ಕಾರ್ಕಳದ ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ದೀಪಾವಳಿ ಸಂಭ್ರಮಕ್ಕೆ ನ್ಯೂ ಪವನ್ ಜ್ಯುವೆಲ್ಲರ್ಸ್‌ನಿಂದ ಭರ್ಜರಿ ರಿಯಾಯಿತಿ ಆಫರ್!

ಕಾರ್ಕಳ: ಕಾರ್ಕಳದ ಅನಂತಶಯನ ರಸ್ತೆಯ,ಸದಾಶಿವ ಟವರ್ ನಲ್ಲಿರುವ ಪ್ರಸಿದ್ಧ ಚಿನ್ನಾಭರಣ ಮಳಿಗೆ ನ್ಯೂ ಪವನ್ ಜ್ಯುವೆಲ್ಲರ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ಈ ಹಬ್ಬದ ಖರೀದಿಯಲ್ಲಿ ಗ್ರಾಹಕರು , ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿ ಪಡೆಯುವ ಅತ್ಯುತ್ತಮ ಅವಕಾಶ ಇಲ್ಲಿದೆ. ಎಷ್ಟು ರಿಯಾಯಿತಿ? ಏನು ಆಫರ್? ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ರೂ. 300 ರಿಯಾಯಿತಿ ನೀಡಲಾಗುತ್ತಿದೆ. ಒಂದು ಕೆ.ಜಿ. ಬೆಳ್ಳಿ ಸಾಮಗ್ರಿಗಳ ಖರೀದಿಗೆ ರೂ. 5,000 […]

ದೀಪಾವಳಿ ಪ್ರಯುಕ್ತ ಮಣಿಪಾಲದ MSDC ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಬೋಟಿಕ್ಸ್ ಕಾರ್ಯಾಗಾರ : ಈ ಕಾರ್ಯಾಗಾರದಲ್ಲಿ ಏನೇನಿದೆ ವಿಶೇಷ?

ಮಣಿಪಾಲ:  ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ ಹಾಗೂ ಸೃಜನಶೀಲ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮಂಗಳೂರು ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ನವೆಂಬರ್ 9ರಂದು ದೀಪಾವಳಿ ಐಒಟಿ ಮತ್ತು ರೋಬೋಟಿಕ್ಸ್ ಕಾರ್ಯಾಗಾರ ಆಯೋಜಿಸಲಾಗಿದೆ. 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಾಗಾರ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ತರಬೇತಿ ನೀಡಲಾಗುತ್ತದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮೂಲಭೂತ ಪರಿಚಯ, ಸೆನ್ಸರ್‌ಗಳು, ಮೈಕ್ರೋಕಂಟ್ರೋಲರ್‌ಗಳು, ಮಿನಿ ಪ್ರಾಜೆಕ್ಟ್‌ಗಳ ಪ್ರಾಯೋಗಿಕ ತರಬೇತಿ ಹಾಗೂ ರೋಬೋಟಿಕ್ಸ್ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ವತಃ ವಿವಿಧ […]

ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ಬೇಕು ಎನ್ನುವವರಿಗೆ ಇಲ್ಲಿದೆ ಅವಕಾಶ: ತಾಂತ್ರಿಕ ಸಹಾಯಕರು, ಚಾಲಕರ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ವ್ಯಾಪ್ತಿಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅವಕಾಶವೊಂದು ಪ್ರಕಟವಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರು ಹಾಗೂ ಚಾಲಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ದಾಖಲೆಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಸಲ್ಲಿಸಬಹುದು. ಚಾಲಕ ಹುದ್ದೆಗಳಿಗೆ ಭಾರಿ ವಾಹನ ಚಾಲನಾ ಪರವಾನಗಿ ಹಾಗೂ ಅಗತ್ಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅವಕಾಶ ಪಡೆಯಬಹುದಾಗಿದೆ. ಮೈಸೂರು ಸೇರಿದಂತೆ ರಾಜ್ಯದ […]

ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಮೊಹಮ್ಮದ್ ಶಮಿ! ಅಭಿಮಾನಿಗಳೊಂದಿಗೆ ಭಾವುಕ ಸಂದೇಶ ಹಂಚಿಕೊಂಡ ಸೂಪರ್ ಫಾಸ್ಟ್ ಬೌಲರ್!

ಮುಂಬೈ: ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಅವರು, ಕ್ರಿಕೆಟ್ ಬದುಕಿನ ಸವಿನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ್ದಾರೆ. 35 ವರ್ಷದ ಶಮಿ, ಮೊದಲ ಬಾರಿಗೆ ಭಾರತ ತಂಡದ ಟೆಸ್ಟ್ ಜೆರ್ಸಿ ಧರಿಸಿದ ಕ್ಷಣವನ್ನು ಸ್ಮರಿಸಿದ್ದಾರೆ. ದೇಶಕ್ಕಾಗಿ ಏನಾದರೂ ಸಾಧಿಸಬೇಕೆಂಬ ಕನಸಿನೊಂದಿಗೆ ಆರಂಭವಾದ ತಮ್ಮ ಪಯಣದಲ್ಲಿ ಎದುರಾದ ಪ್ರತಿಯೊಂದು ಸವಾಲು, ಗಾಯ, ವಿಕೆಟ್ ಹಾಗೂ […]

ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ 123 ಸ್ಥಳಗಳಿಗೆ ಸಂಚರಿಸಲಿದೆ 908 ವಿಶೇಷ ಬಸ್ ಗಳು!

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳ 123 ಸ್ಥಳಗಳಿಗೆ ಒಟ್ಟು 908 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ. ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಈ ವಿಶೇಷ ಬಸ್‌ಗಳ ಸೇವೆ ಲಭ್ಯವಿರಲಿದೆ. ಒಟ್ಟು 908 ಬಸ್‌ಗಳ ಪೈಕಿ ಶುಕ್ರವಾರ 549 ಬಸ್‌ಗಳು ಹಾಗೂ ಶನಿವಾರ 359 ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ […]