ಗೂಗಲ್ನಿಂದ ಬಂತು Google Gemini 4 Hydrogen, ಹೊಸ AI ಮಾದರಿಯಿದು, 2.5 ಪಟ್ಟು ವೇಗದ ಕಾರ್ಯಕ್ಷಮತೆ!

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಗೂಗಲ್, ‘ಜೆಮಿನಿ 4 ಹೈಡ್ರೋಜನ್’ (Google Gemini 4 Hydrogen) ಎಂಬ ಹೊಸ AI ಮಾದರಿಯನ್ನು ಪರಿಚಯಿಸಿದೆ. ವೇಗ, ನಿಖರತೆ ಮತ್ತು ಕಡಿಮೆ ವೆಚ್ಚಕ್ಕೆ ಆದ್ಯತೆ ನೀಡಿರುವ ಈ ಮಾದರಿ, ಕೋಡಿಂಗ್, ಡೀಬಗ್ಗಿಂಗ್, ವೆಬ್ ಡಿಸೈನ್ ಹಾಗೂ ದೈನಂದಿನ ಡಿಜಿಟಲ್ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಈಗಾಗಲೇ ಕ್ಲಿಷ್ಟಕರ ಸಮಸ್ಯೆಗಳ ಪರಿಹಾರಕ್ಕಾಗಿ ಜೆಮಿನಿ 4 ಕಾರ್ಬನ್ ಮತ್ತು […]
ಮರಣದಂಡನೆ ರದ್ದತಿ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ತೀವ್ರ ವಿರೋಧ!

ಜಿನೀವಾ: ಮರಣದಂಡನೆಗೆ ತಡೆ ನೀಡುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಮರಣದಂಡನೆ ರದ್ದತಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎಂಬ ನಿಲುವನ್ನು ಭಾರತ ಸ್ಪಷ್ಟಪಡಿಸಿದೆ. ಮೆಕ್ಸಿಕೋ ಮಂಡಿಸಿದ್ದ ಈ ನಿರ್ಣಯಕ್ಕೆ 133 ದೇಶಗಳು ಬೆಂಬಲ ಸೂಚಿಸಿದರೆ, ಭಾರತ ಸೇರಿದಂತೆ 33 ದೇಶಗಳು ವಿರೋಧವಾಗಿ ಮತ ಚಲಾಯಿಸಿವೆ. ಇನ್ನು 16 ದೇಶಗಳು ಮತದಾನದಿಂದ ದೂರ ಉಳಿದಿವೆ. ಮರಣದಂಡನೆ ರದ್ದತಿಗೆ ಜಾಗತಿಕ ಒಮ್ಮತವಿಲ್ಲ. ಪ್ರತಿಯೊಂದು ಸಾರ್ವಭೌಮ ರಾಷ್ಟ್ರಕ್ಕೂ ತನ್ನದೇ ಆದ ನ್ಯಾಯಾಂಗ […]
ಮತಾಂತರ ನಿಷೇಧ, ಗೋಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸು ಪಡೆದರೆ ರಾಜ್ಯಾದ್ಯಂತ ಬೃಹತ್ ಜನಾಂದೋಲನ: ವಿಹಿಂಪ ಎಚ್ಚರಿಕೆ

ಉಡುಪಿ: ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸು ಪಡೆಯುವ ಅಥವಾ ದುರ್ಬಲಗೊಳಿಸುವ ನಿರ್ಧಾರ ಕೈಗೊಂಡರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಾಗೂ ಜನಾಂದೋಲನ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಮುಂಬರುವ ಬೆಳಗಾವಿ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022’ ಹಾಗೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಅನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ಈ ಕಾಯ್ದೆಗಳನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ಸರ್ಕಾರ […]
ರಾಜ್ಯದಲ್ಲಿ ರಸ್ತೆ ಅಪಘಾತಗಳ ಆಘಾತಕಾರಿ ಏರಿಕೆ: ವರ್ಷಕ್ಕೆ 11 ಸಾವಿರಕ್ಕೂ ಹೆಚ್ಚು ಸಾವು!

ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಪ್ರತಿ ವರ್ಷ 11 ಸಾವಿರಕ್ಕೂ ಹೆಚ್ಚು ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಬಿಡುಗಡೆ ಮಾಡಿರುವ ಅಂಕಿಅಂಶಗಳು ರಸ್ತೆ ಸುರಕ್ಷತೆಯ ಗಂಭೀರ ಸ್ಥಿತಿಯನ್ನು ತೆರೆದಿಟ್ಟಿವೆ. ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ 2021ರಲ್ಲಿ 31,434 ರಸ್ತೆ ಅಪಘಾತಗಳು ಸಂಭವಿಸಿದ್ದರೆ, 2025ರಲ್ಲಿ ಈ ಸಂಖ್ಯೆ 37,682ಕ್ಕೆ ಏರಿಕೆಯಾಗಿದೆ. ಇದು ಶೇ.20ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ 9,384ರಿಂದ […]
ಐಸಿಎಐ ರಾಷ್ಟ್ರೀಯ ಸಮ್ಮೇಳನ ‘ಸಮುದ್ಯತಿ‘ ಉದ್ಘಾಟನೆ

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ (ಎಸ್ಐಆರ್ಸಿ) ಉಡುಪಿ ಶಾಖೆಯು ಸಂಸ್ಥೆಯ ಸಾರ್ವಜನಿಕ ಮತ್ತು ಸರಕಾರಿ ಹಣಕಾಸು ನಿರ್ವಹಣ ಸಮಿತಿ ಆಶ್ರಯದಲ್ಲಿ ಅಜ್ಜರಕಾಡು ಟೌನ್ಹಾಲ್ನಲ್ಲಿ ‘ರೈಸಿಂಗ್ ಟುಗೆದರ್… ಟ್ರಾನ್ಸ್ಫಾರ್ಮಿಂಗ್ ಟುಮಾರೋ‘ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾದ ‘ಸಮುದ್ಯತಿ – 2026‘ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ ಶುಕ್ರವಾರ ನಡೆಯಿತು. ಪಿಜಿಎಫ್ಎಂಸಿ ಉಪಾಧ್ಯಕ್ಷ ಅರ್ಪಿತ್ ಕಬ್ರಾ ಮಾತನಾಡಿ, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ದೇಶದ ಬಲಿಷ್ಠ ಸಂಘಟನೆಗಳಲ್ಲಿ ಒಂದಾಗಿದೆ. ಲೆಕ್ಕಪರಿಶೋಧಕ ವೃತ್ತಿಯು ಅತ್ಯಂತ ಗೌರವಯುತ ಹಾಗೂ ಸಮಾಜಕ್ಕೆ ಅನಿವಾರ್ಯವಾದ […]