Mana Village: ಮೋದಿ ಮನವಿಯಿಂದ ಹರಿದು ಬಂತು 30 ಕೋಟಿ! ಈಗ ಈ ಹಳ್ಳಿಯ ಅದೃಷ್ಟವೇ ಬದಲು

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿಯವರ ಆ ಒಂಜು ಮನವಿಯು ಈ ಗಡಿ ಗ್ರಾಮವನ್ನು ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಚಾರ್‌ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರು ನಡೆಸುವ ಶಾಪಿಂಗ್ ಭರಾಟೆಯು ಇಲ್ಲಿನ ಸ್ಥಳೀಯ ವ್ಯವಹಾರಗಳಿಗೆ ಗಮನಾರ್ಹ ಉತ್ತೇಜನ ನೀಡಿದೆ. ಒಂದು ಕಾಲದಲ್ಲಿ ಸೀಮಿತ ಆರ್ಥಿಕ ಚಟುವಟಿಕೆಗೆ ಹೆಸರುವಾಸಿಯಾಗಿದ್ದ ಈ ಗ್ರಾಮವು ಈಗ ಕೋಟ್ಯಂತರ ರೂಪಾಯಿಗಳ ವ್ಯಾಪಾರವನ್ನು ಹೊಂದಿದೆ. ಈ ಋತುವಿನಲ್ಲಿ, ಮಾರುಕಟ್ಟೆ ವಹಿವಾಟು 25 ರಿಂದ 30 ಕೋಟಿ ರೂಪಾಯಿಗಳನ್ನು ತಲುಪುವ ಅಂದಾಜಿದೆ. ಕೇವಲ ಉಣ್ಣೆಯ ಬಟ್ಟೆಗಳ ಮಾರಾಟವು […]

ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ಧತಿ ನಿರ್ಣಯಕ್ಕೆ ಭಾರತದ ವಿರೋಧ

ಜಿನೀವಾ: ವಿಶ್ವಸಂಸ್ಥೆಯಲ್ಲಿ (United Nations) ಮರಣದಂಡನೆ ರದ್ಧತಿ ನಿರ್ಣಯಕ್ಕೆ ಭಾರತ (India) ವಿರೋಧ ವ್ಯಕ್ತಪಡಿಸಿದೆ. ಮರಣದಂಡನೆಗೆ ತಡೆ ನೀಡುವಂತೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರ ಆಗಿತ್ತು. ಮೆಕ್ಸಿಕೋ ಮಂಡಿಸಿದ್ದ ನಿರ್ಣಯಕ್ಕೆ 133 ದೇಶಗಳು ಬೆಂಬಲ ವ್ಯಕ್ತಪಡಿಸಿದವು. ಆದರೆ, ಭಾರತ ಸೇರಿದಂತೆ 33 ದೇಶಗಳಿಂದ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದೆ. 16 ದೇಶಗಳು ಮತದಾನದಿಂದ ದೂರ ಉಳಿದಿವೆ. ಮರಣದಂಡನೆ ರದ್ಧತಿಗೆ ಜಾಗತಿಕ ಒಮ್ಮತವಿಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ. ಪ್ರತಿ ಸಾರ್ವಭೌಮ ರಾಷ್ಟ್ರಕ್ಕೂ ತನ್ನದೇ ನ್ಯಾಯಾಂಗ ವ್ಯವಸ್ಥೆ ಮತ್ತು ಶಿಕ್ಷೆ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ:

ಉಡುಪಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ನಡೆಯುತ್ತಿರುವ ನವ ಚಂಡಿಯಾಗದಲ್ಲಿ ಅವರು ಭಾಗವಹಿಸಿ ದೇವಿಯ ದರ್ಶನ ಪಡೆದರು.ಕುಮಾರಸ್ವಾಮಿ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ ,ಪುತ್ರ ನಿಖಿಲ್ ಕುಮಾರಸ್ವಾಮಿ ಯಾಗದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ತಂತ್ರಿಗಳಾದ ನರಸಿಂಹ ಅಡಿಗ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಕುಮಾರಸ್ವಾಮಿ ಅವರನ್ನು ದೇವಸ್ಥಾನದ ಆಡಳಿತ […]

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಭೀತಿ; ಆಂಧ್ರ, ತಮಿಳುನಾಡು ಸೇರಿ 4 ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ

ಅಮರಾವತಿ/ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಸೋಮವಾರ ಸಂಜೆ ಚಂಡಮಾರುತವಾಗಿ ರೂಪುಗೊಂಡು, ಮಂಗಳವಾರ ಸಂಜೆಯ ವೇಳೆಗೆ ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಆಂಧ್ರಪ್ರದೇಶದ ಕರಾವಳಿಯತ್ತ ಸಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಹಲವು ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದಲ್ಲಿ ಭಾರೀ ಮಳೆಯ ಮುನ್ಸೂಚನೆಐಎಂಡಿ ಪ್ರಕಾರ, ಮಂಗಳವಾರ ಸಂಜೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ […]

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ಯತ್ನ

ಉಡುಪಿ: ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಭಾನುವಾರ (ನ.15) ಮುಂಜಾನೆ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಸಮೀಪ ಮಲಗಿದ್ದ ದನಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕಾರಿನಿಂದ ಇಳಿದು ದನಗಳ ಬಳಿ ಬರುತ್ತಿದ್ದ ಇಬ್ಬರನ್ನು ಕಂಡ ದನಗಳ ಹಿಂಡು ಬೆದರಿ ಅಲ್ಲಿಂದ ಓಡಿ ಹೋಗಿದೆ. ಇದರಿಂದ ದನಗಳು ಕಳ್ಳರ ಕೈಗೆ ಸಿಗದೆ ಬಚಾವ್ ಆಗಿವೆ. ದನಗಳು ಓಡಿ ಹೋದ ಬಳಿಕವೂ ಕೆಲಕಾಲ ಸ್ಥಳದಲ್ಲಿಯೇ ಕಾದಿದ್ದ ಅಪರಿಚಿತರು, ನಂತರ […]