ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ.

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಖೇಲೋ ಕ್ರಿಯೇಟಿವ್ ಕ್ರೀಡಾಕೂಟ ನಡೆಸಲಾಯಿತು. ಸಭಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಈ ಸಂದ ರ್ಭದಲ್ಲಿ ಮತ್ತೋರ್ವ ಅಥಿತಿಗಳಾದ ಕಾರ್ತಿಕ್ ಭಂಡಾರಿ, ಉಪ ಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫರ್ನಾಂಡಿಸ್, ಕ್ರೀಡಾ ಸಂಚಲಾಕರಾದ ಮಂಜುನಾಥ್ ಕೆ.ವಿ, ತೀರ್ಪುಗಾರರಾಗಿ ಆಗಮಿಸಿದ ಸಂತೋಷ್ ಹಾಗೂ ಶಿವಾನಂದ್ […]
ನೂತನ ಪ್ರಿಯದರ್ಶಿನಿ ಶಾಖೆಯು ಉಡುಪಿಯಲ್ಲಿ ಕೂಡ ಮೌಲ್ಯಯುತ ಗ್ರಾಹಕರನ್ನು ಹೊಂದಲಿ : ಸುಧಾ ನಿತ್ಯಾನಂದ ಉಡುಪಿ

ಉಭಯ ಜಿಲ್ಲೆಯಲ್ಲಿ ಐದು ಶಾಖೆಯನ್ನು ಹೊಂದಿರುವ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಉಡುಪಿಯಲ್ಲೂ ಹೊಸ ಶಾಖೆಯನ್ನು ತೆರೆದಿದ್ದು, ಆದಷ್ಟು ಬೇಗ ಮೌಲ್ಯಯುತ ಗ್ರಾಹಕರನ್ನು ಹೊಂದಿ ಉಡುಪಿ ಶಾಖೆ ಕೂಡ ಅಭಿವೃದ್ಧಿ ಹೊಂದಲಿ ಎಂದು ಶ್ರೀಮತಿ ಸುಧಾ ನಿತ್ಯಾನಂದ ಉಡುಪಿ ರವರು ನುಡಿದರು. ಇವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಉಡುಪಿ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉಡುಪಿ ಶಾಖೆಯ ಶಾಖಾ […]
ಉದ್ಯೋಗಾವಕಾಶ

ಉಡುಪಿಯಲ್ಲಿ ವುಡ್ ಟೆಕ್ ನಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಹುದ್ದೆಗೆ ಉದ್ಯೋಗಾವಕಾಶ ನಡೆಯುತ್ತಿದೆ ಆಸಕ್ತರು ಕೂಡಲೇ ಸಂಪರ್ಕಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7760712555
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೆರಟೋಕೋನಸ್’ಗಾಗಿ ನೂತನ ಕಾರ್ನಿಯಾ ಇಮೇಜಿಂಗ್ ಮತ್ತು ಕ್ರಾಸ್-ಲಿಂಕಿಂಗ್ ಸೌಲಭ್ಯ ಆರಂಭ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ನೇತ್ರಶಾಸ್ತ್ರ ವಿಭಾಗದಲ್ಲಿ ಕೆರಟೋಕೋನಸ್ ಕಾಯಿಲೆಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಎರಡು ನೂತನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕೆರಟೋಕೋನಸ್, ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದಲ್ಲಿ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದಾದ ಕಣ್ಣಿನ ಸಮಸ್ಯೆಯಾಗಿದೆ. ANTERION® ಕಾರ್ನಿಯಲ್ ಟೊಮೊಗ್ರಫಿ ಮತ್ತು ಟೊಪೊಗ್ರಫಿ ಉಪಕರಣ ಹಾಗೂ CXL UVR ರ್ಯಾಪಿಡ್ ಕೊಲಾಜೆನ್ ಕ್ರಾಸ್-ಲಿಂಕಿಂಗ್ ವ್ಯವಸ್ಥೆ ಗಳನ್ನು ಉದ್ಘಾಟಿಸಲಾಯಿತು. ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಅವರು, ವಿಶ್ವ ಕೆರಟೋಕೋನಸ್ ದಿನದ ಹಿನ್ನೆಲೆಯಲ್ಲಿ […]
ಕುಂದಾಪುರದಲ್ಲಿ ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನ: ನರ್ಸಿಂಗ್ ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ಫ್ಲ್ಯಾಶ್ಮಾಬ್

ಕುಂದಾಪುರ: ಎಚ್ಐವಿ/ಏಡ್ಸ್ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳು ಕುಂದಾಪುರದಲ್ಲಿ ಫ್ಲ್ಯಾಶ್ಮಾಬ್ ಮತ್ತು ಬೀದಿ ನಾಟಕದ ಮೂಲಕ ವಿಶೇಷ ಜಾಗೃತಿ ಅಭಿಯಾನ ನಡೆಸಿದರು. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ರೋಟರಿ ಕ್ಲಬ್ ಸನ್ರೈಸ್ ಹಾಗೂ ಮೂಡ್ಲಕಟ್ಟೆ […]