ಮಣಿಪಾಲ MSDCಯಲ್ಲಿ ನೈಲ್ ಟೆಕ್ನಿಷಿಯನ್ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾತಿ ಶುರು!

ಮಣಿಪಾಲ: ಸೌಂದರ್ಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳನ್ನು ಬಯಸುವವರಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಬ್ರೇನ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ನೈಲ್ ಟೆಕ್ನಿಷಿಯನ್ ಡಿಪ್ಲೊಮಾ ಸೇರಿದಂತೆ ವಿವಿಧ ಕಾಸ್ಮೆಟಾಲಜಿ ಮತ್ತು ಮೇಕಪ್ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಲಾಗಿದೆ. ನೈಲ್ ಟೆಕ್ನಿಷಿಯನ್ ಡಿಪ್ಲೊಮಾ ಕೋರ್ಸ್‌ಗೆ ದಾಖಲಾತಿ ಪಡೆಯುವವರಿಗೆ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್‌ನಲ್ಲಿ ಉಚಿತ ಪ್ರಮಾಣಪತ್ರ ಪಡೆಯುವ ಅವಕಾಶವಿದೆ. ಸೌಂದರ್ಯ ಮತ್ತು ಮೇಕಪ್ ತರಬೇತಿ ಕೋರ್ಸ್‌ಗಳಿಗೆ ಪ್ರವೇಶ ಪಡೆದವರಿಗೆ ಶೇ.25ರಷ್ಟು ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ […]

MSDC ವತಿಯಿಂದ ಉಚಿತ ಒಂದು ತಿಂಗಳ ಆಯಿಲ್ ಆ್ಯಂಡ್ ಗ್ಯಾಸ್ ಉದ್ಯಮ ತರಬೇತಿ: 10ನೇ ತರಗತಿ ಪಾಸಾದವರಿಗೂ ಇಲ್ಲಿದೆ ಒಳ್ಳೆಯ ಅವಕಾಶ

ಮಣಿಪಾಲ: ಆಯಿಲ್ ಆ್ಯಂಡ್ ಗ್ಯಾಸ್ ಉದ್ಯಮದಲ್ಲಿ ಉದ್ಯೋಗಾವಕಾಶ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಒಂದು ತಿಂಗಳ ಉಚಿತ ಉದ್ಯಮ ಆಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ ಹೆಲ್ತ್ ಆ್ಯಂಡ್ ಸೇಫ್ಟಿ ಆಫೀಸರ್, ಹೈಡ್ರೋ ಜೆಟ್ಟಿಂಗ್, ಸರ್ಟಿಫೈಡ್ ಪರ್ಮಿಟ್ ರಿಸೀವರ್, ರಿಗ್ಗರ್ ಲೆವೆಲ್-3, ಸ್ಟ್ಯಾಂಡ್‌ಬೈ ಮ್ಯಾನ್ ಮತ್ತು ಫೈರ್ ವಾಚ್, ಫ್ಲ್ಯಾಗ್‌ಮನ್, ಬ್ರೀಥಿಂಗ್ ಅಪರೇಟಸ್, ಸರ್ಟಿಫೈಡ್ ಮೆಕ್ಯಾನಿಕಲ್ ಪೈಪ್ ಫಿಟ್ಟರ್ ಹಾಗೂ ಸರ್ಟಿಫೈಡ್ ಬೋಲ್ಟ್ ಟೈಟನಿಂಗ್ (ಕಾಂಪೊನೆಂಟ್ ಮೌಂಟಿಂಗ್) […]

ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಸ್ಕಿಲ್ ಟ್ರೈನರ್ ಹುದ್ದೆಗೆ ನೇಮಕಾತಿ:ಆಸಕ್ತರು ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಸ್ಕಿಲ್ ಟ್ರೈನರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಿತ ತಾಂತ್ರಿಕ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೊಸದಾಗಿ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೂ ಅವಕಾಶವಿದ್ದು, ತಂತ್ರಜ್ಞಾನ ಹಾಗೂ ಬೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಾಂತ್ರಿಕ ವಿಷಯಗಳು ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸುವ ಕುರಿತು ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯುವುದರೊಂದಿಗೆ ವೃತ್ತಿಪರ ಕೌಶಲ್ಯ ಮತ್ತು ವೃತ್ತಿಜೀವನದ ಬೆಳವಣಿಗೆಗೆ ಅವಕಾಶ […]

ಈ ರೋಬೋಟ್, Ai ಡ್ರೋನ್ ಗಳು ನಿಮ್ಮ ಮನೆ, ಕಚೇರಿ ಕಾಯುತ್ತೆ: ಅಮೆಜಾನ್‌ನಿಂದ ಲಾಂಚ್ ಆಯ್ತು ಭದ್ರತೆ ಒದಗಿಸುವ ಹೊಸ ಟೆಕ್ನಾಲಜಿ !

ಅಮೆಜಾನ್ ಮಾಲೀಕತ್ವದ ಜನಪ್ರಿಯ ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಕಂಪನಿ ‘ರಿಂಗ್’ (Ring), ಭದ್ರತಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ಮುಂದಾಗಿದೆ. ಕಂಪನಿಯು ‘ರಿಂಗ್ ರೋಬೋಟಿಕ್ಸ್’ (Ring Robotics) ಎಂಬ ಹೊಸ ಉಪಕ್ರಮದಡಿ ‘ರಿಂಗ್ ಡ್ರೋನ್ ಕ್ಯಾಮ್’ ಮತ್ತು ‘ರಿಂಗ್ ರೋವರ್ ಕ್ಯಾಮ್’ ಎಂಬ ಎರಡು ಅತ್ಯಾಧುನಿಕ ರೋಬೋಟಿಕ್ ಭದ್ರತಾ ಸಾಧನಗಳನ್ನು ಪರಿಚಯಿಸಿದೆ. ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳಂತೆ ಒಂದೇ ಸ್ಥಳದಲ್ಲಿ ನಿಂತು ಕಣ್ಗಾವಲು ನಡೆಸುವ ಬದಲು, ಈ ರೋಬೋಟ್‌ಗಳು ಮನೆ ಹಾಗೂ ಕಚೇರಿಗಳ ವಿವಿಧ ಭಾಗಗಳಿಗೆ ಚಲಿಸಿ ತಪಾಸಣೆ […]

ಶಿವಮೊಗ್ಗ ವಿಮಾನ ನಿಲ್ದಾಣದಿಂದ 3 ತಿಂಗಳು ವಿಮಾನ ಹಾರಾಟ ಸ್ಥಗಿತ: ನ.21ರಿಂದ ಸೇವೆ ಬಂದ್

ಶಿವಮೊಗ್ಗ: ಉಡಾನ್ ಯೋಜನೆಯ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಮುಂದಿನ ಮೂರು ತಿಂಗಳ ಕಾಲ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ. ನವೆಂಬರ್ 21ರಿಂದ ವಿಮಾನಯಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ನಂಜಯ್ಯನಮಠ್ ತಿಳಿಸಿದ್ದಾರೆ. ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ಕ್ಕೆ ಉಡಾನ್ ಯೋಜನೆ ಮುಕ್ತಾಯಗೊಳ್ಳಲಿದೆ. ಯೋಜನೆಯನ್ನು ಮುಂದುವರಿಸುವಂತೆ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ […]