Govt Job Alert-ಮಹಿಳಾ ಮೇಲ್ವಿಚಾರಕರ 171 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ: ನ.28 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಬೆಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ಮಹಿಳಾ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ: ಒಟ್ಟು 171 ಮಹಿಳಾ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈ ಪೈಕಿ 30 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ವಿದ್ಯಾರ್ಹತೆ: ಅಭ್ಯರ್ಥಿಗಳು ಗೃಹ ವಿಜ್ಞಾನ (ಹೋಮ್ ಸೈನ್ಸ್), ಸಮಾಜಕಾರ್ಯ (ಸೋಷಿಯಲ್ […]
E20 ಅಲ್ಲ ಇದು 420, ಕರ್ನಾಟಕದ ಪೆಟ್ರೋಲ್ನಲ್ಲಿ ವಿಪರೀತ ಎಥೆನಾಲ್ ಮಿಶ್ರಣದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಪೆಟ್ರೋಲ್ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ, ಕರ್ನಾಟಕದಲ್ಲಿ ನಡೆಸಿದ ಇಂಧನ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ 14 ಪೆಟ್ರೋಲ್ ಮಾದರಿಗಳಲ್ಲಿ 11 ಮಾದರಿಗಳಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಅಂಶ ಕಂಡುಬಂದಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ […]
ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ: ಗಂಭೀರ ಹಂತಕ್ಕೆ ತಲುಪಿದೆ ಗಾಳಿಯ ಗುಣಮಟ್ಟ

ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ವಾಯುಮಾಲಿನ್ಯದ ಭೀತಿ ಹೆಚ್ಚಾಗಿದೆ. ಶನಿವಾರ ಬೆಳಗ್ಗೆ ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 364ಕ್ಕೆ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಗಂಭೀರ ಹಂತ ತಲುಪಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಬಳಕೆ ಹೆಚ್ಚಾಗುವ ಮುನ್ನವೇ ಮಾಲಿನ್ಯ ಪ್ರಮಾಣ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ನವೆಂಬರ್ 7ರ ಬೆಳಗ್ಗೆ 8 […]
ದೀಪಾವಳಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್ನಲ್ಲಿ ಸಾಂಪ್ರದಾಯಿಕ ಹಾಗೂ ವಿಶಿಷ್ಟ ರುಚಿಕರ ಸಿಹಿತಿಂಡಿಗಳು ಲಭ್ಯ!

ಹಬ್ಬದ ಸಂಭ್ರಮಕ್ಕೆ ಸಿಹಿಯ ಸಾಥ್ ಇದ್ದರೆ ಅದರ ಖುಷಿಯೇ ಬೇರೆ. ಅದರಲ್ಲೂ ಶುದ್ಧ ತುಪ್ಪದ ಘಮ, ಡ್ರೈಫ್ರೂಟ್ಸ್ನ ಸಮೃದ್ಧ ರುಚಿ ಬೆರೆತ ಸಿಹಿತಿಂಡಿಗಳ ಸವಿಯಂತೂ ಮರೆಯಲಾಗದು. ಇಂತಹ ಬಾಯಲ್ಲಿ ನೀರೂರಿಸುವ ಬಗೆಬಗೆಯ ಸಿಹಿತಿಂಡಿಗಳ ವಿಶೇಷ ಸಂಗ್ರಹ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್, ಕೇಕ್ಸ್ ಮತ್ತು ಬೇಕರಿಯಲ್ಲಿ ಈ ದೀಪಾವಳಿಗಾಗಿ ಸಿದ್ಧವಾಗಿದೆ. ಸಿಹಿಪ್ರಿಯರಿಗಾಗಿ ರುಚಿಯ ಲೋಕ!ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಹಿಡಿದು ಆಕರ್ಷಕ ವಿನ್ಯಾಸದ ವಿಶೇಷ ಸಿಹಿ ತಿನಿಸುಗಳವರೆಗೆ ಇಲ್ಲಿ ವೈವಿಧ್ಯಮಯ ಆಯ್ಕೆಗಳಿವೆ. ಶುದ್ಧ ತುಪ್ಪ ಹಾಗೂ ಗುಣಮಟ್ಟದ ಡ್ರೈಫ್ರೂಟ್ಸ್ ಬಳಸಿ […]
ಡ್ರೋನ್ ಪೈಲಟ್ ಆಗುವ ಕನಸನ್ನು ನನಸು ಮಾಡುತ್ತೆ ಮಣಿಪಾಲದ ಎಂಎಸ್ಡಿಸಿಯ ಈ ಡ್ರೋನ್ ತರಬೇತಿ: ಶೇ.40 ರಷ್ಟು ರಿಯಾಯಿತಿಯೊಂದಿಗೆ ಕೋರ್ಸ್ ಕಲಿಯಿರಿ

ಮಣಿಪಾಲ: ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವಿಶೇಷ ಅವಕಾಶ ಕಲ್ಪಿಸಿದೆ. ಡಿಜಿಸಿಎ (DGCA) ಅನುಮೋದಿತ ರಿಮೋಟ್ ಪೈಲಟ್ ತರಬೇತಿ ಕೋರ್ಸ್ಗೆ ಹಬ್ಬದ ಪ್ರಯುಕ್ತ ಮೂಲ ಶುಲ್ಕದಲ್ಲಿ ಶೇ.40ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ 5ರಿಂದ 6 ದಿನಗಳ ತೀವ್ರ ತರಬೇತಿ ನೀಡಲಾಗುತ್ತದೆ. ನೈಜ ಡ್ರೋನ್ ಹಾರಾಟದ ಅನುಭವ, ಫ್ಲೈಟ್ ಟ್ರೈನಿಂಗ್ ಸಿಮ್ಯುಲೇಶನ್, ಡಿಜಿಸಿಎ ನಿಯಮಗಳು ಹಾಗೂ ಸುರಕ್ಷತಾ ಮಾರ್ಗಸೂಚಿಗಳ ಕುರಿತು ಪ್ರಾಯೋಗಿಕ ಮತ್ತು ಸೈದ್ಧಾಂತಿಕ ತರಬೇತಿ […]