ಜನಸಾಮಾನ್ಯರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ: ನಿಕಟಪೂರ್ವ ಜನಪ್ರತಿನಿಧಿಗಳಿಗೆ ಶಾಸಕ ಯಶಪಾಲ್ ಸುವರ್ಣ ಸೂಚನೆ

ಉಡುಪಿ: ಪಂಚಾಯತ್ ತಾಲೂಕು ಪಂಚಾಯತ್ ಮುಂತಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಲವಾರು ವರ್ಷಗಳಿಂದ ಬಾಕಿಯಾಗಿದ್ದು ಆಡಳಿತ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ಆಡಳಿತಾತ್ಮಕ ವ್ಯವಸ್ಥೆಗೆ ರೋಸಿ ಹೋಗಿದ್ದಾರೆ. ನಿಕಟ ಪೂರ್ವ ಜನಪ್ರತಿನಿಧಿಗಳು ಮತ್ತು ವಾರ್ಡಿಗೆ ಸಂಬಂಧಪಟ್ಟ ಪಕ್ಷದ ಪ್ರಮುಖರು ಜನಸಾಮಾನ್ಯರ ಜೊತೆ ನಿಕಟ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಿರಂತರ ಶ್ರಮ ವಹಿಸಬೇಕೆಂದು ಶಾಸಕರಾದ ಯಶಪಾಲ್ ಸುವರ್ಣ ರವರು ಕರೆ ನೀಡಿದ್ದಾರೆ. ಅವರು ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿ ಇದೇ ತಿಂಗಳ 28 ನೇ ತಾರೀಖಿನಂದು […]

ಉಡುಪಿ: ಗಾಜಿನ ಕಾರ್ಖಾನೆಯಲ್ಲಿ ಅವಘಡ; ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

ಉಡುಪಿ: ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಇಳಿಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ರಿಕ್ಷಾ ಚಾಲಕ ಸುನಿಲ್ ಬೈಲಕೆರೆ (45) ಮೃತಪಟ್ಟಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್ ಅವರು ಶಿರೂರು ಮಠದ ದಿವಂಗತ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಉಡುಪಿ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರು, ಸಾರ್ವಜನಿಕರ ನೆರವಿಗೆ ಧಾವಿಸುತ್ತಿದ್ದರು. ಕಲ್ಸಂಕ ಜಂಕ್ಷನ್‌ನಲ್ಲಿ ವಾಹನ […]

ಆನ್‌ಲೈನ್‌ನಲ್ಲಿ ಖರೀದಿಸಿದ ಮೊಸರು ಪ್ಯಾಕೆಟ್ ಸೋರಿಕೆ, ಹಣ ರಿಫಂಡ್ ಮಾಡಿ ಎಂದು ಕೇಳಿದ ಗೃಹಿಣಿಗೆ ರೂ. 98 ಸಾವಿರ ವಂಚನೆ ಮಾಡಿದರು ಸೈಬರ್ ಕಳ್ಳರು!

ಬೆಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ ಮೊಸರು ಪ್ಯಾಕೆಟ್ ಸೋರಿಕೆಯಾಗಿದ್ದಕ್ಕೆ ಹಣ ವಾಪಸ್ ಪಡೆಯಲು ಮುಂದಾದ ಗೃಹಿಣಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹98 ಸಾವಿರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ನಗರದ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (ಸೆನ್) ಪ್ರಕರಣ ದಾಖಲಾಗಿದೆ. ವಸಂತ ನಗರದ 56 ವರ್ಷದ ಗೃಹಿಣಿಯೊಬ್ಬರು ಅಕ್ಟೋಬರ್ 17ರಂದು ಬ್ಲಿಂಕಿಟ್ ಮೂಲಕ ಮೊಸರು ಆರ್ಡರ್ ಮಾಡಿದ್ದರು. ಡೆಲಿವರಿ ಪಡೆದ ಬಳಿಕ ಪ್ಯಾಕೆಟ್ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ದೂರು […]

ಇಸ್ರೇಲ್‌ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಕುಟುಂಬಸ್ಥರಿಂದ ರಾಯಭಾರ ಕಚೇರಿಗೆ ಮನವಿ

ಮಂಗಳೂರು: ಉದ್ಯೋಗ ವೀಸಾದಡಿ ಉತ್ತಮ ಭವಿಷ್ಯದ ನಿರೀಕ್ಷೆಯೊಂದಿಗೆ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ಸಲ್ಲಿಸಿ ಪತ್ತೆ ಕಾರ್ಯ ಚುರುಕುಗೊಳಿಸುವಂತೆ ಮನವಿ ಮಾಡಿದ್ದಾರೆ. ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದವರು. ಅವರು ಮಂಗಳೂರಿನ ನೇಮಕಾತಿ […]

ಉಡುಪಿಯ ಬಲ್ಲಾಳ್ ಮೊಬೈಲ್ಸ್‌ನಲ್ಲಿದೆ ಮೆಗಾ ಫೆಸ್ಟಿವಲ್ ಆಫರ್ಸ್, ರೂ. 25 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನ ಗೆಲ್ಲಬೇಕಾ? ಹಾಗಾದ್ರೆ ಈ ಅವಕಾಶ ಮಿಸ್ ಮಾಡ್ಬೇಡಿ

ಉಡುಪಿ: ಹಬ್ಬದ ಸಂಭ್ರಮಕ್ಕೆ ಶಾಪಿಂಗ್‌ನ ಖುಷಿ, ಖರೀದಿಗೆ ಭರ್ಜರಿ ಬಹುಮಾನಗಳ ಆಕರ್ಷಣೆ! ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆಯು ಗ್ರಾಹಕರಿಗಾಗಿ ‘ಮೆಗಾ ಫೆಸ್ಟಿವಲ್ ಆಫರ್ಸ್’ ಅಭಿಯಾನವನ್ನು ಆರಂಭಿಸಿದ್ದು, ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಿದೆ. ಈ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 12ರಂದು ನಡೆಯಿತು. Shop More, Win More – ಹೆಚ್ಚು ಖರೀದಿಸಿ, ಹೆಚ್ಚಿನದನ್ನು ಗೆಲ್ಲಿರಿ! ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯುವ ಈ ವಿಶೇಷ ಅಭಿಯಾನದಲ್ಲಿ ಗ್ರಾಹಕರು […]