ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್ ನಲ್ಲಿ ಕುರಾನ್ ಪದ್ಯ: ವಿವಾದವೆಬ್ಬಿಸಿದ ಪೆಂಡೆಂಟ್, ನಟಿಗೆ ನೋಟಿಸ್

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್ನ ಆಯತುಲ್ ಕುರ್ಸಿ ವಚನ ಕೆತ್ತಲಾಗಿದೆ ಎನ್ನಲಾಗಿದ್ದು, ಅದನ್ನು ಫ್ಯಾಷನ್ ಆಭರಣವಾಗಿ ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಅವರು ಕರೀನಾ ಕಪೂರ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. […]
ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ: ಮಕ್ಕಳಿಗೆ ಆನ್ಲೈನ್ ನಲ್ಲಿಯೇ ತರಗತಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಐದು ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 500ರ ಗಡಿ ದಾಟಿದ್ದು, ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ದೆಹಲಿಯಷ್ಟೇ ಅಲ್ಲದೆ, ನೆರೆಯ ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮದಲ್ಲೂ ವಾಯುಮಾಲಿನ್ಯ ತೀವ್ರಗೊಂಡಿದೆ. ಈ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಹಂತಕ್ಕೆ ತಲುಪಿದೆ. ನೋಯ್ಡಾದಲ್ಲಿ ಗರಿಷ್ಠ 533 AQI ದಾಖಲಾಗಿದ್ದರೆ, ಗ್ರೇಟರ್ ನೋಯ್ಡಾದಲ್ಲಿ 517 ಹಾಗೂ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ 512 […]
ಮಂಗಳೂರಿನಲ್ಲಿ 1.15 ಕೋಟಿ ರೂ. ದರೋಡೆ ಪ್ರಕರಣ: ಪೊಲೀಸ್ ಸಿಬ್ಬಂದಿ ಸೇರಿ ಐವರು ಅರೆಸ್ಟ್

ಮಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ 1.15 ಕೋಟಿ ರೂ. ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಐವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅಕ್ಟೋಬರ್ 28ರಂದು ಮಂಗಳೂರಿನ ಲಾಲ್ಬಾಗ್ನಲ್ಲಿ ಈ ಘಟನೆ ನಡೆದಿತ್ತು. ಬಂಧಿತರನ್ನು ಕಾಪು ಮೂಲದ ರಿಯಾಜ್, ಹಳಿಯಾಳದ ನಸ್ರುಲ್ಲಾ ಖಾನ್, ಕಾರವಾರದ ನಿತ್ಯಾನಂದ, ಫರಂಗಿಪೇಟೆಯ ಖಾಲಿದ್ ಹಾಗೂ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ್ […]
ಎಲ್ಲರನ್ನೂ ಮುಗಿಸಿಬಿಟ್ರೆ 3 ಕೋಟಿ ಆಸ್ತಿ ನಮ್ಮದೇ – ಮಗಳ ಬ್ರೈನ್ವಾಷ್ ಮಾಡಿದ್ದ ಹಂತಕ; ತನಿಖೆಯಲ್ಲಿ ಸಾಬೀತು

ಬೆಂಗಳೂರು: ಪತ್ನಿ ಕುಟುಂಬಸ್ಥರ 7 ಮಂದಿ ಹತ್ಯೆ ಪ್ರಕರಣದ ತನಿಖೆಯನ್ನ ರಾಜಾಜಿನಗರ ಪೊಲೀಸರು ಚುರುಗೊಳಿಸಿದ್ದಾರೆ. ಹಂತಕ ಇಂದುಶೇಖರ್ ವಿಚಾರಣೆಯ ವೇಳೆ ಕೊಲೆ ಹಿಂದಿನ ಹಲವು ಸತ್ಯಗಳು ಬಯಲಿಗೆ ಬರುತ್ತಿದೆ. ಮಗಳಿಗೆ ಕೋಟ್ಯಂತರ ರೂಪಾಯಿ ಆಸ್ತಿಯ ಆಸೆ ತೊರಿಸಿ ಕೃತ್ಯದಲ್ಲಿ ಭಾಗಿಯಾಗಲು ಮಗಳ ಬ್ರೈನ್ ವಾಷ್ ಮಾಡಿದ್ದಾನೆ ಅನ್ನೋದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ ಎಂದು ತಿಳಿದುಬಂದಿದೆ. ಶ್ರೀರಾಂಪುರದಲ್ಲಿ ಅಜ್ಜಿಯ 3-4 ಕೋಟಿ ಬೆಲೆ ಬಾಳುವ ಆಸ್ತಿ ಇದೆ. ಅತ್ತೆ ಮಾವಂದಿರುವ ಇದ್ದರೆ, ಆ ಆಸ್ತಿಯಲ್ಲಿ ಅವರಿಗೂ ಪಾಲು ಕೊಡಬೇಕಾಗುತ್ತೆ. […]
ಜಮ್ಮು-ಕಾಶ್ಮೀರದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಮಿಸ್ಸಿಂಗ್ – ವ್ಯಾಪಕ ಶೋಧ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಭದ್ರತಾ ಪರಿಸ್ಥಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPO) ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಈ ಸಂದಿಗ್ಧ ಪರಿಸ್ಥಿತಿ ನಡುವೆ ಕುಲ್ಗಾಮ್ ಜಿಲ್ಲೆಯಲ್ಲಿ CRPF ಚೆಕ್ಪೋಸ್ಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು CRPF ಸಿಬ್ಬಂದಿ ಗಾಯಗೊಂಡಿದ್ದಾರೆ. ಇಬ್ಬರು ಪೊಲೀಸರು ಮಿಸ್ಸಿಂಗ್ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ವಿಶೇಷ ಪೊಲೀಸ್ ಅಧಿಕಾರಿಗಳನ್ನ 57 ವರ್ಷದ ಬಾಬಿ ಚಂದ್ […]