ಮಣಿಪಾಲ: ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ ಹಾಗೂ ಸೃಜನಶೀಲ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮಂಗಳೂರು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ನವೆಂಬರ್ 9ರಂದು ದೀಪಾವಳಿ ಐಒಟಿ ಮತ್ತು ರೋಬೋಟಿಕ್ಸ್ ಕಾರ್ಯಾಗಾರ ಆಯೋಜಿಸಲಾಗಿದೆ.
6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಾಗಾರ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ತರಬೇತಿ ನೀಡಲಾಗುತ್ತದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮೂಲಭೂತ ಪರಿಚಯ, ಸೆನ್ಸರ್ಗಳು, ಮೈಕ್ರೋಕಂಟ್ರೋಲರ್ಗಳು, ಮಿನಿ ಪ್ರಾಜೆಕ್ಟ್ಗಳ ಪ್ರಾಯೋಗಿಕ ತರಬೇತಿ ಹಾಗೂ ರೋಬೋಟಿಕ್ಸ್ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
ವಿದ್ಯಾರ್ಥಿಗಳು ಸ್ವತಃ ವಿವಿಧ ಮಾದರಿಗಳನ್ನು ನಿರ್ಮಿಸುವ ಮೂಲಕ ರೋಬೋಟಿಕ್ಸ್ ತಂತ್ರಜ್ಞಾನವನ್ನು ಅನುಭವಾತ್ಮಕವಾಗಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ರೂ.500 ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ ಮಧ್ಯಾಹ್ನದ ಊಟವೂ ಸೇರಿದೆ.
ಹೆಚ್ಚಿನ ಮಾಹಿತಿಗೆ 81231 65069 ಸಂಪರ್ಕಿಸಬಹುದು. www.msdskills.org ಮೂಲಕವೂ ಮಾಹಿತಿ ಪಡೆಯಬಹುದು.















