪೃಥ್ವಿ ಏಜೆನ್ಸೀಸ್’ (PRATHVI AGENCIES) ಸಂಸ್ಥೆಗೆ ‘ಅಕೌಂಟ್ ಅಸಿಸ್ಟೆಂಟ್ ಹಾಗೂ ಬಿಲ್ಲಿಂಗ್’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಪರ್ಕಿಸಬಹುದು.7625086328
ಮುರಳಿ ಕಡೆಕಾರ್ಗೆ ‘ಶಾರದಾಕೃಷ್ಣ’ ಪ್ರಶಸ್ತಿ

ಉಡುಪಿ: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ನ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಶಾರದಾಕೃಷ್ಣ’ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ ಹಾಗೂ ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಅವರು ಆಯ್ಕೆಯಾಗಿದ್ದಾರೆ. ಜ. 23ರಂದು ಸಂಜೆ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿರುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ ₹50 ಸಾವಿರ ಗೌರವಧನ ಒಳಗೊಂಡಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ […]
ಜಾಹೀರಾತು ನೋಡಿ ಮರುಳಾಗಿ ರೂ.1.22 ಲಕ್ಷ ಕಳೆದುಕೊಂಡ ಮಂಗಳೂರಿನ ಯುವಕ, ಎಐ ಕೋರ್ಸ್ ಹೆಸರಿನಲ್ಲಿಯೂ ಲಕ್ಷ ಲಕ್ಷ ಲೂಟಿ!

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಎಸ್ಕಾರ್ಟ್ ಸೇವೆಯ ಜಾಹೀರಾತು ನಂಬಿ 22 ವರ್ಷದ ಯುವಕನೊಬ್ಬ ₹1,22,700 ಕಳೆದುಕೊಂಡಿದ್ದಾನೆ. ಮತ್ತೊಂದೆಡೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಆನ್ಲೈನ್ ಕೋರ್ಸ್ಗೆ ದಾಖಲಾತಿ ನೀಡುವುದಾಗಿ ನಂಬಿಸಿ 57 ವರ್ಷದ ವ್ಯಕ್ತಿಯೊಬ್ಬರಿಂದ ₹1,27,500 ವಸೂಲಿ ಮಾಡಿ ವಂಚಿಸಲಾಗಿದೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. ಎಸ್ಕಾರ್ಟ್ ಸೇವೆಯ ಜಾಹೀರಾತು ನಂಬಿ ₹1.22 ಲಕ್ಷ […]