ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿಯವರ ಆ ಒಂಜು ಮನವಿಯು ಈ ಗಡಿ ಗ್ರಾಮವನ್ನು ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಚಾರ್‌ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರು ನಡೆಸುವ ಶಾಪಿಂಗ್ ಭರಾಟೆಯು ಇಲ್ಲಿನ ಸ್ಥಳೀಯ ವ್ಯವಹಾರಗಳಿಗೆ ಗಮನಾರ್ಹ ಉತ್ತೇಜನ ನೀಡಿದೆ. ಒಂದು ಕಾಲದಲ್ಲಿ ಸೀಮಿತ ಆರ್ಥಿಕ ಚಟುವಟಿಕೆಗೆ ಹೆಸರುವಾಸಿಯಾಗಿದ್ದ ಈ ಗ್ರಾಮವು ಈಗ ಕೋಟ್ಯಂತರ ರೂಪಾಯಿಗಳ ವ್ಯಾಪಾರವನ್ನು ಹೊಂದಿದೆ. ಈ ಋತುವಿನಲ್ಲಿ, ಮಾರುಕಟ್ಟೆ ವಹಿವಾಟು 25 ರಿಂದ 30 ಕೋಟಿ ರೂಪಾಯಿಗಳನ್ನು ತಲುಪುವ ಅಂದಾಜಿದೆ. ಕೇವಲ ಉಣ್ಣೆಯ ಬಟ್ಟೆಗಳ ಮಾರಾಟವು ಗ್ರಾಮಸ್ಥರಿಗೆ 5 ರಿಂದ 10 ಕೋಟಿ ರೂಪಾಯಿಗಳ ಲಾಭ ಗಳಿಸಿಕೊಟ್ಟಿದೆ. ಇಲ್ಲಿನ ಪ್ರತಿಯೊಬ್ಬ ಗ್ರಾಮಸ್ಥರೂ ನರೇಂದ್ರ ಮೋದಿಯವರನ್ನು ಪ್ರತಿಕ್ಷಣ ನೆನೆಸಿಕೊಳ್ಳುತ್ತಿದ್ದಾರೆ
ಕೊನೆಯ ಗ್ರಾಮವನ್ನು ಮೊದಲ ಗ್ರಾಮ ಎಂದಿದ್ದ ಪ್ರಧಾನಿ
ಉತ್ತರಾಖಂಡದ ಬದರಿನಾಥ ಧಾಮ್ ಬಳಿ ಇರುವ ದೇಶದ ಮೊದಲ ಗ್ರಾಮವಾದ ಮಾನಾದಲ್ಲಿ ಈ ಬದಲಾವಣೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 21, 2022 ರಂದು ಮಾನಾಗೆ ಭೇಟಿ ನೀಡಿದ್ದರು. ಇಲ್ಲಿ, ಅವರು “ಕೊನೆಯ ಹಳ್ಳಿ” ಎಂದು ಕರೆಯುವ ಬದಲು “ದೇಶದ ಮೊದಲ ಹಳ್ಳಿ” ಎಂದು ಕರೆಯುವ ಮೂಲಕ ಗ್ರಾಮಕ್ಕೆ ಹೊಸ ಗುರುತನ್ನು ನೀಡಿದರು. ಯಾತ್ರಿಕರು ತಮ್ಮ ಪ್ರಯಾಣ ವೆಚ್ಚದ ಐದು ಪ್ರತಿಶತವನ್ನು ಸ್ಥಳೀಯ ಹಳ್ಳಿಗಳಲ್ಲಿ ಖರ್ಚು ಮಾಡುವಂತೆ ಅವರು ಮನವಿ ಮಾಡಿದ್ದರು.















